ಬಿಜೆಪಿ ವಿರುದ್ಧ ಸಚಿವ ರೇವಣ್ಣ ವಾಗ್ದಾಳಿ, ಪ್ರಜ್ವಲ್ ಬೆಂಬಲಿಸಲು ಮನವಿ
ಹಾಸನ

ಬಿಜೆಪಿ ವಿರುದ್ಧ ಸಚಿವ ರೇವಣ್ಣ ವಾಗ್ದಾಳಿ, ಪ್ರಜ್ವಲ್ ಬೆಂಬಲಿಸಲು ಮನವಿ

March 28, 2019

ವಿವಿಧ ಪಕ್ಷದ ಮುಖಂಡರು ಜೆಡಿಎಸ್ ಸೇರ್ಪಡೆ
ಹಾಸನ: ಲೋಕಸಭಾ ಚುನಾ ವಣೆ ಪ್ರಚಾರ ಜಿಲ್ಲೆಯಲ್ಲಿ ಚುರುಕುಗೊಂ ಡಿದ್ದು, ಜೆಡಿಎಸ್ ವಿವಿಧ ಪಕ್ಷದ ಮುಖಂಡ ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಪಕ್ಷ ಸೇರ್ಪಡೆ ಕಾರ್ಯ ಕ್ರಮದಲ್ಲಿ ಬಿಜೆಪಿಯ ಮಾಜಿ ಶಾಸಕ ಬಿ.ವಿ.ಕರೀಗೌಡ, ಗ್ರಾಮಂತರ ಮಂಡಲ ಅಧ್ಯಕ್ಷ ಅಗಿಲೆ ಯೋಗೀಶ್, ಮುಖಂಡ ಕಟ್ಟಾಯ ಅಶೋಕ್, ಹಿಂದೂಪರ ಸಂಘ ಟನೆಗಳ ಮುಖಂಡರು ಹಾಗೂ ಅವರ ನೂರಾರು ಬೆಂಬಲಿಗರನ್ನು ಸಚಿವ ರೇವಣ್ಣ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಆತ್ಮೀಯವಾಗಿ ಬರ ಮಾಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ, ಕೋಮುವಾದಿ ಪಕ್ಷವನ್ನು ದೂರವಿಡಲು ಅತೃಪ್ತ ಮುಖಂ ಡರು ಇಂದು ಜೆಡಿಎಸ್ ಸೇರ್ಪಡೆ ಗೊಂಡಿದ್ದಾರೆ. ಬಿಜೆಪಿಯಲ್ಲಿ ನಿಷ್ಠೆಯಿಂದ ದುಡಿದವರನ್ನು ಶಾಸಕರು ಅಧಿಕಾರದ ಅಮಲಿನಲ್ಲಿ ಹಾದಿ ಬೀದಿಗಳಲ್ಲಿ ಇರುವ ವರು ಎಂಬ ಪದವನ್ನು ಬಳಸಿ ಕಡೆಗಣಿಸಿ ದ್ದಾರೆ ಎಂದು ದೂರಿದರು.
ಜೆಡಿಎಸ್ ಬೆಂಬಲಕ್ಕೆ ಬಂದಿರುವ ಮುಖಂಡರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡಲಾಗು ವುದು ಎಂದ ಅವರು, ಸಾಲಗಾಮೆ ಸುತ್ತ ಕೆರೆಗಳ ಭರ್ತಿ ಹಾಗೂ ಇತರೆ ಕಾರ್ಯ ಕ್ರಮಗಳಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು. ಜಿಲ್ಲೆಯ ಅಭಿ ವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡು ತ್ತೇನೆ ಎಂದು ತಿಳಿಸಿದರು.

ಮಾಜಿ ಶಾಸಕ ಬಿ.ವಿ.ಕರೀಗೌಡ ಮಾತ ನಾಡಿ, 1983ರಲ್ಲಿಯೇ ಜೆಡಿಎಸ್ ನನ್ನನ್ನು ಗುರುತು ಮಾಡಿತು ಎಂದು ಸ್ಮರಿಸಿದ ಅವರು, ಲೋಕಸಭೆ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಮ್ಮ ನಾಯಕ. ಇಂದು ಎಲ್ಲಾ ಕಡೆಯೂ ಕುಟುಂಬ ರಾಜಕಾರಣ ಇದ್ದು, ಜೆಡಿಎಸ್ ಒಂದನ್ನು ಬಿಂಬಿಸಲಾಗುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಯಾದ ನಂತರ ರಾಜ್ಯದಲ್ಲಿ ರೈತರ ಸಾಲಮನ್ನಾ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜೆಡಿಎಸ್‍ಗೆ ಮತ್ತೆ ಬಂದಿದ್ದೇನೆ ಎಂದರು.

