ತೈಲ ತೆರಿಗೆ ತಗ್ಗಿಸಿ, ಕೊರೊನಾ ಚಿಕಿತ್ಸೆ ವೆಚ್ಚ ಭರಿಸಿ: ಎಸ್‍ಯುಸಿಐ ಆಗ್ರಹ
ಮೈಸೂರು

ತೈಲ ತೆರಿಗೆ ತಗ್ಗಿಸಿ, ಕೊರೊನಾ ಚಿಕಿತ್ಸೆ ವೆಚ್ಚ ಭರಿಸಿ: ಎಸ್‍ಯುಸಿಐ ಆಗ್ರಹ

July 2, 2020

ಮೈಸೂರು, ಜು.1(ಪಿಎಂ)- ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹಾಗೂ ತೆರಿಗೆ ತಗ್ಗಿಸಬೇಕು. ಕೊರೊನಾ ಸೋಂಕಿತರಿಗೆ ಸರ್ಕಾರಿ ವೆಚ್ಚದಲ್ಲೇ ಚಿಕಿತ್ಸೆ ಒದಗಿಸಬೇಕು ಎಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್-ಎಸ್‍ಯುಸಿಐ) ವತಿಯಿಂದ ಬುಧವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರ ಕಳೆದ 20 ದಿನಗಳಿಂದ ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸುತ್ತಲೇ ಇದೆ. ಮೇ 6ರಿಂದ ಈವರೆಗೆ ಪ್ರತಿ ಲೀಟರ್ ಪೆಟ್ರೋಲ್‍ಗೆ 10 ರೂ., ಡೀಸೆಲ್‍ಗೆ 13 ರೂ. ಅಬಕಾರಿ ತೆರಿಗೆ ಹೆಚ್ಚಳ ಮಾಡಿದೆ. ಜನತೆ ರಾಜ್ಯ ಸರ್ಕಾರಕ್ಕೂ ಪೆಟ್ರೋಲ್‍ಗೆ ಶೇ.35 ಹಾಗೂ ಡೀಸೆಲ್‍ಗೆ ಶೇ.24ರಷ್ಟು ತೆರಿಗೆ ಪಾವತಿ ಮಾಡುತ್ತಿದ್ದಾರೆ. ಪೆಟ್ರೋಲ್ ಬೆಲೆ 28 ರೂ. ಮಾತ್ರ. ಆದರೆ ಜನತೆ ನೈಜ ಬೆಲೆಗಿಂತ 3 ಪಟ್ಟು ಹೆಚ್ಚು ಪಾವತಿ ಮಾಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿಯಿಲ್ಲ ಎಂದು ಕೊರೊನಾ ಸೋಂಕು ಪೀಡಿತ ರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿದರೆ ಲಕ್ಷಾಂತರ ರೂ. ವೆಚ್ಚ ಮಾಡುವ ಶಕ್ತಿ ಬಹುತೇಕ ರಿಗೆ ಇಲ್ಲ. ಸರ್ಕಾರವೇ ಚಿಕಿತ್ಸಾ ವೆಚ್ವ ಭರಿಸಬೇಕು ಎಂದು ಒತ್ತಾಯಿಸಿದರು. ಎಸ್‍ಯು ಸಿಐ ರಾಜ್ಯ ಸಮಿತಿ ಸದಸ್ಯ ಎಂ.ಶಶಿಧರ್, ಜಿಲ್ಲಾ ಸಮಿತಿ ಸದಸ್ಯರಾದ ಉಮಾದೇವಿ, ಜಿ.ಎಸ್. ಸೀಮಾ, ಪಿ.ಎಸ್.ಸಂಧ್ಯಾ, ಹೆಚ್.ಎಸ್.ಹರೀಶ್, ಸುನಿಲ್, ಚಂದ್ರಕಲಾ ಮತ್ತಿತರರಿದ್ದರು.

Translate »