ಮೈಸೂರು, ಅ.31(ಪಿಎಂ)-ಕೃಷಿ ವಿಜ್ಞಾನಿ ವಸಂತಕುಮಾರ್ ತಿಮಕಾಪುರ ಅವರ `ಕೃಷಿ ಲೋಕದೊಳಗೆ’ ಕನ್ನಡ ಕೃತಿ ಹಾಗೂ `ಪ್ಲ್ಯಾಂಟ್ ಡಾಕ್ಟರ್’ ಇಂಗ್ಲಿಷ್ ಕೃತಿ ನ.2ರಂದು ಸಂಜೆ 4ಕ್ಕೆ ಬಿಡುಗಡೆಯಾಗಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮೈಸೂರಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಸಾಪ ಜಿಲ್ಲಾ ಘಟಕ, ಕೃಷಿ ಜ್ಞಾನ ವಿಜ್ಞಾನ ವೇದಿಕೆ ಜಂಟಿ ಆಶ್ರಯದ ಕಾರ್ಯಕ್ರಮ ಮಾನಸ ಗಂಗೋ ತ್ರಿಯ ವಿಜ್ಞಾನ ಭವನದಲ್ಲಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ, ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮಾಜಿ ಶಾಸಕ ವಾಸು ಉದ್ಘಾಟಿಸುವರು. ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ `ಕೃಷಿ ಲೋಕದೊಳಗೆ’, ಬೆಂಗಳೂರು ಕೃಷಿ ವಿವಿ ಕುಲಪತಿ ಪ್ರೊ.ಎಸ್.ರಾಜೇಂದ್ರ ಪ್ರಸಾದ್ `ಪ್ಲ್ಯಾಂಟ್ ಡಾಕ್ಟರ್’ ಕೃತಿ ಬಿಡುಗಡೆ ಮಾಡುವರು. ಹೈದರಾಬಾದ್‍ನ ಐಸಿಆರ್ ಐಎಸ್‍ಎಟಿ ನಿವೃತ್ತ ಉಪ ಮಹಾನಿರ್ದೇಶಕ ಸಿ.ಎಲ್.ಲಕ್ಷ್ಮಿಪತಿಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಗುಬ್ಬಿಗೂಡು ರಮೇಶ್ ಕೃತಿಗಳ ಕುರಿತು ಮಾತನಾಡುವರು. ಲೇಖಕ ವಸಂತಕುಮಾರ್ ತಿಮಕಾಪುರ ಉಪಸ್ಥಿತರಿರುವರು ಎಂದರು.
ವಸಂತಕುಮಾರ್ ಮಾತನಾಡಿ, `ಕೃಷಿ ಲೋಕದೊಳಗೆ’ ಕೃತಿಯಲ್ಲಿ ಕನ್ನಡ ದಿನಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನಗಳಿವೆ. `ಪ್ಲ್ಯಾಂಟ್ ಡಾಕ್ಟರ್’ನಲ್ಲಿ ಸಸ್ಯರೋಗ ಗಳ ನೂರಾರು ಸಚಿತ್ರ ವರದಿಗಳಿದ್ದು, ಪರಿಹಾರವನ್ನೂ ಸೂಚಿಸಲಾಗಿದೆ. ಓದಿ ಅರ್ಥೈಸಿ ಕೊಂಡವರು ವೃಕ್ಷವೈದ್ಯ ಆಗಬಹುದು. ಶೀಘ್ರವೇ ಇದನ್ನು ಕನ್ನಡದಲ್ಲಿ ಪ್ರಕಟಿಸಲಾಗು ವುದು ಎಂದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಕೋಶಾಧ್ಯಕ್ಷ ರಾಜ ಶೇಖರ ಕದಂಬ, ಕೃಷಿ ಮಾರ್ಕೆಟಿಂಗ್ ತಜ್ಞರಾದ ಚೈತ್ರ ಭರತ್ ಗೋಷ್ಠಿಯಲ್ಲಿದ್ದರು.