ಗ್ರಾಮಾಂತರ ಮಂಡಲ ಅಧ್ಯಕ್ಷ ಅಗಿಲೆ ಯೋಗಿಶ್ ಮಾತನಾಡಿ, 30 ವರ್ಷಗಳ ಕಾಲ ಬಿಜೆಪಿ ಕಾರ್ಯಕರ್ತನಾಗಿ, ಆರ್ ಎಸ್‍ಎಸ್‍ನಲ್ಲೂ ಕೆಲಸ ಮಾಡಿದ್ದೇನೆ. ರಕ್ತ ಕಣದಲ್ಲೂ, ನನ್ನ ಉಸಿರಿನಲ್ಲೂ ಬಿಜೆಪಿ ಇದೆ. ಆದರೆ, ಅನಿವಾರ್ಯ ಕಾರಣಗಳಿಂದ ಜೆಡಿಎಸ್ ಸೇರ್ಪಡೆ ಆಗಬೇಕಾಗಿದೆ ಎಂದರು.

ಪ್ರೀತಮ್ ಜೆ.ಗೌಡ ಅವರು ಆಕಸ್ಮಿಕ ವಾಗಿ ಬಿಜೆಪಿ ಶಾಸಕನಾಗಿದ್ದಾರೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಏನು ಬೆಲೆ ಕೊಟ್ಟರು? ಎಂದು ಪ್ರಶ್ನಿಸಿದ ಅವರು, ನನ್ನನ್ನು ರಾಜಕೀಯಕ್ಕೆ ತಂದ ವರು ಕಮಲ್‍ಕುಮಾರ್. ಅವರೇ ಇಂದು ಜೆಡಿಎಸ್‍ಗೆ ಕರೆ ತಂದಿದ್ದಾರೆ. ರಾಷ್ಟ್ರದ ಬಗ್ಗೆ ಯಾವ ಚಿಂತನೆ ಬೇಡ. ಹಾಸನದಲ್ಲಿ ಜೆಡಿ ಎಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.

ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಜೆಡಿಎಸ್ ಸಿದ್ಧಾಂತ ಒಪ್ಪಿಕೊಂಡು ಜೆಡಿಎಸ್‍ಗೆ ಸೇರ್ಪಡೆ ಗೊಂಡ ಮುಖಂಡರಿಗೆ ಸ್ವಾಗತ ಕೋರಿ ದರು. ಸುಳ್ಳಿನ ರಾಜಕಾರಣ ತೊರೆದು ರೈತ ಪಕ್ಷಕ್ಕೆ ಇಂದು ಮುಖಂಡರು ಸೇರ್ಪಡೆಯಾಗುತ್ತಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದರು.

ದಾರಿಯಲ್ಲಿ ಹಾದಿ ಬೀದಿಯಲ್ಲಿ ಓಡಾಡುವವರೆಲ್ಲಾ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಸ್ಥಳೀಯ ಶಾಸಕರು ಹೇಳಿದ್ದಾರೆ. ಇಂತಹ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. ಬಿಜೆಪಿಯಲ್ಲಿ ಬೇಸೆತ್ತು ಜೆಡಿ ಎಸ್‍ಗೆ ಬಂದಿರುವ ಮುಖಂಡರ ಜೊತೆ ನಮ್ಮ ಸೈನ್ಯ ಇರುತ್ತದೆ. ಎಲ್ಲಾ ಒಗ್ಗಟಾಗಿ ಕೆಲಸ ಮಾಡೋಣ. ಕೆರೆಗಳಿಗೆ ನೀರು ತುಂಬಿಸಬೇಕು ಎಲ್ಲಾವನ್ನು ಸಚಿವರು ಗಮನಿಸುತ್ತಿದ್ದಾರೆ. ಮುಂದೆ ಎಲ್ಲಾದಕ್ಕೂ ಪರಿಹಾರ ದೊರಕಲಿದೆ ಎಂದರು.

ಈ ವೇಳೆ ಬಿಜೆಪಿಯಿಂದ ಗೊರೂರು ಸಲೀಂ, ಬಿಟ್ಟಗೌಡನಹಳ್ಳಿ ಸುರೇಶ್, ಪರ ಮೇಶ್, ನವೀನ್, ಭುವನ್ ಮಂಜುನಾಥ ಶರ್ಮ, ಪ್ರಭು, ದೇವರಾಜು, ಬಾಬು, ಎಬಿವಿಪಿಯಿಂದ ಅಮೀತ್, ಮಂಜುಳ, ರುದ್ರೇಗೌಡ, ಮೋಹನ್, ತೇಜೂರು ಆನಂದ್, ರತ್ನಕ್ಕ, ನವೀನ್, ಆರ್‍ಎಸ್ ಎಸ್‍ನ ನವೀನ್ ಜೆಡಿಎಸ್ ಸೇರ್ಪಡೆ ಗೊಂಡರು. ಎಲ್ಲರನ್ನೂ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ಹಾರ ಹಾಕಿ, ಶಾಲು ಹೊದಿಸಿ ಆತ್ಮೀಯವಾಗಿ ಬರ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಹುಡಾ ಅಧ್ಯಕ್ಷ ಕೆ.ಎಂ. ರಾಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ರೈತ ಮುಖಂಡ ಸುರೇಶ್ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಮುಖಂಡರಾದ ಹೆಚ್.ಎಸ್. ಅನೀಲ್ ಕುಮಾರ್, ಸ್ವರೂಪ್, ಎಸ್.ದ್ಯಾವೇಗೌಡ ಇತರರಿದ್ದರು.

Translate »