ಸಮಾಜ ವಿಜ್ಞಾನ ಪರೀಕ್ಷೆ ಸುಸೂತ್ರ 38,402 ಮಂದಿ ಹಾಜರು, 350 ವಿದ್ಯಾರ್ಥಿ ಗೈರು
ಮೈಸೂರು

ಸಮಾಜ ವಿಜ್ಞಾನ ಪರೀಕ್ಷೆ ಸುಸೂತ್ರ 38,402 ಮಂದಿ ಹಾಜರು, 350 ವಿದ್ಯಾರ್ಥಿ ಗೈರು

July 2, 2020

ಮೈಸೂರು, ಜು.1(ಆರ್‍ಕೆಬಿ)- ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಗಳೊಂದಿಗೆ ಗುರುವಾರ ನಡೆದ ಎಸ್‍ಎಸ್‍ಎಸ್‍ಸಿ ಸಮಾಜ ವಿಜ್ಞಾನ ಪರೀಕ್ಷೆ ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ವಿಲ್ಲದೆ ಯಶಸ್ವಿಯಾಗಿ ನಡೆ ಯಿತು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 38,752 ವಿದ್ಯಾರ್ಥಿಗಳ ಪೈಕಿ 38,402 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 350 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಹೊರ ಜಿಲ್ಲೆಗಳಿಂದ 339 ಮಂದಿ ಪರೀಕ್ಷೆ ಬರೆದರು. ಉಳಿದಂತೆ ಕಂಟೈನ್‍ಮೆಂಟ್ ಜೋನ್‍ನಿಂದ 63 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಜ್ವರ ಮತ್ತು ಕೆಮ್ಮು ಅನಾರೋಗ್ಯ ಕಾರಣದಿಂದ 60 ಮಕ್ಕಳು ಪ್ರತ್ಯೇಕ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದರು. ಖಾಸಗಿ ಯಾಗಿ ನೋಂದಾಯಿಸಿಕೊಂಡಿದ್ದ 742 ಪರೀಕ್ಷಾರ್ಥಿಗಳ ಪೈಕಿ 582 ಮಂದಿ ಹಾಜ ರಾದರೆ, 160 ಮಂದಿ ಗೈರಾದರು. ವಸತಿ ನಿಲಯದಿಂದ 446 ಮಂದಿ ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಕರೆತಂದು ವಾಪಸ್ ಕರೆದೊಯ್ಯವ ಒಪ್ಪಂದದ ಮೇಲೆ 60 ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡುರಂಗ ತಿಳಿಸಿದ್ದಾರೆ.

Translate »