ವಿಶೇಷ ಚೇತನರ ಮತದಾನಕ್ಕೆ ಪ್ರೇರಣೆ ನೀಡಲು ಮನವಿ
ಹಾಸನ

ವಿಶೇಷ ಚೇತನರ ಮತದಾನಕ್ಕೆ ಪ್ರೇರಣೆ ನೀಡಲು ಮನವಿ

April 10, 2019

ಹಾಸನ: ಜಿಲ್ಲಾ ಚುನಾವಣಾ ಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮತ್ತು ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು, ಹಾಸನ ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಚಂದ್ರಶೇಖರ್ ರಾಜ್ ಅರಸ್ ಅವರೊಂದಿಗೆ ಮಾತನಾಡಿ, ಎಲ್ಲಾ ವಿಕಲಚೇತನರು ಏ.18 ರಂದು ತಪ್ಪದೇ ಮತ ಚಲಾಯಿಸಲು ಪ್ರೇರಣೆ ನೀಡಬೇಕು ಎಂದು ಕೋರಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಅರಸು ಅವರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿ ಹಾಗೂ ಸಿಇಓ, ಈ ಬಾರಿ ವಿಶೇಷ ಚೇತನರಿಗಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ ವಾಹನ ಸೌಲಭ್ಯ, ಬೂತಗನ್ನಡಿ ಸೌಲಭ್ಯ, ಸ್ವಯಂ ಸೇವಕರ ಸೌಲಭ್ಯ ಕೂಡ ಇದೆ. ಚುನಾ ವಣಾ ಆಯೋಗದ ಆಶಯವನ್ನು ಅರಿತು ಎಲ್ಲಾರು ತಪ್ಪದೇ ಮತ ಚಲಾಯಿಸಬೇಕು. ವಿಶೇಷ ಚೇತನರು ಶೇ. 100ರಷ್ಟು ಮತ ಚಲಾಯಿಸಿ ಇತರರಿಗೆ ಮಾದರಿಯಾಗ ಬೇಕು ಎಂದು ಮನವರಿಕೆ ಮಾಡಿಕೊಟ್ಟರು.ಅಂಗವಿಕಲರ ಸಂಘದ ಅಧ್ಯಕ್ಷ ಚಂದ್ರ ಶೇಖರ್ ರಾಜ್ ಅರಸ್ ಅವರು, ಸಹಕಾರ ನೀಡುವುದಾಗಿ ಭರವಸೆ ನೀಡಿದರು.

Translate »