ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಲ್ದೂರು ರಾಜಶೇಖರ್ ಆಯ್ಕೆ
ಮೈಸೂರು

ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಲ್ದೂರು ರಾಜಶೇಖರ್ ಆಯ್ಕೆ

October 23, 2018

ಚಾಮರಾಜನಗರ:  ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗ ನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ನಗರದ ಎಪಿಎಂಸಿ ಮಾಜಿ ಅಧ್ಯಕ್ಷ ಆಲ್ದೂರು ಸಿ. ರಾಜ ಶೇಖರ ಆಯ್ಕೆ ಆಗಿದ್ದಾರೆ.

ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಪ್ರಥಮ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆ ಯಿತು. ಬಿಳಿಗಿರಿರಂಗನಾಥಸ್ವಾಮಿ ದೇವ ಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಗಿ ಸರ್ಕಾರ ಆಲ್ದೂರು ಸಿ. ರಾಜಶೇಖರ್, ಕಂದಹಳ್ಳಿ ಮಹೇಶ್, ಮರಿಸ್ವಾಮಿ, ಶಿವಮ್ಮ, ಪದ್ಮಚಂದ್ರು, ಅರ್ಚಕ ರವಿ, ತಿಮ್ಮರಾಜಿ ಪುರ ರಾಜು ಅವರನ್ನು ನೇಮಿಸಿತ್ತು. ಈ ಸಮಿತಿಯ ಸಭೆಯಲ್ಲಿ ರಾಜಶೇಖರ್ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧ ವಾಗಿ ಆಯ್ಕೆ ಮಾಡಲಾಯಿತು.

ಇವರ ಅಧಿಕಾರಾವಧಿ 3 ವರ್ಷಗಳಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್‍ಪ್ರಸಾದ್ ತಿಳಿಸಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಆಲ್ದೂರು ರಾಜಶೇಖರ್, ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನವು ಇತಿಹಾಸ ಪ್ರಸಿದ್ಧ ಹೊಂದಿದೆ. ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪ್ರಗತಿಯಲ್ಲಿ ಇದೆ. ಈ ಕಾಮಗಾರಿಯನ್ನು ಚುರುಕುಗೊಳಿ ಸಲು ಆದ್ಯತೆ ನೀಡುವುದಾಗಿ ಹೇಳಿದರು.

ಕ್ಷೇತ್ರದ ಶಾಸಕ ಎನ್. ಮಹೇಶ್, ಸಂಸದ ಆರ್. ಧ್ರುವನಾರಾಯಣ್, ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಹಾಗೂ ಸಮಿತಿಯ ಎಲ್ಲಾ ಸದಸ್ಯರ ಸಹಕಾರ ದೊಂದಿಗೆ ದೇವ ಸ್ಥಾನದ ಪ್ರಗತಿಗೆ ಶ್ರಮಿಸುತ್ತೇನೆ. ಭಕ್ತಾದಿ ಗಳಿಗೆ ಮತ್ತಷ್ಟು ಮೂಲಭೂತ ಸೌಕರ್ಯ ಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಅಧ್ಯಕ್ಷರಾಗಿ ಆಯ್ಕೆಯಾದ ರಾಜಶೇಖರ್ ಅವರನ್ನು ಎಲ್ಲಾ ಸದಸ್ಯರು ಹಾಗೂ ಜಿಪಂ ಉಪಾಧ್ಯಕ್ಷ ಜೆ. ಯೋಗೇಶ್, ಚಾಮರಾಜ ನಗರದ ಎಪಿಎಂಸಿ ಅಧ್ಯಕ್ಷ ಶಂಕರಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಹೆಚ್.ವಿ. ಚಂದ್ರು, ಮುಖಂಡರಾದ ಬಿಎಂಕೆ ಹುಂಡಿ ಮಹದೇವು, ಬೂದಂಬಳ್ಳಿ ಶಂಕರ್, ಮಲ್ಲಯ್ಯ, ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟೇಶ್‍ಪ್ರಸಾದ್ ಹಾಗೂ ಇತರರು ಅಭಿನಂದಿಸಿದರು.

Translate »