ಸಂವಿಧಾನದಲ್ಲಿ ಮೀಸಲಾತಿ ಮಿತಿ ನಮೂದಾಗಿಲ್ಲ
ಮೈಸೂರು

ಸಂವಿಧಾನದಲ್ಲಿ ಮೀಸಲಾತಿ ಮಿತಿ ನಮೂದಾಗಿಲ್ಲ

March 18, 2021

ಮೈಸೂರು, ಮಾ.17(ಎಂಟಿವೈ)- ಸಂವಿಧಾನದಲ್ಲಿ ಮೀಸಲಾತಿ ಶೇ.50ಕ್ಕಿಂತ ಹೆಚ್ಚು ಇರಬಾರದು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಒಂದು ಸಮುದಾಯದವರ ಸಂಚಿನಿಂದಾಗಿ ಮೀಸಲಾತಿ ಪ್ರಮಾಣ ನಿರ್ದಿಷ್ಟ ಗೊಳಿಸುವ ವ್ಯವಸ್ಥಿತ ಸಂಚು ನಡೆಸಲಾಗಿದೆ ಎಂದು ಸಾಹಿತಿ ಕೆ.ಎಸ್.ಭಗವಾನ್ ಆರೋಪಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಸಭಾಂಗಣ ದಲ್ಲಿ ಬುಧವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ಜಾಗೃತ ವೇದಿಕೆ, ಜಿಲ್ಲಾ ಕುಂಬಾರರ ಸಂಘ, ಸವಿತಾ ಸಮಾಜ, ಭಗೀರಥ ಉಪ್ಪಾರರ ಸಂಘ, ಜಿಲ್ಲಾ ವಿಶ್ವಕರ್ಮ ಮಹಾಮಂಡಲ, ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಜ್ಯೋತಪಣ ಯುವಜನ ಸಂಘ(ಗಾಣಿಗರ ಸಮುದಾಯ) ಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಕವಲುದಾರಿ ಯಲ್ಲಿ ಮೀಸಲಾತಿ’ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಭಾರತ ಹಿಂದು ಧರ್ಮ, ಜಾತಿಯತೆ ಹಾಗೂ ಶ್ರೀರಾಮನ ಹೆಸರಿನಿಂದ ಕೊತ ಕೊತನೆ ಕುದಿಯುತ್ತಿದೆ. ಹಿಂದೂ ಧರ್ಮ ಎಂದರೇನು? ಇದರ ಅರ್ಥ ಲಕ್ಷಕ್ಕೆ ಒಬ್ಬರಿಗೂ ತಿಳಿದಿಲ್ಲ. ಆದರೆ ದೇವಾ ಲಯದ ಮುಂದೆ ನಿಂತುಕೊಂಡು ಕೈ ಮುಗಿದು ಹೋಗು ವುದಷ್ಟೇ ಜನರಿಗೆ ತಿಳಿದಿದೆ. ಬ್ರಾಹ್ಮಣ ಸಮುದಾಯ ಬ್ರಾಹ್ಮಣೇತರರನ್ನು ಗುಲಾಮರಂತೆ ಕಾಣುತ್ತಿದೆ. ಆದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದರು.

