ಶಶಿಕಲಾ ಬೆಂಬಲಿಗರ ಕಾರು ಭಸ್ಮ; ಕೃಷ್ಣಗಿರಿ ಟೋಲ್ ಬಳಿ ಪಟಾಕಿ ಸಿಡಿದು ಅನಾಹುತ
ಮೈಸೂರು

ಶಶಿಕಲಾ ಬೆಂಬಲಿಗರ ಕಾರು ಭಸ್ಮ; ಕೃಷ್ಣಗಿರಿ ಟೋಲ್ ಬಳಿ ಪಟಾಕಿ ಸಿಡಿದು ಅನಾಹುತ

February 10, 2021

ಕೃಷ್ಣಗಿರಿ: ಶಶಿಕಲಾ ಅದ್ಧೂರಿ ಸ್ವಾಗತಕ್ಕೆ ಕಾರಿನಲ್ಲಿ ಪಟಾಕಿ ತರಲಾಗಿತ್ತು. ಪಟಾಕಿ ಇಟ್ಟಿದ್ದ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕೃಷ್ಣಗಿರಿಯ ಟೋಲ್‍ಗೇಟ್ ಬಳಿ ಘಟನೆ ಸಂಭ ವಿಸಿದೆ. ಶಶಿಕಲಾ ನಟರಾಜನ್ ಬೆಂಗಳೂರಿಂದ ಚೆನ್ನೈಗೆ ಆಗ ಮಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಸ್ವಾಗತಕ್ಕೆ ಅಭಿಮಾನಿ ಗಳು ತಯಾರಿ ಮಾಡಿಕೊಂಡಿದ್ದರು. ಸ್ವಾಗತ ಸಂಭ್ರಮದ ಮಧ್ಯೆ ಅವಘಡವೊಂದು ಸಂಭವಿಸಿದೆ. ಶಶಿಕಲಾ ಸ್ವಾಗತಕ್ಕೆಂದು ಪಟಾಕಿಯನ್ನು ಹೊತ್ತು ತರುತ್ತಿದ್ದ ಕಾರ್, ಕೃಷ್ಣಗಿರಿ ಟೋಲ್ ಬಳಿ ಬೆಂಕಿಗಾಹುತಿಯಾಗಿದ್ದು, ಪಟಾಕಿ ತಂದಿದ್ದ ಅಭಿ ಮಾನಿಯ ಕಾರುಗಳು ಸಂಪೂರ್ಣ ಭಸ್ಮವಾಗಿವೆ.

Translate »