ರೈಲ್ವೆ ಸಪ್ತಾಹ: ಸೇವಾ ಶ್ರೇಷ್ಠತೆ ಮೆರೆದವರಿಗೆ ಪ್ರಶಸ್ತಿ, ಪ್ರಶಂಸನಾ ಫಲಕ
ಮೈಸೂರು

ರೈಲ್ವೆ ಸಪ್ತಾಹ: ಸೇವಾ ಶ್ರೇಷ್ಠತೆ ಮೆರೆದವರಿಗೆ ಪ್ರಶಸ್ತಿ, ಪ್ರಶಂಸನಾ ಫಲಕ

January 18, 2023

ಮೈಸೂರು, ಜ.17 (ಎಂಕೆ)- ನಗರದ ಮಾನಂದ ವಾಡಿ ರಸ್ತೆಯಲ್ಲಿರುವ ಎನ್‍ಐಇ ಡೈಮಂಡ್ ಜುಬಿಲಿ ಸಭಾಂಗಣದಲ್ಲಿ ನೈರುತ್ಯ ರೈಲ್ವೆ ಕೇಂದ್ರಿಯ ಕಾರ್ಯಾಗಾರ, ಮೈಸೂರು ದಕ್ಷಿಣ ವಿಭಾಗದ ವತಿಯಿಂದ ‘66 ಮತ್ತು 67ನೇ ರೈಲ್ವೆ ಸಪ್ತಾಹ’ ಸಮಾರಂಭ ನಡೆಯಿತು.

ಈ ವೇಳೆ ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ದಾಖಲೆಗಳ ನಿರ್ವಹಣೆ, ಸ್ವಚ್ಛತೆ ಹಾಗೂ ಸುರಕ್ಷತಾ ವಿಭಾಗಕ್ಕೆ ಪ್ರಶಸ್ತಿ ಫಲಕ ನೀಡಿ, ಅಭಿನಂದಿಸಲಾಯಿತು. ಅಲ್ಲದೆ ಅತ್ಯುತ್ತಮ ಸೇವೆ ಸಲ್ಲಿಸಿದ ರೈಲ್ವೆ ಅಧಿಕಾರಿ, ಸಿಬ್ಬಂದಿಗಳನ್ನು ಪ್ರಶಂಸನಾ ಪತ್ರ ನೀಡಿ, ಗೌರವಿಸಲಾಯಿತು.

ಬಳಿಕ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನೈರುತ್ಯ ರೈಲ್ವೆ ಮೈಸೂರು ಕೇಂದ್ರಿಯ ಕಾರ್ಯಾಗಾರದ ಮುಖ್ಯ ಕಾರ್ಯಾಗಾರ ವ್ಯವ ಸ್ಥಾಪಕ ಓಂ ಪ್ರಕಾಶ್ ಶಾ(ಓಪಿಶಾ), ಕೊರೊನಾ ಸಂದರ್ಭದಲ್ಲಿ ಎದುರಾದ ನಿರ್ಬಂಧಗಳ ನಡು ವೆಯೂ ತಂಡವಾಗಿ ಉತ್ತಮ ಕೆಲಸ ಮಾಡಿರು ವುದಲ್ಲದೆ, ಕಳೆದ ಎರಡು ವರ್ಷಗಳಲ್ಲಿ ರೈಲ್ವೆ ಮಂಡಳಿಯು ನಿಗದಿಪಡಿಸಿದ ಗುರಿಯನ್ನು ಸಾಧಿಸಿ ದ್ದಕ್ಕಾಗಿ ಎಲ್ಲಾ ಸಿಬ್ಬಂದಿ, ಮೇಲ್ವಿಚಾರಕರು ಮತ್ತು ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.

ನಾವು ಸವಾಲುಗಳನ್ನು ಅವಕಾಶಗಳೆಂದು ಪರಿ ಗಣಿಸಿ ಎದುರಿಸುವ ಪ್ರಯತ್ನ ಮಾಡಬೇಕು. ಮೈಸೂರು ಕಾರ್ಯಾಗಾರವು ತನ್ನ ಕಾರ್ಯಕ್ಷೇತ್ರದಲ್ಲಿ ಇತರ ರೈಲ್ವೆ ಕಾರ್ಯಾಗಾರಗಳಿಗೆ ಮಾದರಿಯಾಗಿದೆ. ಮೈಸೂರು ಕಾರ್ಯಾಗಾರವು ಪ್ರಧಾನ ಕಚೇರಿ ಯಿಂದ ನಿಯೋಜಿಸಲಾದ ಯಾವುದೇ ಸವಾಲಿನ ಕೆಲಸವನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ. ನಿರೀಕ್ಷೆ ಗಳನ್ನು ಪೂರೈಸುವಲ್ಲಿ, ಸಮಂಜಸವಾದ ಗುಣಮಟ್ಟ ದೊಂದಿಗೆ ಗುರಿಗಳನ್ನು ಸಾಧಿಸುವಲ್ಲಿ ನಾವು ಎಂದಿಗೂ ಸಫಲರಾಗಿದ್ದೇವೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರಲ್ಲದೆ ಕೆಲಸದ ಸ್ಥಳದಲ್ಲಿ ಸುರಕ್ಷತೆಯ ಕಡೆಗೆ ನಮ್ಮ ಪ್ರಾಥಮಿಕ ಗಮನವಿರಬೇಕು. ಮಾರು ಕಟ್ಟೆಗಳಲ್ಲಿ ಸನ್ನಿವೇಶ ಮತ್ತು ಅವಶ್ಯಕತೆಗಳು ಬಹಳ ವೇಗವಾಗಿ ಬದಲಾಗುತ್ತವೆ. ಆದ್ದರಿಂದ ಸಂಪನ್ಮೂಲ ಗಳ ಸದ್ಬಳಕೆಯೊಂದಿಗೆ ಉತ್ಪಾದನೆ ಹೆಚ್ಚಿಸಲು ನವ-ನವೀನ ವಿಧಾನಗಳನ್ನು ಕಂಡುಹಿಡಿಯಬೇಕು ಮತ್ತು ಅಳವಡಿಸಿಕೊಳ್ಳಬೇಕು ಎಂದರು. ನೈರುತ್ಯ ರೈಲ್ವೆ ಕೇಂದ್ರಿಯ ಕಾರ್ಯಾಗಾರದ ಮುಖ್ಯ ಸಿಪಿಓ ಜಿ.ಎಫ್. ರಾಜು, ಸಿಡಬ್ಲೂಎಂ ಕೃಷ್ಣರಾಜ್, ಡಿಇಇ ರವಿಶಂಕರ್, ಎಡಬ್ಲೂಎಂ ಬಿ.ಶಶಿಕುಮಾರನ್ ನಾಯರ್, ಎಎಫ್‍ಎಂ ಸುಬ್ರಮಣಿಯನ್, ಸಿನಿಯರ್ ಸೆಕ್ಷನ್ ಇಂಜಿನಿಯರ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Translate »