ಬಿಡುಗಡೆಗಾಗಿ ಕಾಯುತ್ತಿರುವ  ಮೈಸೂರಿನ 37 ಜೈಲು ಬಂಧಿಗಳು
ಮೈಸೂರು

ಬಿಡುಗಡೆಗಾಗಿ ಕಾಯುತ್ತಿರುವ ಮೈಸೂರಿನ 37 ಜೈಲು ಬಂಧಿಗಳು

November 4, 2021

ಮೈಸೂರು, ನ. 3(ಆರ್‍ಕೆ)- ಸನ್ನಡತೆ ಆಧಾರದಲ್ಲಿ ಬಿಡುಗಡೆಯ ಭಾಗ್ಯ ನಿರೀಕ್ಷೆ ಯಲ್ಲಿರುವ ಮೈಸೂರು ಕೇಂದ್ರ ಕಾರಾ ಗೃಹದ 37 ಮಂದಿ ಕೈದಿಗಳು ಸರ್ಕಾ ರದ ಆದೇಶ ಎದುರು ನೋಡುತ್ತಿದ್ದಾರೆ.

2021ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದೇ ಬಿಡುಗಡೆಯಾಗಬೇಕಿ ತ್ತಾದರೂ, ಜೈಲುಗಳಿಂದ ಬಂದಿರುವ ಪ್ರಸ್ತಾವನೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ರಾಜ್ಯ ಮಟ್ಟದ ಸಮಿತಿ ಸಭೆಯೇ ನಡೆಯದಿರುವುದರಿಂದ ಕಳೆದ ಮೂರು ತಿಂಗಳಿಂದ ಬಿಡುಗಡೆ ಭಾಗ್ಯದ ನಿರೀಕ್ಷೆಯಲ್ಲಿದ್ದಾರೆ.
ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ 850 ಬಂಧಿಗಳ ಪೈಕಿ 37 ಮಂದಿ ಯನ್ನು ಅವರ ಸನ್ನಡತೆ, ಮನಪರಿವರ್ತನೆ, ಗುಣ ನಡವಳಿಕೆಗನುಸಾರ ಬಿಡುಗಡೆ ಮಾಡಬಹುದೆಂದು ಜೈಲು ಅಧೀಕ್ಷಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಈ ಸಂಬಂಧ ಅಸ್ತಿತ್ವದಲ್ಲಿರುವ ರಾಜ್ಯ ಮಟ್ಟದ ಸಮಿತಿ ಸಭೆಯೇ ನಡೆಯ ದಿರುವುದರಿಂದ ಸ್ವಾತಂತ್ರ್ಯ ದಿನದಂದು ಬಿಡುಗಡೆ ಭಾಗ್ಯ ಸಿಗಲಿಲ್ಲ.

ರಾಜ್ಯಮಟ್ಟದ ಸಮಿತಿಯಲ್ಲಿ ಚರ್ಚಿಸಿ ಕೈಗೊಂಡ ನಿರ್ಣಯವನ್ನು ಸಚಿವ ಸಂಪುಟ ದಲ್ಲಿ ಅನುಮೋದಿಸಿದ ನಂತರವಷ್ಟೇ ರಾಜ್ಯಪಾಲರು ಸನ್ನಡತೆ ಪ್ರದರ್ಶಿಸಿದ ಜೈಲು ಬಂಧಿಗಳ ಬಿಡುಗಡೆಗೆ ಆದೇಶಿಸಿ ಅಂಕಿತ ಹಾಕಬೇಕಾಗಿದೆ. ಈ ಪ್ರಕ್ರಿಯೆಗಳಿಗೆ ಚಾಲನೆ ದೊರೆಯದಿರುವುದರಿಂದ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಮಾರ್ಗಸೂಚಿ ಪಾಲನೆ: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಜೈಲು ಬಂಧಿಗಳ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು, ಸರ್ಕಾರದ ಮಾರ್ಗ ಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ. ಮೈಸೂರು ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ನೆರವಿನಿಂದ ಆಗಿಂದಾಗ್ಗೆ ಸ್ಯಾನಿಟೈಸ್ ಮಾಡಲಾಗು ತ್ತಿದೆ ಎಂದು ಜೈಲು ಅಧೀಕ್ಷಕಿ ದಿವ್ಯಶ್ರೀ ತಿಳಿಸಿದ್ದಾರೆ. ಹೊಸದಾಗಿ ಬರುವ ಖೈದಿ ಗಳಿಗೆ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಿಸಿ, ಪಾಸಿಟಿವ್ ಬಂದವರನ್ನು ಪ್ರತ್ಯೇಕವಾಗಿ ರಿಸಿ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸುತ್ತಿದ್ದೇವೆ. ಈಗ ನಮ್ಮಲ್ಲಿ ಆರೋಗ್ಯದ ಸಮಸ್ಯೆ ಇಲ್ಲ ಎಂದರು.

Translate »