`ಸಂವಿಧಾನ ಬಚಾವೋ, ದೇಶ ಬಚಾವೋ’ ಪ್ರತಿಭಟನಾ ಧರಣಿ  ಜನಸಂಖ್ಯೆಗನುಗುಣವಾಗಿ ಎಲ್ಲರಿಗೂ ಮೀಸಲಾತಿ
ಮೈಸೂರು

`ಸಂವಿಧಾನ ಬಚಾವೋ, ದೇಶ ಬಚಾವೋ’ ಪ್ರತಿಭಟನಾ ಧರಣಿ ಜನಸಂಖ್ಯೆಗನುಗುಣವಾಗಿ ಎಲ್ಲರಿಗೂ ಮೀಸಲಾತಿ

April 3, 2023

ಮೈಸೂರು,ಏ.2(ಪಿಎಂ)- ರಾಜ್ಯ ಬಿಜೆಪಿ ಸರ್ಕಾ ರದ ದುರಾಡಳಿತ, ಭ್ರಷ್ಟಾಚಾರದಿಂದ ಬೇಸತ್ತಿರುವ ಜನತೆ ಈ ಬಾರಿ ಕಾಂಗ್ರೆಸ್‍ಗೆ ಅಧಿಕಾರ ನೀಡಲು ತೀರ್ಮಾನಿಸಿದ್ದು, ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆ ಬಳಿಕ ಒಕ್ಕಲಿಗರು, ಲಿಂಗಾ ಯತರು, ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿ ದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಮೈಸೂರಿನ ಪುರಭವನದ ಡಾ.ಬಿ.ಆರ್.ಅಂಬೇ ಡ್ಕರ್ ಪ್ರತಿಮೆ ಆವರಣದಲ್ಲಿ ಬಿಜೆಪಿ ಮೀಸಲಾತಿ ಯನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳು ತ್ತಿದೆ ಎಂದು ಆರೋಪಿಸಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾನುವಾರ `ಸಂವಿಧಾನ ಬಚಾವೋ, ದೇಶ ಬಚಾವೋ’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡಿದರು.

ನಾವು ಅಧಿಕಾರಕ್ಕೆ ಬಂದ ಬಳಿಕ ಒಟ್ಟು ಮೀಸ ಲಾತಿ ಶೇ.50ಕ್ಕಿಂತಲೂ ಹೆಚ್ಚು ಮಾಡಿ ಸಂವಿ ಧಾನದ 9ನೇ ಶೆಡ್ಯೂಲ್‍ಗೆ ಸೇರಿಸಿ, ಎಲ್ಲಾ ಸಮು ದಾಯಗಳಿಗೂ ಅವರ ಜನಸಂಖ್ಯೆಗೆ ಅನುಗುಣ ವಾಗಿ ಮೀಸಲಾತಿ ಕೊಡುತ್ತೇವೆ ಎಂದರು.

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಮೀಸಲಾತಿ ಹಂಚಿಕೆ ಮಾಡಿದೆ. ಆದರೆ ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಿಸದೇ ಹಂಚಿರುವ ಮೀಸಲಾತಿ ಊರ್ಜಿತ ವಾಗದು. ಹಾಗಾದರೆ ಇವರ ಉದ್ದೇಶವೇನು? ಎಂದು ಪ್ರಶ್ನಿಸಿದ ಅವರು, ಮೀಸಲಾತಿ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಗೊಂದಲ ಸೃಷ್ಟಿಸಿದೆ. ಅದನ್ನು ವಿರೋ ಧಿಸಿ ಕಾಂಗ್ರೆಸ್‍ನಿಂದ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ನಡೆಸಲಾಗಿದೆ. ವಿಭಾಗೀಯ ಮಟ್ಟದಲ್ಲೂ ಪ್ರತಿಭಟನೆ ಮಾಡಬೇಕೆಂದು ತೀರ್ಮಾ ನಿಸಿ, ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸ ಲಾಗುತ್ತಿದೆ ಎಂದು ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನ ಕೊಟ್ಟಿದ್ದಾರೆ. ಜಾತಿ ವ್ಯವಸ್ಥೆ ಕಾರಣಕ್ಕಾಗಿ ದೇಶದಲ್ಲಿ ಅಸಮಾನತೆ ಇದ್ದು, ಇದನ್ನು ಹೊಗಲಾಡಿಸುವುದು ಸಂವಿಧಾನದ ಮೂಲ ಉದ್ದೇಶ. ಅಸಮಾನತೆ ಹೊಗಲಾಡಿಸುವುದು ಸರ್ಕಾರಗಳ ಕರ್ತವ್ಯ. ಇಲ್ಲವಾದರೆ ಅಸಮಾನತೆಯಿಂದ ನರಳಿದ ಜನತೆಯೇ ಸ್ವಾತಂತ್ರ್ಯದ ಸೌಧ ದ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಅವರು ಸಂವಿಧಾನದ ಸಭೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಾಯ್ತಪ್ಪಿ ಬಿಜೆಪಿ ಎಂದ ಸಿದ್ದರಾಮಯ್ಯ: 2011ರ ಜನಗಣತಿಯಂತೆ ಪರಿಶಿಷ್ಟ ಜಾತಿ ಯವರು ರಾಜ್ಯದಲ್ಲಿ ಶೇ.17.15ರಷ್ಟು ಜನಸಂಖ್ಯೆ ಹೊಂದಿದ್ದು, ಪರಿಶಿಷ್ಟ ಪಂಗಡದವರು ಶೇ.6.95ರಷ್ಟು ಇದ್ದಾರೆ. ಈ ಇಬ್ಬರನ್ನೂ ಸೇರಿಸಿದಂತೆ ಶೇ.24.1 ಜನಸಂಖ್ಯೆ ಆಗಲಿದೆ. ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕೆಂಬುದನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಅದಕ್ಕಾಗಿ ಹೋರಾಟ ಮಾಡುತ್ತಿದ್ದರು. ಹಾಗಾಗಿ ನಾವು ಮತ್ತು ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಮಾಡಿದ್ದಾಗ ಎಂದು ಬಾಯ್ತಪ್ಪಿ ಹೇಳಿದ ಸಿದ್ದರಾಮಯ್ಯ ತಕ್ಷಣವೇ ಸರಿಪಡಿಸಿಕೊಂಡು, ಜೆಡಿಎಸ್‍ನವರೊಂದಿಗೆ ಸಮ್ಮಿಶ್ರ ಸರ್ಕಾರ ಮಾಡಿದ್ದಾಗ ನ್ಯಾ.ನಾಗಮೋಹನ್‍ದಾಸ್ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಲಾಯಿತು ಎಂಸಿದರು.