2600 ವರ್ಷಗಳ ಹಿಂದೆ ಜನಿಸಿದ ಬುದ್ಧ ನಿಜವಾದ ನಮ್ಮ ಮಣ್ಣಿನ ಮಗ ಎನಿಸಿದ್ದಾರೆ. ಅವರ ಸಂದೇಶ ಸರ್ವ ಕಾಲಿಕ ಶ್ರೇಷ್ಠ. ಇದನ್ನು 1893ರಲ್ಲಿ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದ ಅವರು ಬುದ್ಧರ ಸಂದೇಶದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ದ್ದರು. ಶ್ರೀರಾಮ ಚಾತುರ್ವರ್ಣದ ರಕ್ಷಕ. ಬ್ರಾಹ್ಮಣರು ಮೇಲು, ಉಳಿದವರೆಲ್ಲಾ ಕೀಳು ಎಂದು ಪರಿಭಾವಿಸ ಲಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಎರಡು ರೀತಿಯ ಗುಲಾಮ ಗಿರಿ ಇತ್ತು. ಬ್ರಿಟಿಷರ ಗುಲಾಮಗಿರಿ ಒಂದು ಬಗೆಯ ದ್ದಾಗಿದ್ದರೆ, ಹಿಂದೂಧರ್ಮದ ವಾದ ಮತ್ತೊಂದು ಬಗೆಯ ಗುಲಾಮಗಿರಿ ಪ್ರತಿಪಾದಿಸುತ್ತಿತ್ತು. ಇಂತಹ ಸಂದರ್ಭ ದಲ್ಲಿ ಡಾ.ಅಂಬೇಡ್ಕರ್ ಎಷ್ಟೆಲ್ಲಾ ನೋವು ಅನುಭವಿಸಿ ದ್ದರೂ ಯಾರ ಮೇಲೂ ದ್ವೇಷ ಕಾರಲಿಲ್ಲ.
1910ರಲ್ಲಿ ದೇಶದಲ್ಲಿ ಒಕ್ಕಲಿಗ ಸಮುದಾಯದಲ್ಲಿ ಶೇ.2.1ರಷ್ಟು ಅಕ್ಷರಸ್ಥರಾಗಿದ್ದರೆ, ಲಿಂಗಾಯಿತ ಸಮು ದಾಯ ಶೇ.5.1ರಷ್ಟು, ಅಲ್ಪಸಂಖ್ಯಾತರು ಶೇ.6.1ರಷ್ಟು ಶಿಕ್ಷಣ ಪಡೆದವರು ಇದ್ದರೆ, ಶೂದ್ರರ ಅಂಕಿಅಂಶ ಶೇ.0 ಇತ್ತು ಎಂದು ವಿಷಾದಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್‍ಚಂದ್ರ ಗುರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಠಾಧೀಶರು ರಾಜ ಕೀಯ ಮಾತನಾಡಲು ಮುಂದಾಗಿದ್ದಾರೆ. ಕೆಲವು ಮಠಾ ಧೀಶರು ಮೀಸಲಾತಿ ವಿರೋಧಿಸುತ್ತಿದ್ದರೆ, ಮತ್ತೆ ಕೆಲ ವರು ಶೂದ್ರ ಸಮುದಾಯಗಳ ಮೇಲೆ ದೌರ್ಜನ್ಯ ಎಸಗುವ ಹೇಳಿಕೆ ನೀಡುತ್ತಿದ್ದಾರೆ. ಖಾವಿ ತೊಟ್ಟವರು ರಾಜಕಾರಣ ಮಾಡಬಾರದು. ಸಮಾಜ ಸುಧಾ ರಣೆಗಾಗಿ, ಜಾತಿ ವ್ಯವಸ್ಥೆ ತೊಡೆದು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ನೊಂದವರಿಗೆ ನ್ಯಾಯ ಒದಗಿಸುವ, ಅಸ್ಪøಶ್ಯತೆ ವಿರುದ್ಧ ಕಳೆದ 2 ಸಾವಿರ ವರ್ಷಗಳಿಂದ ಹೋರಾಟ ನಡೆಯು ತ್ತಿವೆ. ಆದರೆ ಇದುವರೆಗೂ ಸಮಾನತೆ ಕಲ್ಪಿಸಲು ಸಾಧ್ಯ ವಾಗಿಲ್ಲ. ಜನರು ದೇವಾಲಯಗಳ ಮುಂದೆ ನಿಲ್ಲುವುದ ಕ್ಕಿಂತ ಗ್ರಂಥಾಲಯದ ಮುಂದೆ ನಿಂತಾಗ ಮಾತ್ರ ಅಭಿ ವೃದ್ಧಿ ಸಾಧಿಸಬಹುದು. ಶೋಷಿತ ಹಾಗೂ ತಬ್ಬಲಿ ಜಾತಿ ಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಪ್ರಸ್ತುತ ಎಲ್ಲಾ ರಾಜಕೀಯ ಪಕ್ಷಗಳು ಕಾರ್ಪೊರೇಟ್ ವ್ಯಕ್ತಿಗಳ ಕಾವಲು ನಾಯಿಯಂತಾಗಿವೆ. ಇದರಿಂದ ಶೋಷಿತರು, ಬಡವರ ಹಿತ ಕಾಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂದರು.

ಕÀರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿ, ರಾಜ್ಯ ಸರ್ಕಾರ ಶೋಷಿತ ಸಮುದಾಯಗಳ ವಿರುದ್ಧ ಹೆಜ್ಜೆ ಹಾಕುತ್ತಿದೆ. ಬಸವಣ್ಣ ಹಾಗೂ ಡಾ.ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇಂತಹ ಸರ್ಕಾರದಿಂದ ಸಾಮಾಜಿಕ ನ್ಯಾಯ ನಿರೀಕ್ಷಿಸಲು ಸಾಧ್ಯ ವಿಲ್ಲ. ಸಂವಿಧಾನ ವಿರುದ್ಧವಾಗಿ ಸಾಮಾಜಿಕ ಮತ್ತು ಆರ್ಥಿಕ ವಾಗಿ ಹಿಂದುಳಿದಿದೆ ಎಂಬ ಕಾರಣದಿಂದ ಮೇಲ್ವರ್ಗಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಡೆ ವಿರುದ್ಧ ದೆಹಲಿಗೆ ತೆರಳಿ ಸಂಸತ್‍ಗೆ ಮುತ್ತಿಗೆ ಹಾಕುವ ಮೂಲಕ ನ್ಯಾಯ ಪಡೆದುಕೊಳ್ಳಲು ಹೋರಾಟ ರೂಪಿಸಲಾಗುತ್ತದೆ. ಅದಕ್ಕಾಗಿ ವಿವಿಧ ಶೋಷಿತ ಸಮುದಾಯಕ್ಕೆ ಸೇರಿದ ಸಂಘ-ಸಂಸ್ಥೆಗಳ ಬೆಂಬಲ ಪಡೆಯಲಾಗುತ್ತಿದೆ. ಮುಂದಿನ 3 ತಿಂಗಳ ನಂತರ ಹೋರಾಟ ನಡೆಸಲಾಗುತ್ತದೆ ಎಂದರು.

