ಸಮಾಜದೊಂದಿಗೆ ಸಾಮರಸ್ಯ ಹೊಂದಿದ ಆರ್‍ಎಸ್‍ಎಸ್: ಸು.ರಾಮಣ್ಣ
ಮೈಸೂರು

ಸಮಾಜದೊಂದಿಗೆ ಸಾಮರಸ್ಯ ಹೊಂದಿದ ಆರ್‍ಎಸ್‍ಎಸ್: ಸು.ರಾಮಣ್ಣ

September 11, 2020

ಮೈಸೂರು, ಸೆ.10(ಎಂಕೆ)- ಸಾಮರಸ್ಯ ವಿಲ್ಲದ ಸಂಘಟನೆ ಬರೀ ನಾಟಕ-ಸುಳ್ಳು. ‘ಅಹಿಂದ’ ಎಂಬುದು ಸಂಘಟನೆಯಲ್ಲ. ರಾಜಕೀಯ ಆಕಾಂಕ್ಷೆ ಇಟ್ಟುಕೊಂಡು ಕಟ್ಟಿದ ತಾತ್ಕಾಲಿಕ ಸಮೂಹ ಶಕ್ತಿ ಎನಿಸುತ್ತದೆ ಎಂದು ಆರ್‍ಎಸ್‍ಎಸ್‍ನ ಹಿರಿಯ ಪ್ರಚಾ ರಕ ಸು.ರಾಮಣ್ಣ ಅಭಿಪ್ರಾಯಪಟ್ಟರು.

ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಮಾಧವ ಕೃಪ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ವಿನಾ ಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ಹಾಗೂ ಯುವಜನ ಸಂಘದ ಸಂಯು ಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ‘ಸಮ ಚಿತ್ತದ ಸಮದರ್ಶಿ(ರಾಮಕೃಷ್ಣರ ಜೀವನ ಕಥನ)’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ಸಂಘಟನೆಯಾಗಿದ್ದು, ಸಾಮರಸ್ಯದ ಆಧಾ ರದ ಮೇಲೆ ಸಮಾಜದ ಪುರುಷನನ್ನು ಸ್ವಚ್ಛವಾಗಿಸುತ್ತದೆ. ಸ್ವಚ್ಛ ಸಮಾಜದ ಪುರುಷ ನಿಂದ ಭಯದ ಬದಲು ಭರವಸೆ ಉಂಟಾ ಗುತ್ತದೆ. ಆರೋಗ್ಯಯುತ ವ್ಯಕ್ತಿಯ ದೇಹದ ಅಂಗಾಂಗಗಳು ಸಾಮರಸ್ಯದಿಂದ ಪೂರಕ ವಾಗಿ ಕೆಲಸ ಮಾಡುವಂತೆ ಸಮಾಜ ದೊಂದಿಗೆ ಆರ್‍ಎಸ್‍ಎಸ್ ಸಾಮರಸ್ಯ ಹೊಂದಿದೆ ಎಂದರು.

