ಹೆಚ್.ಡಿ. ದೇವೇಗೌಡರ ಸಂಬಂಧಿ ಪರಮೇಶ್ ಬ್ಯಾಂಕ್ ಲಾಕರ್‍ನಲ್ಲಿ 6.5 ಕೋಟಿ ರೂ. ಪತ್ತೆ
ಮೈಸೂರು

ಹೆಚ್.ಡಿ. ದೇವೇಗೌಡರ ಸಂಬಂಧಿ ಪರಮೇಶ್ ಬ್ಯಾಂಕ್ ಲಾಕರ್‍ನಲ್ಲಿ 6.5 ಕೋಟಿ ರೂ. ಪತ್ತೆ

April 6, 2019

ಶಿವಮೊಗ್ಗ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಜೆಡಿಎಸ್ ವರಿಷ್ಠರೂ ಆದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಹತ್ತಿರದ ಸಂಬಂಧಿ ಪಿ.ಟಿ. ಪರಮೇಶ್ ಅವರು ಬ್ಯಾಂಕ್ ಲಾಕರ್‍ಗಳಲ್ಲಿ ಇರಿಸಿದ್ದ 6.5 ಕೋಟಿ ರೂ. ನಗದು ಪತ್ತೆಯಾಗಿದೆ.

ಪರಮೇಶ್ ಅವರು ಶಿವಮೊಗ್ಗದಲ್ಲಿ ಮಾರುತಿ ಕಾರು ಮಾರಾಟದ ಶ್ರುತಿ ಮೋಟಾರ್ಸ್ ಷೋ ರೂಂ ಹೊಂದಿದ್ದಾರೆ. ಷೋರೂಂ ಮತ್ತು ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದ್ದರು. ಈ ಸಂದರ್ಭ ಅವರ ಬ್ಯಾಂಕ್ ಲಾಕರ್‍ಗಳನ್ನು ಪರಿಶೀಲಿಸಿದಾಗ 2000 ರೂ. ನೋಟುಗಳ ರಾಶಿಯೇ ಕಂಡುಬಂದಿತು. ಹಣ ವಶಕ್ಕೆ ಪಡೆದಿರುವ ಐಟಿ ಅಧಿಕಾರಿಗಳು, ತನಿಖೆ ಮುಂದುವರಿಸಿದ್ದಾರೆ.

ವಾರದ ಹಿಂದೆ ಗೋವಾ ಮತ್ತು ಕರ್ನಾಟಕ ವಲಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಇರುವ ದೊಡ್ಡ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಆಗ ದೊಡ್ಡ ಮೊತ್ತವೇನೂ ದೊರಕಿರಲಿಲ್ಲ. ಆ ಸಂದರ್ಭ ಐಟಿ ದಾಳಿಯನ್ನು ತೀವ್ರವಾಗಿ ವಿರೋಧಿಸಿದ್ದ ಸಿಎಂ ಕುಮಾರ ಸ್ವಾಮಿ ಅವರು, ಮೈತ್ರಿ ಸರ್ಕಾರದ ನಾಯಕ ರನ್ನೇ ಗುರಿಯಾಗಿರಿಸಿ ಐಟಿ ದಾಳಿ ನಡೆಸಲಾಗುತ್ತಿದೆ. ಇದು ರಾಜಕೀಯ ಪ್ರೇರಿತ ದಾಳಿ ಎಂದು ಕೆಂಡಕಾರಿದ್ದರು.

Translate »