ಮೈಸೂರಲ್ಲಿ ದಾಖಲೆಯ 2042 ಜನರಿಗೆ ಸೋಂಕು
ಮೈಸೂರು

ಮೈಸೂರಲ್ಲಿ ದಾಖಲೆಯ 2042 ಜನರಿಗೆ ಸೋಂಕು

April 28, 2021

ಮೈಸೂರು, ಏ.27(ಎಸ್‍ಬಿಡಿ)- ಮೈಸೂರು ಜಿಲ್ಲೆ ಯಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರಿ ವ್ಯಾಪಿಸುತ್ತಿದ್ದು, ಮಂಗಳವಾರ 2 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾಗಿವೆ.

ಮೈಸೂರು ನಗರದಲ್ಲಿ 1,151, ತಿ.ನರಸೀ ಪುರ 222, ಮೈಸೂರು ತಾಲೂಕು 179, ನಂಜನಗೂಡು 155, ಕೆ.ಆರ್.ನಗರ 107, ಹೆಚ್.ಡಿ.ಕೋಟೆ 97, ಹುಣಸೂರು 81 ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ 50 ಪ್ರಕರಣ ಸೇರಿ ಮಂಗಳವಾರ ಜಿಲ್ಲೆ ಯಲ್ಲಿ 2042 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ 1573 ಜನ ಸೋಂಕಿ ತರ ಸಂಪರ್ಕಿತರಾಗಿದ್ದು, ವಿಷಮ ಶೀತ ಜ್ವರವುಳ್ಳ 449 ಹಾಗೂ ಉಸಿರಾಟದ ಸಮಸ್ಯೆಯಿದ್ದ 20 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕು ವಕ್ಕರಿಸಿದ ದಿನದಿಂದ ಇಲ್ಲಿಯವರೆಗೆ ಇಂದು ಅತೀ ಹೆಚ್ಚು ಪ್ರಕರಣ ದಾಖಲಾಗಿವೆ. ಇಲ್ಲಿಯ ವರೆಗೆ ಎಂದೂ

ಕೂಡ ಸೋಂಕಿತರ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿರಲಿಲ್ಲ.
9 ಸೋಂಕಿತರ ಸಾವು: ಮೈಸೂರಿನಲ್ಲಿ 24 ವರ್ಷದ ಯುವತಿ, 50, 53 ವರ್ಷದ ಮಹಿಳೆಯರು, 44, 55, 56, 63, 73 ಹಾಗೂ 80 ವರ್ಷದ ವೃದ್ಧ ಸೇರಿ ಮತ್ತೆ 9 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇವರೆಲ್ಲರಿಗೂ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಇತ್ತು ಎಂದು ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,169ಕ್ಕೆ ಹೆಚ್ಚಿದೆ.
679 ಮಂದಿ ಗುಣಮುಖ: ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ನಡುವೆ ಶುಶ್ರೂಷೆ ಪಡೆದು ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಸಮಾಧಾನದ ಸಂಗತಿ. ಅಂತೆಯೇ ಮಂಗಳವಾರ 679 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ ಒಟ್ಟು ಸೋಂಕು ಬಾಧಿತರ(70,297)ರಲ್ಲಿ 61,880 ಮಂದಿ ಹೋಂ ಐಸೊಲೇಷನ್, ಆಸ್ಪತ್ರೆ ಇನ್ನಿತರ ನಿಗಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.

7248 ಸಕ್ರಿಯ ಪ್ರಕರಣ: ಗುಣಮುಖರಾದವರು ಹಾಗೂ ಸಾವಿನ ಸಂಖ್ಯೆ ಹೊರತುಪಡಿಸಿ ಇನ್ನು 7,248 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ ರೋಗ ಲಕ್ಷಣಗಳಿಲ್ಲ ಹಾಗೂ ಸಾಧಾರಣ ಲಕ್ಷಣಗಳಿರುವ 2,440 ಸೋಂಕಿತರು ತಮ್ಮ ಮನೆಗಳಲ್ಲೇ ಪ್ರತ್ಯೇಕವಾಗಿದ್ದುಕೊಂಡು ವೈದ್ಯರ ಸಲಹೆಯಂತೆ ಶುಶ್ರೂಷೆ ಪಡೆಯುತ್ತಿದ್ದಾರೆ. ಮಂಡಕಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ 475 ಜನ, ಸರ್ಕಾರಿ ಆಸ್ಪತ್ರೆಗಳಲ್ಲಿ 505, ಹೆಲ್ತ್ ಕೇರ್ ಸೆಂಟರ್‍ನಲ್ಲಿ 144, ಖಾಸಗಿ ಆಸ್ಪತ್ರೆಗಳಲ್ಲಿ 2,157 ಹಾಗೂ ಹೆಲ್ತ್ ಕೇರ್ ಸೆಂಟರ್‍ಗಳಲ್ಲಿ 1,527 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದ ವಿವರ: ಬಾಗಲಕೋಟೆ 283, ಬಳ್ಳಾರಿ 907, ಬೆಳಗಾವಿ 219, ಬೆಂಗಳೂರು ಗ್ರಾಮಾಂತರ 599, ಬೆಂಗಳೂರು ನಗರ 17,550, ಬೀದರ್ 328, ಚಾಮರಾಜನಗರ 212, ಚಿಕ್ಕಬಳ್ಳಾಪುರ 544, ಚಿಕ್ಕಮಗಳೂರು 275, ಚಿತ್ರದುರ್ಗ 145, ದಕ್ಷಿಣಕನ್ನಡ 486, ದಾವಣಗೆರೆ 300, ಧಾರವಾಡ 423, ಗದಗ 119, ಹಾಸನ 503, ಹಾವೇರಿ 99, ಕಲಬುರಗಿ 772, ಕೊಡಗು 373, ಕೋಲಾರ 548, ಕೊಪ್ಪಳ 382, ಮಂಡ್ಯ 737, ಮೈಸೂರು 2,042, ರಾಯಚೂರು 736, ರಾಮನಗರ 169, ಶಿವಮೊಗ್ಗ 256, ತುಮಕೂರು 1,196, ಉಡುಪಿ 477, ಉತ್ತರಕನ್ನಡ 205, ವಿಜಯಪುರ 531 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 414 ಸೇರಿ ರಾಜ್ಯದಲ್ಲಿಂದು 31,830 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 14,00,775ಕ್ಕೆ ಏರಿಕೆಯಾಗಿದೆ. ಇದರ ನಡುವೆ ಇಂದು 10,793 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ ಒಟ್ಟು 10,84,050 ಜನ ಸೋಂಕುಮುಕ್ತರಾಗಿದ್ದಾರೆ. ಸೋಂಕಿನಿಂದ ಮತ್ತೆ 180 ಮಂದಿ ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 14,807ಕ್ಕೆ ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ 3,01,899ಕ್ಕೆ ಏರಿಕೆಯಾಗಿದೆ.

Translate »