ಬಳಿಕ ಬಿಜೆಪಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದ ವೇಳೆಗೆ ಆಯೋಗ ವರದಿ ನೀಡಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂರುವರೆ ವರ್ಷಗಳ ಕಾಲ ಸದರಿ ವರದಿ ಕೊಳೆಯುತ್ತ ಬದ್ದಿತು. ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಫ್ರೀಡಂ ಪಾರ್ಕ್‍ನಲ್ಲಿ ವಾಲ್ಮೀಕಿ ಸ್ವಾಮೀಜಿ ಹೋರಾಟ ನಡೆಸಿದರು. ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿಯವರು ಒತ್ತಾಯಿಸಿದರು. ಆದರೂ ಜಗ್ಗಲಿಲ್ಲ ಎಂದು ದೂರಿದರು.

ಕೇಂದ್ರಕ್ಕೆ ತಲುಪದ ಪ್ರಸ್ತಾವನೆ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ವ ಪಕ್ಷಗಳ ಸಭೆ ಕರೆದರು. ಪರಿಶಿಷ್ಟ ಜಾತಿ, ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಸಂಬಂಧ ಕಾನೂನು ರೂಪಿಸಿ ಬಳಿಕ ಸಂವಿಧಾದ 9ನೇ ಶೆಡ್ಯುಲ್‍ಗೆ ಸೇರಿಸಲು ಕ್ರಮ ವಹಿಸಬೇಕೆಂದು ಸಭೆಯಲ್ಲಿ ನಾನೂ ಒತ್ತಾಯಿಸಿದೆ. ಇಲ್ಲವಾದರೆ ಇದು ಊರ್ಜಿತವಾಗಲ್ಲ ಎಂದು ಎಚ್ಚರಿಸಿದ್ದೆ. ಕೊನೆಗೆ ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಿಸಲು ಕ್ರಮ ವಹಿಸುವುದಾಗಿ ಒಪ್ಪಿಕೊಂಡರು. ಇದಾಗಿ 4 ತಿಂಗಳಾದರೂ ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆಯನ್ನೇ ಸಲ್ಲಿಸಿರಲಿಲ್ಲ. ಇದಕ್ಕೂ ಪೂರ್ವ ದಲ್ಲಿ ವರ್ಷಗಟ್ಟಲೆ ವಿಳಂಬ ಮಾಡಿದ್ದೂ ಇಲ್ಲಿ ಗಮನಾರ್ಹ. ಕಾಂಗ್ರೆಸ್ ಪಕ್ಷದಿಂದ ಧರಣಿಗೆ ಮುಂದಾದಾಗ ಮಾ.23ರಂದು ಮುಖ್ಯ ಕಾರ್ಯದರ್ಶಿ ಮೂಲಕ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದಾರೆ ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇ ವಾಲ, ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಜಮೀರ್ ಅಹಮ್ಮದ್, ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಎ.ಆರ್ .ಕೃಷ್ಣಮೂರ್ತಿ, ವಾಸು, ಪಿ.ಎಂ.ನರೇಂದ್ರಸ್ವಾಮಿ, ಮುಖಂಡರಾದ ಚಂದ್ರಮೌಳಿ, ಕೆ.ಹರೀಶ್‍ಗೌಡ, ಕೆ.ಮರೀ ಗೌಡ, ಎಂ.ಪ್ರದೀಪ್‍ಕುಮಾರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಸಂಸದ್ ಆರ್.ಧ್ರುವನಾರಾಯಣ ಪುತ್ರ ದರ್ಶನ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Translate »