ಚಾ.ಬೆಟ್ಟದಲ್ಲಿ ಪರಿಸರ ಮಾರಕ ಕಾಮಗಾರಿ ವಿರುದ್ಧ ಮೈಸೂರಿನ ಪಾರ್ಕ್‍ಗಳಲ್ಲಿ ಸತ್ಯಾಗ್ರಹ
ಮೈಸೂರು

ಚಾ.ಬೆಟ್ಟದಲ್ಲಿ ಪರಿಸರ ಮಾರಕ ಕಾಮಗಾರಿ ವಿರುದ್ಧ ಮೈಸೂರಿನ ಪಾರ್ಕ್‍ಗಳಲ್ಲಿ ಸತ್ಯಾಗ್ರಹ

January 30, 2023

ಮೈಸೂರು,ಜ.29(ಎಂಟಿವೈ)- ಉತ್ತಮ ಆಡಳಿತಕ್ಕಾಗಿ ಹಾಗೂ ಪರಿಸರಕ್ಕೆ ಮಾರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸದಂತೆ ಆಗ್ರಹಿಸಿ ಮೈಸೂರಲ್ಲಿ ಭಾನುವಾರ ಮೈಸೂರು ಗ್ರಾಹಕರ ಪರಿಷತ್(ಎಂಜಿಪಿ) ಕರೆ ನೀಡಿದ್ದ ಒಂದು ದಿನದ ಸತ್ಯಾಗ್ರಹಕ್ಕೆ ಉತ್ತಮವಾದ ಬೆಂಬಲ ವ್ಯಕ್ತವಾಗಿದ್ದು, ಮೈಸೂರಿನ ಹಲವೆಡೆ ಧರಣಿ ನಡೆಸಿ ಪರಿಸರ ಸಂರಕ್ಷಣೆ ಕ್ರಮಕ್ಕಾಗಿ ಒಕ್ಕೊರಲಿನ ಆಗ್ರಹ ಮಾಡಿದರು.

ಮೈಸೂರಿನ ಚೆಲುವಾಂಬ ಪಾರ್ಕ್, ನ್ಯಾಯಾ ಲಯದ ಮುಂಭಾಗ, ನಿವೇದಿತಾನಗರ ಪಾರ್ಕ್, ಟಿ.ನರಸೀಪುರ ರಸ್ತೆಯ ನೇತಾಜಿನಗರ ಪಾರ್ಕ್ ಮತ್ತು ರಾಮಕೃಷ್ಣನಗರ ಉದ್ಯಾನವನ, ವಿಜಯ ನಗರ ಸೇರಿದಂತೆ ವಿವಿಧೆಡೆ ನಡೆದ ಸತ್ಯಾಗ್ರಹ ದಲ್ಲಿ ಮಕ್ಕಳು, ಹಿರಿಯ ನಾಗರಿಕರು, ಮಹಿಳೆ ಯರು, ವಿದ್ಯಾರ್ಥಿಗಳು, ಯುವ ಜನರು ಒಳ ಗೊಂಡಂತೆ ವಿವಿಧ ವಯೋಮಾನದ ಪರಿಸರ ಕಾಳಜಿಯುಳ್ಳ ನಾಗರಿಕರು ಪಾಲ್ಗೊಂಡು ಮೈಸೂರು ನಗರ, ಮೈಸೂರಿನ ಪರಿಸರ ಸಂರಕ್ಷಣೆಗೆ ಉತ್ತಮ ಆಡಳಿತ ನೀಡುವಂತೆ ಆಗ್ರಹಿಸಿದರು. ಇದೇ ವೇಳೆ ವಾಯುವಿಹಾರಿಗಳಿಗೆ, ದಾರಿ ಹೋಕರಿಗೆ, ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಸತ್ಯಾಗ್ರಹಕ್ಕೆ ಬೆಂಬಲ ಯಾಚಿಸಿದರು.

ಚೆಲುವಾಂಬ ಪಾರ್ಕ್: ಮೈಸೂರಿನ ಚೆಲು ವಾಂಬ ಪಾರ್ಕ್‍ನಲ್ಲಿ ಎಂಜಿಪಿ ಆಯೋಜಿಸಿದ್ದ ಸತ್ಯಾಗ್ರಹದಲ್ಲಿ ಸಿಎಫ್‍ಟಿಆರ್‍ಐ ವಿಶ್ರಾಂತ ನಿರ್ದೇ ಶಕ ಡಾ.ವಿ.ಪ್ರಕಾಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೈಸೂರಿನ ಸುತ್ತಮುತ್ತಲಿನ ಪರಿ ಸರ ನಾಶವಾಗುತ್ತಿದೆ. ವಿವಿಧ ಸ್ವರೂಪದಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಮೈಸೂರು ಗ್ರಾಹಕರ ಪರಿಷತ್ ಶ್ರಮಿಸು ತ್ತಿದೆ. ಈ ನಡುವೆ ಮೈಸೂರಿನ ಎಲ್ಲಾ ನಿವಾಸಿ ಗಳು ಆತ್ಮಾವಲೋಕನ ಮಾಡಿಕೊಂಡು `ಮೈಸೂರು ನಮಗೆ ಮುಖ್ಯವೋ ಅಥವಾ ನಾವು ಮೈಸೂ ರಿಗೆ ಮುಖ್ಯವೋಎಂದು ಪ್ರಶ್ನಿಸಿಕೊಳ್ಳಬೇಕು. ನಮಗೆ ಮೈಸೂರು ಮುಖ್ಯವಾಗಿದ್ದರೆ, ನಾವು ಇಂದು ಮೈಸೂರಿಗೆ ಏನು ಕೊಡುಗೆ ನೀಡಬೇಕು ಎಂದು ಆಲೋಚಿಸಬೇಕು. ಮೈಸೂರಿನ ಪರಿಸರ ಸಂರಕ್ಷ ಣೆಗೆ ಎಂಜಿಪಿಯ
ಡಾ.ಭಾಮಿ ಶೆಣೈ ಅವರಂತಹ ಹಿರಿಯರು ಹೋರಾಟ ಮಾಡುತ್ತಿದ್ದಾರೆ. ಇಂತಹ ಹೋರಾಟದಲ್ಲಿ ಯುವ ಜನತೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆ ನೀಡಲು ರಚನಾತ್ಮಕ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಮೈಸೂರಿನ ಬಹುತೇಕ ಎಲ್ಲಾ ಉದ್ಯಾನವನಗಳಲ್ಲಿ ಕರ್ನಾಟಕ ಉದ್ಯಾನವನಗಳು, ಆಟದ ಮೈದಾನ ಮತ್ತು ಬಯಲು ಪ್ರದೇಶಗಳ (ಸಂರಕ್ಷಣೆ ಮತ್ತು ನಿಯಂತ್ರಣ) ನಿಯಮ 1985ನ್ನು ಉಲ್ಲಂಘಿಸಲಾಗುತ್ತದೆ. ಈ ನಿಯಮ ಗಾಳಿಗೆ ತೂರಿ ಕಾಂಕ್ರಿಟ್ ಕಟ್ಟಡ ನಿರ್ಮಿಸಲು ಮುಂದಾಗಿರುವುದು ವಿಷಾದನೀಯ. ಈ ಹಿಂದೆ ಯಾದವಗಿರಿ, ಗೋಕುಲಂ ಸೇರಿದಂತೆ ಎಲ್ಲಾ ಬಡಾವಣೆಗಳು ಕಿರು ಅರಣ್ಯದಂತೆ ಇದ್ದವು. ಆದರೆ ಈಗಾಗಲೇ ಎಲ್ಲವನ್ನೂ ನುಂಗಿಕೊಂಡಿದ್ದೇವೆ. ಎಲ್ಲೆಲ್ಲೂ ಕಟ್ಟಡಗಳು ನಿರ್ಮಾಣ ವಾಗಿದೆ. ಮುಂದಿನ 20 ವರ್ಷದಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಲಿವೆ. ಹೀಗೆ ಸುಮ್ಮನಿದ್ದರೆ ಚಾಮುಂಡಿಬೆಟ್ಟವೂ ಕಣ್ಮರೆಯಾಗಲಿದೆ ಎಂದು ವಿಷಾದಿಸಿದರು.

ಎಂಜಿಪಿ ಮುಖ್ಯಸ್ಥ ಡಾ.ಭಾಮಿ ಶೆಣೈ ಮಾತನಾಡಿ, ಉತ್ತಮ ಆಡಳಿತಕ್ಕಾಗಿ ಒತ್ತಾಯಿಸಿ ನಡೆಸಿದ ಸತ್ಯಾಗ್ರಹಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಹೋರಾಟ ಆರಂಭವಾಗಿದೆ. ಇದರಲ್ಲಿ ಸಾಕಷ್ಟು ಮಂದಿ ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ಸಧೃಡಗೊಳ್ಳಲಿದೆ. ಇಂದು ನಡೆದ ಸತ್ಯಾಗ್ರಹದಲ್ಲಿ ಕೋ.ಸು ನರಸಿಂಹ ಮೂರ್ತಿ, ಮೇಜರ್ ಜನರಲ್ (ನಿವೃತ್ತ) ಎಸ್.ಜಿ.ಂಬತ್ಕೆರೆ, ವೆಂಕಟೇಶರಾವ್, ಡಾ.ಜಯರಾಂ, ಸೀತೆ ರಾವ್, ಉಷಾ ಮತ್ತು ನಂಜಾಪುರ ಯದುರಾಜ್, ಡಾ.ವಿ. ಪ್ರಕಾಶ್, ರವಿಚಂದ್ರ ಬೇಕಲ್, ನೀಲಾಂಬಿಕಾ ಹಾಗೂ ಇನ್ನಿತರರು ಭಾಗವಹಿಸಿ ಮೈಸೂರಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದರು.

ಭ್ರಷ್ಟಾಚಾರ ತಾಂಡವಾಡುತ್ತಿರುವುದರಿಂದ ಉತ್ತಮ ಆಡಳಿತ ನಿರೀಕ್ಷೆ ಸಾಧ್ಯ ವಾಗುತ್ತಿಲ್ಲ. ಮುಡಾ, ಪಾಲಿಕೆ ಹಾಗೂ ಆರ್‍ಟಿಒಗಳಲ್ಲಿ ಮಿತಿ ಮೀರಿ ಭ್ರಷ್ಟಾಚಾರ ನಡೆಯುತ್ತಿರುವುದು ಈಗಾಗಲೇ ಸಾಬೀತಾಗಿದೆ. ಇದರಿಂದ ಅವೈಜ್ಞಾನಿಕ, ಪರಿಸರ ಮಾರಕ ಯೋಜನೆಗಳ ಅನುಷ್ಠಾನಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಕಿಡಿಕಾರಿದರು.

ನೇತಾಜಿನಗರದಲ್ಲಿ ಧರಣಿ: ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರುವ ನೇತಾಜಿ ನಗರದ ಗಣಪತಿ ದೇವಾಲಯದ ಆವರಣದಲ್ಲಿ ಪರಿಸರ ಬಳಗದ ಸದಸ್ಯರು ಮತ್ತು ನೇತಾಜಿ ನಗರದ ನಿವಾಸಿಗಳು ಉತ್ತಮ ಆಡಳಿತಕ್ಕಾಗಿ ಸತ್ಯಾಗ್ರಹ ನಡೆಸಿದರು.

ಈ ವೇಳೆ ಪರಿಸರ ಬಳಗದ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ಮಾತನಾಡಿ, ಹದಗೆಟ್ಟ ಆಡಳಿತಕ್ಕೆ ಚುರುಕು ಮುಟ್ಟಿಸಲು ಈ ಸತ್ಯಾಗ್ರಹ ನಡೆಸಲಾಗಿದೆ. ಪರಿಸರ ಸಂರಕ್ಷಣೆಗಾಗಿ ಉತ್ತಮ ಆಡಳಿತದ ಅವಶ್ಯಕತೆ ಇದೆ. ಅದಕ್ಕಾಗಿ ಹೋರಾಟ ನಿರಂತರ ವಾಗಿ ನಡೆಲಾಗುತ್ತದೆ. ಇಂದಿನ ಸತ್ಯಾಗ್ರಹಕ್ಕೆ ಉತ್ತಮ ಬೆಂಬಲ ದೊರೆತಿದೆ ಎಂದರು.

ನೇತಾಜಿನಗರದ ನಿವಾಸಿ ಶಿವಬಸಪ್ಪ ಮಾತನಾಡಿ, ನೇತಾಜಿನಗರ ಹಾಗೂ ಸುತ್ತಮುತ್ತ ಲಿನ ಬಹುತೇಕ ಎಲ್ಲಾ ಬಡಾವಣೆಗಳ ರಸ್ತೆಗಳು ಹಾಳಾಗಿವೆ. ಇದರಿಂದ ಸ್ಥಳೀಯರು ತೊಂದರೆಗೀಡಾಗುವಂತಾಗಿದೆ. ರಸ್ತೆಗಳನ್ನು ದುರಸ್ತಿ ಮಾಡದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಸಂಕಲ್ಪ ಮಾಡಬೇಕು ಸಲಹೆ ನೀಡಿದರು.

ಪರಿಸರ ಬಳಗದ ಸದಸ್ಯೆ ಲೀಲಾ ಶಿವಕುಮಾರ್ ಮಾತನಾಡಿ, ಯಾವುದೇ ಹೋರಾಟ ಮಾಡಿದರೂ ಒಗ್ಗಟ್ಟು ಮುಖ್ಯ. ಒಗ್ಗಟ್ಟಿನಿಂದ ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಇದಕ್ಕೆ ಪರಿಸರ ಬಳಗ ಮಾಡಿರುವ ಕೆಲಸಗಳು ಸಾಕ್ಷಿ. ಮುಂದಿನ ದಿನಗಳಲ್ಲೂ ಒಗ್ಗಟ್ಟು ಅಗತ್ಯ ಎಂದರು. ಪ್ರತಿಭಟನೆಯಲ್ಲಿ ಪರಿಸರ ಬಳಗದ ಸದಸ್ಯರಾದ ರಾಜಗೋಪಾಲ್, ಸವಿತಾಗೌಡ, ಜವರೇಶ್, ಜವರಪ್ಪ, ಸುಶೀಲಾ, ಶ್ರೀಲಕ್ಷ್ಮಿ, ಸುಮಲತಾ, ಗಂಟಯ್ಯ, ಡಾ.ಕೃಷ್ಣಮೂರ್ತಿ, ನೇತಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮೇಶ್, ನೇತಾಜಿನಗರ ನಿವಾಸಿಗಳಾದ ಕೃಷ್ಣ, ಗುರುಸ್ವಾಮಿ, ಲೋಲ ಕುಮಾರ್, ಶಿವಪ್ಪ, ಚಂದ್ರಶೇಖರ್, ಜನಾರ್ದನ, ಬಸಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »