ಮುಂಬೈ, ಸೆ.8- ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಸಂಬಂಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ(ಎನ್‍ಸಿಬಿ) ತನಿಖೆ ಕೈಗೊಂ ಡಿದ್ದು 2 ದಿನಗಳ ತೀವ್ರ ವಿಚಾರಣೆ ಬಳಿಕ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ. ಪ್ರಕರಣ ಸಂಬಂಧ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ ಯನ್ನು ಎನ್‍ಸಿಬಿ ಅಧಿಕಾರಿಗಳು ಕಳೆದ ವಾರ ಬಂಧಿಸಿ ದ್ದರು. ಇದೀಗ ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದು, ಎನ್‍ಸಿಬಿ ವಿಚಾರಣೆ ವೇಳೆ ಸತ್ಯ ಒಪ್ಪಿಕೊಂಡಿ ರುವ ರಿಯಾ, ತಾವು ಸುಶಾಂತ್ ಜೊತೆ ಗಾಂಜಾ ತುಂಬಿಸಿದ್ದ ಸಿಗರೇಟ್ ಅನ್ನು ಸೇದುತ್ತಿದ್ದೆ ಎಂದು ಹೇಳಿದ್ದಾರೆ. 2016ರಿಂದ ಸುಶಾಂತ್ ಸಹ ಡ್ರಗ್ಸ್ ಸೇವಿಸುತ್ತಿದ್ದರು ಎಂಬ ಆಘಾತಕಾರಿ ಅಂಶವನ್ನೂ ರಿಯಾ ಎನ್‍ಸಿಬಿ ಎದುರು ಬಹಿರಂಗಪಡಿಸಿದ್ದಾರೆ. ದಿಯಾ ಚಕ್ರವರ್ತಿಯನ್ನು ಮುಂಬೈ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