`ಬಲಾಢ್ಯರು ಮೀಸಲಾತಿಗೆ ಹೋರಾಟ ಮಾಡುತ್ತಿz್ದÁರೆ. ಇದಕ್ಕೆ ಪ್ರತಿಯಾಗಿ ಹೋರಾಟ ಆರಂಭಿಸಲೇಬೇಕಿದೆ. ಪ್ರಬಲವಾಗಿರುವ ಸಮುದಾಯಗಳಿಗೆ ಹಿಂದುಳಿದ ವರ್ಗ ಗಳ ಪ್ರವರ್ಗದ ಪಟ್ಟಿಯಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸಬೇಕಿದೆ. ಜನರು ಹೋರಾಟದ ಜತೆಗೆ ಕಾನೂನು ಹೋರಾಟವನ್ನೂ ಆರಂಭಿಸಬೇಕಿದೆ ಎಂದು ಸಮುದಾಯದ ಮುಖಂಡರು ತಿಳಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಕೆಲವು ಸಮುದಾಯಗಳು ಮೀಸಲಾತಿಗಾಗಿ ಬೇಡಿಕೆ ಇಟ್ಟಿವೆ. ಇದು ಕೇವಲ ಹಿಂದು ಳಿದ ವರ್ಗಗಳ ಪಟ್ಟಿಯಲ್ಲಿರುವ ಜಾತಿಗಳಿಗೆ ಸೀಮಿತ ವಾಗಿ ಪರಿಣಾಮ ಬೀರುವುದಿಲ್ಲ. ಪರಿಶಿಷ್ಟ ಜಾತಿ, ಪಂಗಡ ಗಳ ಜನರಿಗೂ ಇದರಿಂದ ತೊಂದರೆ ಆಗಲಿದೆ. ಈಗಿ ರುವ ಮೀಸಲಾತಿಯನ್ನು ನೋಡಿದಾಗ ವೈe್ಞÁನಿಕವಾದ ಹಂಚಿಕೆ ಇಲ್ಲ. ಇವತ್ತಿನ ಸರ್ಕಾರ ಎಲ್ಲದರಲ್ಲೂ ಗೊಂದಲ ಸೃಷ್ಟಿಸಿ, ಉಳ್ಳವರಿಗೆ ಸಹಕಾರ ನೀಡುತ್ತಿದೆ. ಇದರಿಂದ ಹಿಂದುಳಿದವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಮೀಸಲಾತಿ ವಿಚಾರವಾಗಿ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕೆಲಸ ವಾಗಬೇಕಿದೆ ಎಂದು ಮುಖಂಡರುಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಜತೆಗೆ ರಾಜ್ಯದ ಎಲ್ಲ ಭಾಗದಲ್ಲೂ ಪ್ರತಿಭಟನೆ ನಡೆಸುವುದರ ಜತೆಗೆ ಕಾನೂನು ಹೋರಾಟ ಆರಂಭಿಸಲೂ ತೀರ್ಮಾನಿಸಿದರು.
ಸಮಾಲೋಚನಾ ಸಭೆಯಲ್ಲಿ ಮಾಜಿ ಮೇಯರ್ ಗಳಾದ ನಾರಾಯಣ್, ಅನಂತು, ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಎನ್.ಆರ್.ನಾಗೇಶ್, ವಿಶ್ವಕರ್ಮ ಮಹಾ ಮಂಡಲ ಅಧ್ಯಕ್ಷ ಸಿ.ಟಿ.ಆಚಾರ್ಯ, ಮುಖಂಡರಾದ ಎಂ.ಲೋಕೇಶ್‍ಕುಮಾರ್, ಕಾಗಿನೆಲೆ ಮಹೇಂದ್ರ, ಕಾಡನ ಹಳ್ಳಿ ಸ್ವಾಮೀಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »