ನಿಯಮ ಉಲ್ಲಂಘನೆ: 278 ವಾಹನ ವಶ
ಮೈಸೂರು

ನಿಯಮ ಉಲ್ಲಂಘನೆ: 278 ವಾಹನ ವಶ

May 27, 2021

ಮೈಸೂರು, ಮೇ 26(ಆರ್‍ಕೆ)-ಕೋವಿಡ್-19 ಹರಡುವಿಕೆಯ 2ನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಹೊರಡಿಸಿರುವ ಲಾಕ್‍ಡೌನ್ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮೈಸೂರು ನಗರ ಪೊಲೀಸರು ಕಾರ್ಯಾ ಚರಣೆಯನ್ನು ತೀವ್ರಗೊಳಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸರು ಮೇ 25ರಂದು ವಿಶೇಷ ಕಾರ್ಯಾಚರಣೆ ನಡೆಸಿದರು. ಯಾವುದೇ ನಿರ್ದಿಷ್ಟ ಅಗತ್ಯ ಉದ್ದೇಶವಿಲ್ಲದೇ ಓಡಾಡುತ್ತಿದ್ದವರನ್ನು ತಡೆದು ವಿಚಾರಣೆಗೊಳಪಡಿಸಿದಾಗ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿರು ವುದು ಕಂಡುಬಂದ ಹಿನ್ನೆಲೆಯಲ್ಲಿ 265 ದ್ವಿಚಕ್ರ ವಾಹನಗಳು, 9 ಕಾರುಗಳು ಹಾಗೂ 4 ಆಟೋರಿಕ್ಷಾ ಸೇರಿದಂತೆ ಮೈಸೂರು ನಗರದಲ್ಲಿ ಒಟ್ಟು 278 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಜೂನ್ 7ರವರೆಗೂ ಲಾಕ್‍ಡೌನ್ ನಿರ್ಬಂಧ ಆದೇಶ ಜಾರಿಯಲ್ಲಿದೆಯಾದರೂ, ಕೆಲ ಯುವಕರು ದ್ವಿಚಕ್ರ ವಾಹನ ಮತ್ತು ಕಾರು ಗಳಲ್ಲಿ ಜಾಲಿ ರೈಡ್ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕರ್ತವ್ಯನಿರತ ಪೊಲೀಸರು ಅಂತಹವರ ವಾಹನಗಳನ್ನು ವಶಪಡಿಸಿ ಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ಲಾಕ್‍ಡೌನ್ ಮಾರ್ಗಸೂಚಿ ಉಲ್ಲಂಘಿಸಿ ದವರ ವಾಹನಗಳನ್ನು ಒಮ್ಮೆ ವಶಕ್ಕೆ ಪಡೆದರೆ, ಕನಿಷ್ಠ ಒಂದು ವಾರದವರೆಗೆ ಬಿಡುವುದಿಲ್ಲ. ಆ ನಂತರವೂ ದಂಡ ಪಾವತಿಸಿಯೇ ಪಡೆಯಬೇಕಾಗಿದೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಅದೇ ರೀತಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರವನ್ನು ಪಾಲಿಸದೇ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿ ನೆಪ ದಲ್ಲಿ ಅಂಗಡಿಗಳ ಮುಂದೆ ಗುಂಪಾಗಿ ಸೇರುವವರ ವಿರುದ್ಧವೂ ಪೊಲೀಸರು ಸ್ಥಳದಂಡ ವಿಧಿಸು ತ್ತಿದ್ದರಾದರೂ ಲೆಕ್ಕಿಸದೆ ಜನಸಂದಣಿ ಉಂಟು ಮಾಡುತ್ತಿರುವುದು ಲಾಕ್‍ಡೌನ್ ನಿರ್ಬಂಧ ಸಡಿಲಿಕೆ ಸಮಯದಲ್ಲಿ ಕಂಡುಬರುತ್ತಿದೆ.
ಬೆಳಿಗ್ಗೆ 9.45 ಗಂಟೆ ಆಗುತ್ತಿದ್ದಂತೆಯೇ ಬಾಗಿಲು ಬಂದ್ ಮಾಡುವಂತೆ ಗರುಡ, ಪಿಸಿಆರ್ ವಾಹನಗಳಲ್ಲಿ ಪೊಲೀಸರು ಬೆನ್ನತ್ತು ತ್ತಾರೆ. 10ರ ನಂತರವೂ ಬಾಗಿಲು ತೆರೆದಿದ್ದರೆ ಬಂದ್ ಮಾಡಿಸುವ ಜೊತೆಗೆ ದಂಡವನ್ನೂ ವಿಧಿಸುತ್ತಿದ್ದಾರೆ. ಲಾಕ್‍ಡೌನ್ ಪರಿಸ್ಥಿತಿಗೆ ಜನರೂ ಹೊಂದಿಕೊಂಡಿದ್ದು ಅಗತ್ಯ ಸೇವೆ ಹೊರತು, ಎಲ್ಲರೂ ಮನೆಯಲ್ಲೇ ಇರುವುದರಿಂದ ಇಡೀ ದಿನ ನಗರದಾದ್ಯಂತ ಸಂಚಾರವಿಲ್ಲದೇ ದಿನವಿಡೀ ರಸ್ತೆಗಳು ಬಿಕೋ ಎನ್ನುತ್ತಿರುತ್ತವೆ.

ಸಿವಿಲ್ ಮತ್ತು ಸಂಚಾರ ಪೊಲೀಸರು ಮಾತ್ರ ಪ್ರಮುಖ ರಸ್ತೆ, ಜಂಕ್ಷನ್‍ಗಳಲ್ಲಿ ಕರ್ತವ್ಯದಲ್ಲಿರುತ್ತಾರೆ. ಆಂಬುಲೆನ್ಸ್, ರೋಗಿ ಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ವಾಹನ, ಲಸಿಕೆ, ಕೊರೊನಾ ಟೆಸ್ಟ್‍ಗೆ ಹೋಗುವವರ ವಾಹನಗಳನ್ನು ಪೊಲೀಸರು ಸಲೀಸಾಗಿ ಬಿಡುತ್ತಾರೆ. ಕೆಲವು ಕಡೆ ಸರ್ಕಲ್‍ಗಳಲ್ಲಿ ಸಂಪೂರ್ಣವಾಗಿ ಬ್ಯಾರಿಕೇಡ್ ಅಳವಡಿ ಸಿದ್ದು, ಅಲ್ಲಿ ಪೊಲೀಸರೂ ಇಲ್ಲದಿರುವುದ ರಿಂದ ವಾಹನಗಳು ಇನ್ನಿತರ ಮಾರ್ಗಗಳ ಮೂಲಕ ತೆರಳಬೇಕಾದ ಪರಿಸ್ಥಿತಿ ಇದೆ.

Translate »