ರೋಟರಿ ಐವರಿ ಸಿಟಿ ಮೈಸೂರು ನೂತನ ತಂಡದ ಪದಗ್ರಹಣ
ಮೈಸೂರು

ರೋಟರಿ ಐವರಿ ಸಿಟಿ ಮೈಸೂರು ನೂತನ ತಂಡದ ಪದಗ್ರಹಣ

July 16, 2020

ಮೈಸೂರು, ಜು.15-ನಗರದ ರೋಟರಿ ಐವರಿ ಸಿಟಿ ಮೈಸೂರು ವತಿಯಿಂದ ಇತ್ತೀಚೆಗೆ ನೂತನ ತಂಡದ ಅಧ್ಯಕ್ಷರಾದ ರೊ.ಬಿ.ಹರೀಶ್ ಮತ್ತು ಅದರ ಪದಾಧಿ ಕಾರಿಗಳನ್ನು ಸಹಾಯಕ ರಾಜ್ಯಪಾಲ ರೊ. ಹೆಚ್.ಆರ್.ಕೇಶವ್ ಆಯ್ಕೆ ಮಾಡಿದರು.

ಇದೇ ಸಂದರ್ಭದಲ್ಲಿ ಮೂರು ಕ್ಷೇತ್ರ ದಲ್ಲಿ ಸಾಧನೆಗೈದಿರುವ ವಿಶೇಷ ವ್ಯಕ್ತಿಗಳಾದ ಎನ್‍ಐಇ ಕಾಲೇಜಿನ ನಿವೃತ್ತ ಪ್ರಾಂಶು ಪಾಲ, ಆರೋಗ್ಯ ವ್ಯವಸ್ಥೆಯಲ್ಲಿ ಸಂಶೋ ಧನೆಗಾಗಿ ಈ-ಲರ್ನಿಂಗ್ ಫೌಂಡೇಶನ್‍ನ ಪ್ರಸ್ತುತ ನಿರ್ದೇಶಕ ಡಾ.ಜಿ.ಎಲ್.ಶೇಖರ್, ವಿಕಿರಣ ಶಾಸ್ತ್ರಜ್ಞೆ ಡಾ.ಸನ್ಮತಿ ನಿತ್ಯಾನಂದ ಹಾಗೂ ಮೈಸೂರು ಬುಕ್ ಕ್ಲಬ್‍ನ ಶ್ರೀಮತಿ ಶೋಭಾ ಸಂಜಯ್ ಅರಸ್ ಅವರನ್ನು ಕ್ಲಬ್‍ನ ಗೌರವ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಬಡ ಮಕ್ಕಳ ಮುಖ ದಲ್ಲಿ ಮಂದಹಾಸ ಮೂಡಿಸುವ ಸಲು ವಾಗಿ ವಿನೂತನ ‘ಟಾಯ್ ಬ್ಯಾಂಕ್’ ಎಂಬ ಯೋಜನೆ ಆರಂಭಿಸಲಾಯಿತು. ಡಾ.ಕೆ.ಎ. ಪ್ರಹ್ಲಾದ್, ಎಸ್.ಬಾಲಚಂದ್ರ, ಹೆಚ್. ಆರ್.ಕೇಶವ, ರೋಹಿತ್ ರ್ಯಾಮ್‍ಡಿಯೋ, ಐವರಿ ಸಿಟಿ ಅಧ್ಯಕ್ಷ ಬಿ.ಹರೀಶ್, ಕಾರ್ಯ ದರ್ಶಿ ಡಾ.ಎಂ.ಕೆ.ಸಚ್ಚಿದಾನಂದನ್, ‘ಟಾಯ್ ಬ್ಯಾಂಕ್’ ಅಧ್ಯಕ್ಷ ರೊ.ಪೂಜಾ ಬಾಳಿಗಾ ಹಾಗೂ ಪೂರ್ವ ಸಹಾಯಕ ರಾಜ್ಯಪಾಲ ರೊ.ಸುನಿಲ್ ಬಾಳಿಗಾ ಮತ್ತಿತರರು ಉಪಸ್ಥಿತರಿದ್ದರು.

Translate »