ಏಪ್ರಿಲ್ ಅಂತ್ಯಕ್ಕೆ ಮೈಸೂರಿನ ಯುದ್ಧ ಸ್ಮಾರಕ ಅನಾವರಣ
ಮೈಸೂರು

ಏಪ್ರಿಲ್ ಅಂತ್ಯಕ್ಕೆ ಮೈಸೂರಿನ ಯುದ್ಧ ಸ್ಮಾರಕ ಅನಾವರಣ

January 18, 2023

ಮೈಸೂರು,ಜ.17-ಮೈಸೂರಿನ ಜಿಲ್ಲಾ ಧಿಕಾರಿ ಕಚೇರಿ ಬಳಿ ಎನ್‍ಸಿಸಿ ಮೈದಾನ ದಲ್ಲಿ ನಿರ್ಮಿಸುತ್ತಿರುವ `ಯುದ್ಧ ಸ್ಮಾರಕ’ ಕಾಮಗಾರಿ ಭರದಿಂದ ಸಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಸ್ಮಾರಕಕ್ಕೆ ಬಳಸುವ ಸ್ಲಾಬ್‍ಗಳಿಗೆ ಪಾಲಿಶ್ ಮಾಡುವ ಕಾರ್ಯವನ್ನು ಈ ವಾರ ಆರಂಭಿಸಲು ಉದ್ದೇಶಿಸಲಾಗಿದೆ.

ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣ 23 ವರ್ಷದ ಮಹಾ ಕನಸು. ಈಗ ಇದು ನನಸಾಗುವ ಕಾಲ ಸನ್ನಿಹಿತವಾಗಿದೆ. ಭಾರ ತೀಯ ಸೇನೆಯ ಮೂರು ವಿಭಾಗಕ್ಕೂ ಗೌರವ ಸಲ್ಲಿಸುವ ಮಹದುದ್ದೇಶ ಯುದ್ಧ ಸ್ಮಾರಕದಿಂದ ಸಾರ್ಥಕವಾಗಲಿದೆ. ಜಿಲ್ಲಾಧಿ ಕಾರಿ ಕಚೇರಿ ಸಮೀಪದ 4.27 ಎಕರೆಯ ಎನ್‍ಸಿಸಿ ಪರೇಡ್ ಮೈದಾನದಲ್ಲಿ 4 ಚದರ ಅಡಿ ಅಳತೆಯಲ್ಲಿ ಯುದ್ಧ ಸ್ಮಾರಕ ನಿರ್ಮಿ ಸಲಾಗುತ್ತಿದ್ದು, ಸ್ಮಾರಕದ ಬೇಸ್ಮೆಂಟ್ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದೆ. ಕ್ಯೂರಿಂಗ್ ಆದ ಬಳಿಕ ಅದರ ಮೇಲೆ ಭಾರೀ ಗಾತ್ರದ ಉತ್ಕøಷ್ಟ ಕಲ್ಲುಗಳ ಸ್ಲಾಬ್ ಜೋಡಣೆ ಮಾಡಲಾಗುತ್ತದೆ. ಕೆಲವೇ ದಿನಗಳಲ್ಲಿ ಅಂತಿಮ ರೂಪ ಪಡೆಯುವ ಯುದ್ಧ ಸ್ಮಾರಕ ಏಪ್ರಿಲ್ ಅಂತ್ಯದ ವೇಳೆಗೆ ಉದ್ಘಾಟನೆಗೆ ಸಜ್ಜಾಗಲಿದೆ.

ಕಲ್ಲಿನ ಸ್ಲ್ಯಾಬ್‍ಗೆ ಪಾಲಿಶ್: ಯುದ್ಧ ಸ್ಮಾರಕ ಕಾರ್ಯ ಕಾಂಕ್ರೀಟೀಕರಣಕ್ಕೆ ಸೀಮಿತ ಗೊಳಿಸದೆ ಸುಂದರವಾಗಿಸಲು ಕರಿಕಲ್ಲಿನ ಸ್ಲ್ಯಾಬ್ ಬಳಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಈ ಹಿಂದೆ ಚಾಮರಾಜನಗರದ ಎಡಿಸಿಯಾಗಿದ್ದ ಹಿರಿಯ ಕೆಎಎಸ್ ಅಧಿಕಾರಿ ಸಿ.ಎಲ್.ಆನಂದ್ ಕೋರಿಕೆ ಮೇರೆಗೆ ಚಾಮರಾಜನಗರ ಜಿಲ್ಲೆಯ ಕ್ವಾರಿ ಮಾಲೀಕ ರಾದ ಹೆಚ್.ಎಂ.ಪುಟ್ಟಮಾದಯ್ಯ ಬಿನ್ ಪಟೇಲ್ ಮಾದಪ್ಪ (82), 33 ಕ್ಯೂಬಿಕ್ ಮೀಟರ್ ಕಪ್ಪು ಶಿಲೆ(ಉತ್ಕøಷ್ಟ ಕಲ್ಲು) ಯನ್ನು ಸರ್ಕಾರಕ್ಕೆ ರಾಜಧನ ಹಾಗೂ ವಿವಿಧ ಶುಲ್ಕ ತಾವೇ ಪಾವತಿಸಿ, ಸ್ಮಾರಕ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು. ಅಲ್ಲದೆ ಕ್ವಾರಿಯಿಂದ 300 ಟನ್ ತೂಕದ ಕಚ್ಛಾ ಶಿಲೆಯನ್ನು ಚಾಮರಾಜನಗರದ ಎಸ್‍ವಿಜಿ ಗ್ರಾನೈಟ್ಸ್ ಮಾಲೀಕ ಎ.ಶ್ರೀನಾಥ್ ಬಿನ್ ಶಿವಶಂಕರ್‍ರೆಡ್ಡಿ ಯಾವುದೇ ಶುಲ್ಕ ಪಡೆ ಯದೇ ಸ್ಮಾರಕ ನಿರ್ಮಾಣಕ್ಕೆ ಅನುಗುಣ ವಾಗಿ ಕತ್ತರಿಸಿಕೊಟ್ಟಿದ್ದರು. ಭಾರೀ ಗಾತ್ರದ 6 ಕಲ್ಲಿನ ಸ್ಲಾಬ್‍ಗಳ ವರ್ಷದ ಹಿಂದೆಯೇ ಉದ್ದೇಶಿತ ಸ್ಮಾರಕ ನಿರ್ಮಾಣದ ಸ್ಥಳಕ್ಕೆ ತಂದು ಸುರಕ್ಷಿತವಾಗಿಡಲಾಗಿತ್ತು. ಇದೀಗ ಸ್ಮಾರಕ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವುದರಿಂದ ಕಲ್ಲಿನ ಸ್ಲಾಬ್‍ಗಳಿಗೆ ಪಾಲಿಶ್ ಮಾಡಬೇಕಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಈ ಕಾರ್ಯ ವಹಿಸಲಾಗಿದ್ದು, ಈ ವಾರದಲ್ಲಿ ಪಾಲಿಶ್ ಮಾಡುವ ಕಾಮಗಾರಿ ಆರಂಭ ವಾಗುವ ನಿರೀಕ್ಷೆಯಿದೆ.

ಚೌಕಾಕಾರ: ಸ್ಮಾರಕ ಚೌಕಾಕಾರವಿದ್ದು, ಸ್ಲ್ಯಾಬ್‍ಗಳು 4 ಮುಖ ಹೊಂದಿದ್ದು, ಎಲ್ಲಾ ಕಡೆಯೂ ಭಾರತೀಯ ಭೂಸೇನೆ, ವಾಯು ಸೇನೆ, ನೌಕಾಸೇನೆ ಅತ್ಯಮೂಲ್ಯ ಮಾಹಿತಿ ಕೆತ್ತಲಾಗುತ್ತದೆ. ಅಲ್ಲದೆ, ಮತ್ತೊಂದು ಭಾಗ ದಲ್ಲಿ ಭಾರತೀಯ ಸೇನೆಯ ಲಾಂಛನ ರೂಪಿಸ ಲಾಗುತ್ತದೆ. ಸ್ಮಾರಕದ 4 ಭಾಗಗಳಲ್ಲಿ ಭಾರ ತೀಯ ಸೇನೆಯ ಮಾಹಿತಿ ಲಭ್ಯವಾಗ ಲಿದೆ. ಸ್ಮಾರಕದ ಮೇಲೆ ಕೆತ್ತನೆ ಮಾಡಿದ ನಂತರ ಅಮೇರಿಕನ್ ವೈಟ್ ಪೇಂಟ್ ನಿಂದ ಮಾಹಿತಿ ನಮೂದಿಸಲಾಗುತ್ತದೆ. ಇದರಿಂದ ಕೆತ್ತನೆ ಮಾಡಿದ ಅಕ್ಷರಗಳು ಶಾಶ್ವತವಾಗಿರುವ ವ್ಯವಸ್ಥೆ ಮಾಡಲಾಗುತ್ತಿದೆ.

ಅಶೋಕ ಸ್ತಂಭ: ಸ್ಮಾರಕದ ಮೇಲ್ಭಾಗ ದಲ್ಲಿ 7 ಅಡಿ ಎತ್ತರದ ಅಶೋಕ ಸ್ತಂಭ ವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಸಿಂಹದ 4 ತಲೆ ಇರುವ ಅಶೋಕ ಸ್ತಂಭವನ್ನು ದಾನಿಯೊಬ್ಬರು ಈಗಾಗಲೇ ಕೊಡುಗೆ ನೀಡಿದ್ದಾರೆ. ಈ ಅಶೋಕ ಸ್ತಂಭವೂ ಸಿದ್ಧ ಗೊಂಡಿದೆ. ಇದರಿಂದ ಯುದ್ಧ ಸ್ಮಾರಕದ ಎತ್ತರ 43 ಅಡಿಗೆ ತಲುಪಲಿದೆ.
ಸ್ಮಾರಕದಲ್ಲಿ ಯುದ್ಧ ಪರಿಕರ: ಪಾರಂ ಪರಿಕ ಶೈಲಿಯಲ್ಲಿಯೇ ಸ್ಮಾರಕ ನಿರ್ಮಾಣ ವಾಗಲಿದ್ದು, ಭೂ ಸೇನೆ, ವಾಯುಸೇನೆ, ನೌಕಾದಳದ ಮಹತ್ವ ಸಾರುವ ಯುದ್ಧ ಟ್ಯಾಂಕರ್‍ಗಳು, ಯುದ್ಧ ವಿಮಾನಗಳು, ನೌಕೆ, ಗನ್ ಸೇರಿದಂತೆ ಯುದ್ಧದಲ್ಲಿ ಬಳ ಸುವ ಪರಿಕರಗಳನ್ನು ಪ್ರದರ್ಶನಕ್ಕಿಡಲು ನಿರ್ಧರಿಸಿದ್ದು, ಇದಕ್ಕಾಗಿ ಬಳಸಲ್ಪಟ್ಟ ಯುದ್ಧ ಪರಿಕರ ನೀಡಲು ಸೇನೆ ಸಮ್ಮತಿಸಿದೆ.

Translate »