ಮೈಸೂರಲ್ಲಿ ರಸ್ತೆ ಸುರಕ್ಷತೆ, ಕಾನೂನು ನೆರವು ಕಾರ್ಯಕ್ರಮ
ಮೈಸೂರು

ಮೈಸೂರಲ್ಲಿ ರಸ್ತೆ ಸುರಕ್ಷತೆ, ಕಾನೂನು ನೆರವು ಕಾರ್ಯಕ್ರಮ

November 4, 2021

ಮೈಸೂರು,ನ.3(ಆರ್‍ಕೆ)- ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ನ. 1ರಂದು ರಸ್ತೆ ಸುರಕ್ಷತೆ ಮತ್ತು ಕಾನೂನು ನೆರವು ಕುರಿತ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಕಚೇರಿ (ಪೂರ್ವ ಮತ್ತು ಪಶ್ಚಿಮ) ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕೆಎಸ್ ಆರ್‍ಟಿಸಿ ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ದೇವರಾಜ ಬೂತೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಅಪಘಾತ ಸಂಭವಿಸದಂತೆ ಎಚ್ಚರ ವಹಿಸಿ ಪ್ರಯಾ ಣಿಕರ ಸುರಕ್ಷತೆಗೆ ಗಮನಹರಿಸಬೇಕು, ಅಪಘಾತ ಸಂಭವಿಸಿದಾಗ ಎದುರಾಗುವ ಕಾನೂನು ಸಮಸ್ಯೆಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ವಾಹನ ಚಾಲನೆ ಮಾಡುವಾಗ ಅನು ಸರಿಸಬೇಕಾದ ಕ್ರಮದ ಬಗ್ಗೆ ಮಾಹಿತಿ ಕೈಪಿಡಿಯನ್ನು ಸಾರಿಗೆ ಸಂಸ್ಥೆ ಅಧಿಕಾರಿ ಗಳು ಸಿಬ್ಬಂದಿಗೆ ವಿತರಿಸಿದರು.

ಆರ್‍ಟಿಓ (ಪೂರ್ವ) ಎಲ್. ದೀಪಕ್, ಕಚೇರಿ ಅಧೀಕ್ಷಕ ತಮ್ಮಣ್ಣಗೌಡ, ಮಂಜು ನಾಥ, ಮೋಟಾರ್ ವೆಹಿಕಲ್ ಇನ್ಸ್‍ಪೆಕ್ಟರ್ ಜಿ.ಎಂ.ಸುರೇಶ್, ಕೆಎಸ್‍ಆರ್‍ಟಿಸಿ ಲೆಕ್ಕಾಧಿ ಕಾರಿ ಈರಯ್ಯ, ಟ್ರಾಫಿಕ್ ಸೂಪರ್‍ವೈಸರ್ ಗಂಗಾಧರಸ್ವಾಮಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »