ಚಾಮುಂಡಿಬೆಟ್ಟಕ್ಕೆ ರೋಪ್ ವೇ
ಮೈಸೂರು

ಚಾಮುಂಡಿಬೆಟ್ಟಕ್ಕೆ ರೋಪ್ ವೇ

July 21, 2021

ಮೈಸೂರು, ಜು.20(ಆರ್‍ಕೆ)-ಚಾಮುಂಡಿಬೆಟ್ಟಕ್ಕೆ ರೋಪ್ ವೇ ಯೋಜನೆ ಯನ್ನು ಅನುಷ್ಠಾನಗೊಳಿ ಸುವುದಾಗಿ ಪ್ರವಾಸೋ ದ್ಯಮ ಸಚಿವ ಸಿ.ಪಿ.ಯೋಗೀ ಶ್ವರ್ ತಿಳಿಸಿದ್ದಾರೆ.

ಸೋಮವಾರ ತಿ.ನರಸೀಪುರ ತಾಲೂಕು, ತಲ ಕಾಡಿನಲ್ಲಿ ಪ್ರವಾಸೀ ತಾಣಗಳ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬಹು ನಿರೀಕ್ಷಿತ ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಯೋಜನೆಯನ್ನು ತೀವ್ರ ವಿರೋಧವಿದ್ದರೂ ಅನು ಷ್ಠಾನಗೊಳಿಸುತ್ತೇವೆ ಎಂದರು. ಯೋಜನೆಯಿಂದ ಬೆಟ್ಟದ ನೈಸರ್ಗಿಕ ಸೌಂದರ್ಯ ಹಾಳಾಗುತ್ತದೆ ಎಂದು ಪರಿಸರ ವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ನೂತನ ತಂತ್ರಜ್ಞಾನ ಅಳವಡಿಸಿ ಪರಿಸರಕ್ಕೆ ಹಾನಿಯಾಗ ದಂತೆ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಅಳವಡಿಸಿ, ಅಲ್ಲಿನ ಪ್ರವಾಸೀ ತಾಣವನ್ನು ಅಭಿವೃದ್ಧಿಪಡಿಸಲಾಗು ವುದು ಎಂದು ಸಚಿವರು ನುಡಿದರು. ಜುಲೈ 15ರಂದು ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ನೆನೆ ಗುದಿಗೆ ಬಿದ್ದಿರುವ ವಿಶ್ವ ಪ್ರಸಿದ್ಧ ನಂದಿಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಯೋಜನೆ ಬಗ್ಗೆ ಚರ್ಚೆ ನಡೆಸಿದ ವೇಳೆ ಚಾಮುಂಡಿಬೆಟ್ಟದ ಯೋಜನೆ ಬಗ್ಗೆಯೂ ಸಮಾ ಲೋಚನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನಂದಿ ಬೆಟ್ಟದ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದ ಯೋಗೀಶ್ವರ್, ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸುವಂತೆಯೂ ಸೂಚನೆ ನೀಡಿದ್ದಾರೆ. ಅದೇ ವೇಳೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ
ಅಳವಡಿಸುವ ಯೋಜನೆಗೆ ಕ್ರಿಯಾ ಯೋಜನೆ, ಅಂದಾಜು ಹಾಗೂ ಡಿಪಿಆರ್ ಸಿದ್ಧಪಡಿಸು ವಂತೆಯೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೆಲಿ ಟೂರಿಸಂ: ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್ ಬಳಿ ಅನುಷ್ಠಾನಗೊಳಿಸಲು ದ್ದೇಶಿಸಿದ್ದ ಹೆಲಿ ಟೂರಿಸಂಗೆ 600 ಮರಗಳನ್ನು ಹನನ ಮಾಡಬೇಕಾಗಿರುವುದರಿಂದ ಸದ್ಯಕ್ಕೆ ಹಾಲಿ ಇರುವ ವಿಮಾನ ನಿಲ್ದಾಣದಲ್ಲೇ ಪರಿಷ್ಕøತ ಯೋಜನೆ ಪ್ರಕಾರ ಹೆಲಿ ಟೂರಿಸಂ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವ ಯೋಗೀಶ್ವರ್ ತಿಳಿಸಿದರು.

Translate »