ಆರ್‍ಎಸ್‍ಎಸ್‍ನಲ್ಲಿ ಯೊಗ್ಯತೆಯ ಆಧಾರದ ಮೇಲೆ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಜವಾಬ್ದಾರಿ ಪಡೆಯ ಬೇಕಾದರೆ ಸಮರ್ಪಣೆ, ಬದ್ಧತೆ ಎಂಬ ಯೋಗ್ಯತೆಗಳಿರಬೇಕು. ಹೀಗೆ ಬದ್ಧತೆ ಉಳ್ಳ ವರಲ್ಲಿ ಅಶೋಕಪುರಂನ ರಾಮಕೃಷ್ಣ ಹಾಗೂ ಮ.ವೆಂಕಟರಾಮ್ ಪ್ರಮುಖರು. ಯಾವುದೇ ಆಸೆ-ಆಕಾಂಕ್ಷೆಗಳ ಸೆಳೆತಕ್ಕೆ ಒಳಗಾಗದೆ, ಬಹಿಷ್ಕಾರಗಳಿಗೆ ಬಗ್ಗದೆ ಸಂಘ ದೊಳಗೆ ಸೇವೆ ಮಾಡಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಅಶೋಕಪುರಂ ಚಳವಳಿ ಚಿತ್ರಣ: ಪುಸ್ತಕ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಮಾತ ನಾಡಿ, ‘ಸಮಚಿತ್ತದ ಸಮದರ್ಶಿ’ ಪುಸ್ತಕ ಕೇವಲ ರಾಮಕೃಷ್ಣರ ಜೀವನ ಕಥನವಲ್ಲ. ಅನೇಕ ವ್ಯಕ್ತಿಗಳ ಉಲ್ಲೇಖ ಅಡಗಿದೆ. ಇದು ಅಶೋಕಪುರಂನ ಚಳವಳಿಯ ಚಿತ್ರಣವೂ ಹೌದು. ಅಶೋಕಪುರಂನಿಂದ ಮೂಡಿದ ಭಾರತೀಯ ಸಾಮಾಜಿಕ ಮತ್ತು ದಲಿತ ಕಲ್ಯಾಣದ ಆಂದೋಲನ ಕುರಿತೂ ಬೆಳಕು ಚೆಲ್ಲುತ್ತದೆ. ಕರ್ನಾಟಕ ಸಾಮಾಜಿಕ ಚರಿ ತ್ರೆಯ ಅಧ್ಯಯನ ದಾಖಲೆಯಾಗಿದೆ ಎಂದು ವ್ಯಾಖ್ಯಾನಿಸಿದರು. ಜಾತಿಯ ಪ್ರಜ್ಞೆ ತಲೆ ಯಿಂದ ಹೋಗದಿದ್ದಲ್ಲಿ ಸಾವಿರ ವರ್ಷ ಕಳೆದರೂ ಸಮಾಜ ಉದ್ಧಾರವಾಗಲ್ಲ. ವ್ಯಕ್ತಿಯ ಒಳಗಿನಿಂದ ಜಾತಿಯ ಪ್ರಜ್ಞೆ ಹೋಗಬೇಕೆ ಹೊರತು ಘೋಷಣೆಗಳಿಂದ ಅಲ್ಲ ಎಂಬು ದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ರಾಮಕೃಷ್ಣ ಅವರು, ಅಶೋಕಪುರಂನಲ್ಲಿ ಸ್ವಚ್ಛತಾ ಆಂದೋಲನ ಮಾಡಿದ್ದಾರೆ. ಸ್ವಚ್ಛ, ಸುಸಂ ಸ್ಕøತ ಭಾರತವನ್ನು ಕಟ್ಟಬೇಕು ಎಂದು ಪ್ರಯತ್ನಿಸಿದ್ದಾರೆ ಎಂದು ಬಣ್ಣಿಸಿದರು.

ಮೈಸೂರು ವಿವಿ ನ್ಯಾಯಶಾಸ್ತ್ರ ವಿಭಾಗದ ನಿರ್ದೇಶಕ ಸಿ.ಬಸವರಾಜು, ಆರ್‍ಎಸ್‍ಎಸ್‍ನ ದಕ್ಷಿಣ ಪ್ರಾಂತ ಪ್ರಚಾರಕ ಮ.ವೆಂಕಟರಾಮ್, ಲೇಖಕ ಅಶೋಕಪುರಂ ಗೋವಿಂದರಾಜು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅಧ್ಯಕ್ಷ ವಿ.ರಂಗನಾಥ್, ವಿನಾಯಕ ಕ್ರೀಡಾ, ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಎಸ್.ಆನಂದ ಮೂರ್ತಿ, ಯುವಜನ ಸಂಘದ ಕಾರ್ಯ ದರ್ಶಿ ಯೋಗೀಶ್ ಮತ್ತಿತರರಿದ್ದರು.

 

 

 

 

Translate »