ಬಾಲಕಿಯರ ಸರ್ಕಾರಿ ಪಿಯು ಕಾಲೇಜಿಗೆ ಕೋಟಿ ರೂ. ಅನುದಾನ : ಶಾಸಕ ಎ.ಟಿ.ರಾಮಸ್ವಾಮಿ
ಹಾಸನ

ಬಾಲಕಿಯರ ಸರ್ಕಾರಿ ಪಿಯು ಕಾಲೇಜಿಗೆ ಕೋಟಿ ರೂ. ಅನುದಾನ : ಶಾಸಕ ಎ.ಟಿ.ರಾಮಸ್ವಾಮಿ

January 31, 2019

ರಾಮನಾಥಪುರ: ಇಲ್ಲಿಯ ಬಸವೇ ಶ್ವರ ವೃತ್ತದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿಗೆ ಒಂದು ಕೋಟಿ ರೂ. ನೀಡಲಾಗಿದೆ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ತಿಳಿಸಿದರು.

ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಾರದಾ ಪೂಜೆ ಮತ್ತು 11ನೇ ವರ್ಷದ ಕಾಲೇಜು ವಾರ್ಷಿ ಕೋತ್ಸವ ಉದ್ಘಾಟನೆ ಮಾಡಿ ಮಾತನಾ ಡಿದ ಅವರು, ಇಲ್ಲಿಯ ಕಾಲೇಜಿಗೆ ಲ್ಯಾಬ್ ಮಂಜೂರಾಗಿದೆ.

ಹೆಚ್ಚುವರಿ 4 ಕೊಠಡಿ ಗಳು ನಿರ್ಮಾಣವಾಗಿ ಉದ್ಘಾಟನೆಗೊಂ ಡಿವೆ. 15 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲು ಹಣ ಮಂಜೂರಾಗಿದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ಪಿ.ಈರಪ್ಪ ಒಂದು ಲಕ್ಷ ರೂ. ವೆಚ್ಚದಲ್ಲಿ ಉಚಿತವಾಗಿ ಲ್ಯಾಬ್ ಉಪ ಕರಣಗಳನ್ನು ಕೊಡಿಸಿರುವುದಕ್ಕೆ ಅಭಿನಂ ದನೆ ಸಲ್ಲಿಸಿದ ಅವರು, ಇಂದಿನ ಯುವಕರು ಎಲ್ಲಿಯಾದರೂ ಭ್ರಷ್ಟಾಚಾರ, ಅನ್ಯಾಯ ಗಳು ನಡೆಯುತ್ತಿದ್ದರೆ ಅದನ್ನು ತಡೆಗಟ್ಟು ವತ್ತ ಹೋರಾಡಬೇಕು. ಇದರ ಮೂಲಕ ಸಮಾಜ, ದೇಶ ಕಟ್ಟುವ ಕಾರ್ಯ ನಿಮ್ಮಿಂದ ಆಗಬೇಕು. ಭವಿಷ್ಯದ ಪ್ರಜೆಗಳಾದ ನೀವು ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ, ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮುವ ಮೂಲಕ ಹೆತ್ತವರಿಗೆ, ಕಾಲೇಜಿಗೆ ಹಾಗೂ ದೇಶಕ್ಕೆ ಹೆಸರು ತರಬೇಕು ಎಂದರು.

ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾ ಧ್ಯಕ್ಷ ಹಾಗೂ ನಿವೃತ್ತ ಅಬಕಾರಿ ಇಲಾಖೆ ಆಯುಕ್ತ ಹನ್ಯಾಳು ಎಚ್.ಪಿ.ಈರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಿಂದ ಬಂದಿರುವ ಪ್ರತಿಯೊಬ್ಬ ವಿದ್ಯಾರ್ಥಿ ಯಲ್ಲೂ ಜ್ಞಾನ ಇದೆ. ವಿದ್ಯಾರ್ಥಿಗಳು ವಿದ್ಯೆ ಜೊತೆಗೆ ಉತ್ತಮ ಕ್ರೀಡಾ ಚಟುವಟಿಕೆ ಅಭ್ಯಾಸದ ಕಡೆ ಹೆಜ್ಜೆ ಹಾಕಬೇಕು. ಇಂದಿನ ದಿನಗಳಲ್ಲಿ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ನಮ್ಮ ಸರ್ಕಾರಿ ಶಾಲಾ ಕಾಲೇಜಿ ನಲ್ಲಿ ಪ್ರಯತ್ನ ಮಾಡಿ ಶೇ.100ರಷ್ಟು ಅಂಕ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹಳ್ಳಿ ಮೈಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಎಸ್.ಪ್ರಭುಶಂಕರ್ ವಿದ್ಯಾರ್ಥಿಗಳಿಗೆ ಹಿತವಚನ ನೀಡಿ, ಗುರು ಗಳು ಹೇಳಿಕೊಟ್ಟ ವಿದ್ಯೆಯ ಜೊತೆಗೆ ವಿದ್ಯಾರ್ಥಿಗಳ ಜೊತೆ ಸಹಬಾಳ್ವೆ, ತಂದೆ ಪ್ರೀತಿ, ತಾಯಿಯ ಮಮತೆಯನ್ನು ಮೈ ಗೂಡಿಸಿಕೊಂಡು ವಿದ್ಯೆ ಕಲಿತು ಸಮಾಜ ದಲ್ಲಿ ಶಿಸ್ತು, ಧೈರ್ಯದಿಂದ ಜೀವಿಸಲು ಅರಿತರೆ, ನಾಯಕತ್ವದ ಗುಣ ತಾನಾ ಗಿಯೇ ಬರುತ್ತದೆ ಎಂದರು.
ಸಮಿತಿಯ ಸದಸ್ಯ ಸಾಧಿಕ್, ಮನು, ಪ್ರಭಾಕರ್, ಪುಟ್ಟರಾಜು ಕಾಲೇಜು ಪ್ರಾಂಶು ಪಾಲ ಬಿ.ಎಸ್.ಸಂಪತ್ತೇಗೌಡ, ಐ.ಎಂ. ಸ್ವಾಮಿ, ಮನೋಹರ, ಕೃಷ್ಣ, ಪ್ರದೀಪ್, ದಯಾನಂದ, ಮಧುಸೂಧನ್, ರಾಕೇಶ್ ಮುಂತಾದವರು ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕಿ ಶಾಂಭವಿ ಸ್ವಾಗತಿಸಿ, ಶ್ಯಾಮಲಾದೇವಿ ನಿರೂಪಿಸಿ, ರಮ್ಯ ವಂದಿಸಿದರು.

Translate »