ಮೈಸೂರು ಭಾಗದಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ
ಮೈಸೂರು

ಮೈಸೂರು ಭಾಗದಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ

January 7, 2021

ಮೈಸೂರು, ಜ.6(ಆರ್‍ಕೆಬಿ)-ಮೈಸೂರು, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಗುರುವಾರ (ಜ.7)ರಂದು ಮೈಸೂರು, ಕೊಡಗು, ಮಂಡ್ಯ ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕೊಡಗು ಜಿಲ್ಲೆಯಲ್ಲಿ 15 ಮಿಮೀ, ಮೈಸೂರು, ಮಂಡ್ಯ, ಚಾ.ನಗರ ಜಿಲ್ಲೆಗಳಲ್ಲಿ ತಲಾ 5 ಮಿ.ಮೀ. ಮಳೆಯಾಗುವ ಸಾಧ್ಯತೆಗಳಿವೆ ಎಂದು ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ತಾಪಮಾನದಲ್ಲಿ ಏರಿಕೆ ಇರಲಿದ್ದು, ಕೊಡಗಿನಲ್ಲಿ ಗರಿಷ್ಠ 28-29 ಡಿ.ಸೆ., ಕನಿಷ್ಠ 17-18 ಡಿ.ಸೆ., ಮೈಸೂರಿನಲ್ಲಿ ಗರಿಷ್ಠ 30-32 ಡಿ.ಸೆ., ಕನಿಷ್ಠ 19-20 ಡಿ.ಸೆ., ಮಂಡ್ಯದಲ್ಲಿ ಗರಿಷ್ಠ 25-27 ಡಿ.ಸೆ., ಕನಿಷ್ಠ 18.19 ಡಿ.ಸೆ. ಹಾಗೂ ಚಾ.ನಗರದಲ್ಲಿ ಗರಿಷ್ಠ 30-32 ಡಿ.ಸೆ., ಕನಿಷ್ಠ 19.20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದ್ದಾರೆ.

Translate »