ನಟಿ ಸಂಜನಾ ಬಂಧನ: ಐದು ದಿನ ಸಿಸಿಬಿ ವಶಕ್ಕೆ
ಮೈಸೂರು

ನಟಿ ಸಂಜನಾ ಬಂಧನ: ಐದು ದಿನ ಸಿಸಿಬಿ ವಶಕ್ಕೆ

September 9, 2020

ಬೆಂಗಳೂರು,ಸೆ.8- ಕನ್ನಡ ಚಿತ್ರರಂಗದಲ್ಲಿ ವ್ಯಾಪಕವಾಗಿ ರುವ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಮತ್ತೋರ್ವ ನಟಿಯನ್ನು ಬಂಧಿಸಿದ್ದಾರೆ. ಈಗಾ ಗಲೇ ತಮ್ಮ ವಶದಲ್ಲಿರುವ ನಟಿ ರಾಗಿಣಿಯ ತೀವ್ರ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಟಿ ಸಂಜನಾ ಗಲ್ರಾನಿ ಯನ್ನು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ 6.30ಕ್ಕೆ ಸಂಜನಾ ಗಲ್ರಾನಿ ವಾಸಿಸುತ್ತಿರುವ ಇಂದಿರಾನಗರದ ಅಪಾರ್ಟ್ ಮೆಂಟ್‍ನ ಫ್ಲ್ಯಾಟ್‍ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಪರಿಶೀಲನೆ ಬಳಿಕ ಸಂಜನಾರನ್ನು ವಶಕ್ಕೆ ಪಡೆದರು.

ಈ ವೇಳೆ ಮೂರು ಮೊಬೈಲ್, ಲ್ಯಾಪ್‍ಟಾಪ್, ಪೆನ್‍ಡ್ರೈವ್ ಇನ್ನಿತರೆ ತನಿಖೆಗೆ ಪೂರಕ ವಸ್ತುಗಳ ವಶಕ್ಕೆ ಪಡೆದರು. ನಂತರ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ಕೋವಿಡ್-19 ಪರೀಕ್ಷೆ ನಡೆಸಿದ ನಂತರ ವೀಡಿಯೋ ಕಾನ್ಫರೆನ್ಸ್ ಮೂಲಕ 8ನೇ ಎಸಿಎಂಎಂ ಕೋರ್ಟ್‍ಗೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು ನಟಿ ಸಂಜನಾ ಗಲ್ರಾನಿಯನ್ನು 5 ದಿನಗಳ ಕಾಲ ಸಿಸಿಬಿ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದಲ್ಲಿ ಎ-14 ಆರೋಪಿಯಾಗಿರುವ ಸಂಜನಾ, ಬೆಂಗಳೂರಿನಲ್ಲಿ ಈವೆಂಟ್ ಮ್ಯಾನೇಜ್‍ಮೆಂಟ್ ನಡೆಸುತ್ತಿದ್ದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಪಾಲುದಾರಿಕೆ ಹೊಂದಿರುವುದು ಸಿಸಿಬಿ ತನಿಖೆ ವೇಳೆ ಬಯಲಾಗಿತ್ತು. ಅಲ್ಲದೇ, ಪೃಥ್ವಿ ಮತ್ತು ಸಂಜನಾ ನಡುವೆ ಭಾರೀ ಮೊತ್ತದ ವ್ಯವಹಾರ ನಡೆದಿರುವುದು ಕೂಡ ಬೆಳಕಿಗೆ ಬಂದಿತ್ತು. ದೊಡ್ಡ ದೊಡ್ಡ ಐಷಾರಾಮಿ ಹೋಟೆಲ್‍ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡುವುದೂ ದಾಖಲೆಗಳಿಂದ ಬಯಲಾಗಿತ್ತು. ಇದಕ್ಕೂ ಮೊದಲು ಡ್ರಗ್ ಜಾಲ ಸಂಬಂಧ ಡ್ರಗ್ ಪೆಡ್ಲರ್ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಹಾಗೂ ಸಂಜನಾ ಆಪ್ತ ರಾಹುಲ್‍ನನ್ನು ಸಿಸಿಬಿ ವಶಕ್ಕೆ ಪಡೆದು ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿತ್ತು. ಸಿಸಿಬಿ ತನಿಖೆ ವೇಳೆಯಲ್ಲಿ ಈ ಇಬ್ಬರೂ ಸಂಜನಾ ಈ ಜಾಲದಲ್ಲಿ ಇರುವ ಸುಳಿವನ್ನು ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಇಂದು ಬೆಳಗ್ಗೆ ದಿಢೀರ್ ಸಂಜನಾ ನಿವಾಸದ ಮೇಲೆ ದಾಳಿ ನಡೆಸಿದ್ದರು. ಸಂಜನಾರನ್ನು ವಶಕ್ಕೆ ಪಡೆದ ನಂತರ ಅವರನ್ನು ಸಿಸಿಬಿ ಕಚೇರಿಯಲ್ಲಿ 3 ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಲಾಯಿತು. ಈ ವೇಳೆ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ ನಂತರವೇ ಸಿಸಿಬಿ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಆರಂಭಿಸಿತು.

ನಾನೇನು ಆರೋಪಿನಾ…! ನಾನು ಎಲ್ಲಿಗೂ ಬರುವುದಿಲ್ಲ…!!
ನಾನೇಕೆ ನಿಮ್ಮೊಂದಿಗೆ ಬರಬೇಕು, ನೀವು ನನಗೆ ನೋಟಿಸ್ ನೀಡಿಲ್ಲ, ಏಕಾಏಕಿ ದಾಳಿ ನಡೆಸಿದ್ದೀರಿ? ನಾನೇನು ಆರೋಪಿನಾ? ನಾನು ಬರುವುದಿಲ್ಲ ಎಂದು ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲು ಮುಂದಾದ ಸಿಸಿಬಿ ಪೆÇಲೀಸರ ಮೇಲೆ ಸಂಜನಾ ಹರಿಹಾಯ್ದು, ಕೂಗಾಡಿ ರಂಪಾಟ ಮಾಡಿದ್ದಾರೆನ್ನಲಾಗಿದೆ. ಸಿಸಿಬಿ ದಾಳಿ ವೇಳೆ ಸಂಜನಾ ಮನೆಯಲ್ಲಿ ಮಲಗಿದ್ದು, ನಿದ್ರೆಯಿಂದ ಎದ್ದಿರಲಿಲ್ಲ. ಪೆÇಲೀಸರು ಮನೆಗೆ ಬಂದ ಸಂದರ್ಭ ದಲ್ಲಿ ಸಂಜನಾ ತಾಯಿ ಬಾಗಿಲು ತೆಗೆದಿದ್ದಾರೆ. ನಂತರ ನೋಟಿಸ್ ತೋರಿಸಿದ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಸಂಜನಾ ಅವರಿಗೆ ವಿಚಾರ ವನ್ನು ತಿಳಿಸಿ, ತನಿಖೆಗೆ ಸಹಕಾರ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಸಂಜನಾ ಅವರನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿ ದ್ದಾರೆ. ಈ ವೇಳೆ ಕೂಗಾಡಿರುವ ಸಂಜನಾ, ಮನೆಯಲ್ಲಿ ಏನೂ ಸಿಗದೇ ಇದ್ದರೂ ನನ್ನನ್ನು ವಶಕ್ಕೆ ಪಡೆಯುತ್ತಿದ್ದೀರಿ. ನಾನೇಕೆ ನಿಮ್ಮೊಂದಿಗೆ ಬರಬೇಕು. ನನಗೆ ನೀವು ನೋಟಿಸ್ ಕೊಟ್ಟಿಲ್ಲ. ಏಕಾಏಕಿ ದಾಳಿ ನಡೆಸಿದ್ದೀರಿ. ನಾನೇನು ಆರೋಪಿನಾ? ನಾನು ಬರುವುದಿಲ್ಲ ಎಂದು ರಂಪಾಟ ಮಾಡಿದ್ದಾರೆಂದು ತಿಳಿದುಬಂದಿದೆ. ಸಂಜನಾ ಅವರು ತೀವ್ರವಾಗಿ ಕೂಗಾಡುತ್ತಿದ್ದಂತೆಯೇ ಅಧಿಕಾರಿಗಳು, ನೀವೀಗ ನಮ್ಮ ವಶದಲ್ಲಿದ್ದೀರಿ. ಹೀಗಾಗಿ ನಾವು, ನೀವು ಹೇಳಿದಂತೆ ಕೇಳಲು ಸಾಧ್ಯವಿಲ್ಲ. ನಾವು ಹೇಳಿದ್ದನ್ನು ನೀವು ಕೇಳಬೇಕು. ಸರ್ಚ್ ವಾರೆಂಟ್ ಸಂದರ್ಭದಲ್ಲಿ ವಿರೋಧ ಮಾಡಿದರೆ ನಿಮಗೇ ಕಷ್ಟವಾಗುತ್ತದೆ ಎಂದು ಹೇಳಿ, ಸಂಜನಾ ಅವರನ್ನು ತಣ್ಣಗಾಗುವಂತೆ ಮಾಡಿದ್ದಾರೆ.

 

Translate »