ದಸರಾ ವಸ್ತುಪ್ರದರ್ಶನದಲ್ಲಿ ರೋಬೋ ಮಂಜೇಗೌಡರ ಜನೋಪಯೋಗಿ ರೋಬೋ ಜೋನ್ ಮಳಿಗೆ ಉದ್ಘಾಟನೆ
ಮೈಸೂರು

ದಸರಾ ವಸ್ತುಪ್ರದರ್ಶನದಲ್ಲಿ ರೋಬೋ ಮಂಜೇಗೌಡರ ಜನೋಪಯೋಗಿ ರೋಬೋ ಜೋನ್ ಮಳಿಗೆ ಉದ್ಘಾಟನೆ

October 21, 2022

ಮೈಸೂರು, ಅ.20 (ಎಸ್‍ಬಿಡಿ)- ರೋಬೋ ಮಂಜೇಗೌಡರು ಸಾರ್ವಜನಿಕ ಉಪಯೋಗಕ್ಕಾಗಿ ಸಿದ್ಧಪಡಿಸಿರುವ ವಿವಿಧ ಯಂತ್ರೋಪಕರಣಗಳ `ರೋಬೋ ಜೋನ್’ ಮಳಿಗೆ ದಸರಾ ವಸ್ತುಪ್ರದರ್ಶನದಲ್ಲಿ ಉದ್ಘಾಟನೆಗೊಂಡಿದೆ.

ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕು ಕೋಮನಹಳ್ಳಿಯ ರೋಬೋ ಮಂಜೇ ಗೌಡರು ಅನ್ವೇಷಿಸಿರುವ `ಜೀವ ರಕ್ಷಕ ರೋಬೋ’, `ಸೈನಿಕ ರೋಬೋ’, `ವಾಹನ ಗಳ ಚಲನೆಯಿಂದ ವಿದ್ಯುತ್ ಉತ್ಪಾದನೆ’ ವ್ಯವಸ್ಥೆ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಯನ್ನೊಳಗೊಂಡ ವಿಶೇಷ ಮಳಿಗೆಯನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜನ ಜೀವನದಲ್ಲಿ ಯಂತ್ರೋಪಕರಣಗಳ ಬಳಕೆ ಹಾಸುಹೊಕ್ಕಾಗಿದೆ. ಅಡುಗೆ ತಯಾರಿಯಿಂದ ಹಿಡಿದು ಸಾಕಷ್ಟು ಕೆಲಸ ಕಾರ್ಯಗಳಿಗೆ ಯಂತ್ರಗಳನ್ನೇ ಅವಲಂಬಿಸಿದ್ದೇವೆ. ಈ ನಿಟ್ಟಿನಲ್ಲಿ ರೋಬೋ ಮಂಜೇಗೌಡರು ತುರ್ತು ಸಂದರ್ಭಗಳಲ್ಲಿ ರೋಬೋ ಬಳಕೆ ಮಾಡುವ ಬಗ್ಗೆ ಅಧ್ಯಯನ ನಡೆಸಿ, ಸ್ವಯಂ ಪ್ರೇರಿತವಾಗಿ ರೋಬೋ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ಇವರ ಕಾರ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ದಸರಾ ವಸ್ತು ಪ್ರದರ್ಶನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರೋಬೋ ಮಂಜೇಗೌಡ ಮಾತ ನಾಡಿ, ರೈತಾಪಿ ಕುಟುಂಬದವನಾದ ನಾನು ಕೃಷಿ ಚಟುವಟಿಕೆಯಲ್ಲಿ ರೈತರಿಗೆ ಯಂತ್ರೋ ಪಕರಣಗಳ ಹೇಗೆ ಸಹಾಯಕವಾಗುತ್ತವೆ ಎಂಬುದರ ಬಗ್ಗೆ ಚಿಕ್ಕವಯಸ್ಸಿನಿಂದಲೇ ಪ್ರಯೋಗಗಳನ್ನು ನಡೆಸಿದ್ದೆ. ನಂತರದಲ್ಲಿ ನಿರಂತರ ಪ್ರಯತ್ನದಿಂದ ರೋಬೋ ಸಿದ್ಧ ಪಡಿಸಿದೆ. 2014ರ ಆಗಸ್ಟ್‍ನಲ್ಲಿ ಬಾದಾಮಿಯ ಸೂಳೆಕೆರೆ ಗ್ರಾಮದಲ್ಲಿ 6 ವರ್ಷದ ಬಾಲಕ ಕೊಳವೆ ಭಾವಿಯಲ್ಲಿ ಸಿಲುಕಿಕೊಂಡಿದ್ದಾಗ `ಜೀವ ರಕ್ಷಕ ರೋಬೋ’ ಮಾಹಿತಿ ನೀಡಿತ್ತು. ಹಾಗೆಯೇ ಈ ರೋಬೋ ಚಿತ್ರರಂಗದ ಸಾಹಸ ಕಲಾವಿದರಾದ ಅನಿಲ್ ಮತ್ತು ಉದಯ್ ಬೆಂಗಳೂರಿನ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ಮುಳಗಿದ ಸಂದರ್ಭದಲ್ಲಿ ದೇಹ ಶೋಧನೆಗೆ ನೆರವಾಗಿತ್ತು. ದೇಶದ ಗಡಿಯಲ್ಲಿ ಸೈನಿಕರಿಗೆ ಸಹಾಯವಾಗಬಲ್ಲ `ಸೈನಿಕ ರೋಬೋ’ ಸಿದ್ಧವಾಗಿದೆ. `ಗ್ರಾವಿ ಟೇಷನ್ ಪವರ್ ಸೋರ್ಸ್ ಸಿಸ್ಟಮ್’ ಅನ್ವೇ ಷಿಸಿದ್ದು, ರಸ್ತೆಗಳಲ್ಲಿ ಭಾರೀ ವಾಹನ ಸಂಚಾರ ದಿಂದ ವಿದ್ಯುತ್ ಉತ್ಪಾದನೆ ಹಾಗೂ ಶೇಖ ರಣೆ ಇದರಿಂದ ಸಾಧ್ಯವಿದೆ ಎಂದರು. ಈ ಸಂದರ್ಭದಲ್ಲಿ ವೈದ್ಯೆ ವೇದಾವತಿ, ಶಶಿ ಕಲಾ ಪ್ರಭಾಕರ್, ವೆಂಕಟೇಶ್, ನಿರೂಪಕ ಅಜಯ್ ಶಾಸ್ತ್ರಿ, ನಾಗೇಶ್, ಅನಿಲ್‍ಗೌಡ, ಕುಶಾಲ್ ಮತ್ತಿತರರು ಉಪಸ್ಥಿತರಿದ್ದರು.

Translate »