ಚುನಾವಣಾ ವೆಚ್ಚದ ಮೇಲೆ ಕಣ್ಗಾವಲು ತಂಡ ತೀವ್ರ ನಿಗಾ
ಮೈಸೂರು

ಚುನಾವಣಾ ವೆಚ್ಚದ ಮೇಲೆ ಕಣ್ಗಾವಲು ತಂಡ ತೀವ್ರ ನಿಗಾ

March 16, 2023

ಮೈಸೂರು, ಮಾ. 15(ಆರ್‍ಕೆ)- ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೆಚ್ಚದ ಮೇಲೆ ತೀವ್ರ ನಿಗಾ ಇಡಲು ಸ್ಥಿರ ಕಣ್ಗಾವಲು ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿ ಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಸಭಾಂಗಣದಲ್ಲಿ ಇಂದು ಚುನಾವಣೆ ಸಿದ್ಧತೆ ಕುರಿತಂತೆ ಪೂರ್ವಭಾವಿ ಸಭೆ ನಡೆಸಿ ಸೆಕ್ಟರ್ ಅಧಿಕಾರಿ ಗಳು, ಪೊಲೀಸ್, ಅರಣ್ಯ, ಕಂದಾಯ, ಜಿಎಸ್‍ಟಿ, ವಾಣಿಜ್ಯ ತೆರಿಗೆ, ಅಬಕಾರಿ, ಆದಾಯ ತೆರಿಗೆ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.

ಚುನಾವಣಾ ಅಕ್ರಮ ತಡೆಗಟ್ಟಲು ಸ್ಥಿರ ಕಣ್ಗಾವಲು ತಂಡ (Sಣಚಿಣiಛಿ Suಡಿveiಟಟಚಿಟಿಛಿe ಖಿeಚಿm) ರಚಿಸಲಾಗಿದ್ದು, ಅದರಲ್ಲಿ ಪೊಲೀಸ್, ವಾಣಿಜ್ಯ ತೆರಿಗೆ, ಆದಾಯ ತೆರಿಗೆ, ಅರಣ್ಯ ಹಾಗೂ ಅಬಕಾರಿಗಳು ಇದ್ದಾರೆ. ಎಲ್ಲಾ ತಾಲೂಕು, ಜಿಲ್ಲಾ ರಸ್ತೆಗಳ ಚೆಕ್‍ಪೋಸ್ಟ್ ಮತ್ತು ಮೈಸೂರು ನಗರ ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಚೆಕ್ ಪೋಸ್ಟ್‍ಗಳಿಗೆ ನಿಯೋಜಿಸಲಾಗಿದೆ ಎಂದ ಅವರು, ಹಣ, ಮದ್ಯ, ಗೃಹೋಪಯೋಗಿ ವಸ್ತು, ಉಡುಗೊರೆ, ಆಭರಣ, ಮಾರಕಾಸ್ತ್ರ ಹಾಗೂ ಇನ್ನಿತರ ವಸ್ತುಗಳನ್ನು ದಾಖಲಾತಿ ಇಲ್ಲದೆ ಅಕ್ರಮವಾಗಿ ಸಾಗಣೆ ಮಾಡುವುದರ ಬಗ್ಗೆ ಚೆಕ್‍ಪೋಸ್ಟ್‍ನಲ್ಲಿ ಕೆಲಸ ಮಾಡುವ ಸ್ಟ್ಯಾಟಿಕ್ ಸರ್ವೈಲನ್ಸ್ ಟೀಂ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಾಲ ಕಾಲಕ್ಕೆ ಭಾರತ ಚುನಾವಣಾ ಆಯೋಗವು ಹೊರಡಿಸುವ ಮಾರ್ಗಸೂಚಿಯನ್ವಯ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಬೇಕು. ಯಾವುದೇ ಸಬೂಬು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬಾರದು ಎಂದ ಅವರು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಚುನಾವಣಾ ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಯಾಗಿರುತ್ತಾರೆ. ಯಾವುದೇ ಲೋಪವಾಗದಂತೆ ಮುಕ್ತವಾಗಿ ಚುನಾವಣೆ ನಡೆಯಲು ಪ್ರತಿ ಯೊಬ್ಬರೂ ಸಹಕರಿಸಬೇಕು ಎಂದರು.

ಈSಖಿ, ಗಿSಖಿ, Pಗಿಖಿ, ಂಇಔ, ಂಖಿ, ಒಅಅ, ಒಅಒಅ ಸೇರಿದಂತೆ ವಿವಿಧ ತಂಡಗಳಿಗೆ ಅವರ ಕಾರ್ಯಭಾರ, ಜವಾಬ್ದಾರಿ ಹಾಗೂ ಕರ್ತವ್ಯದ ಬಗ್ಗೆ ತರಬೇತಿ ನೀಡಲಾಗುವುದು. 252 ಸೆಕ್ಟರ್ ಅಧಿಕಾರಿಗಳನ್ನು ಸೆಕ್ಟರ್ ಮ್ಯಾಜಿಸ್ಟ್ರೇಟರ್‍ಗಳನ್ನಾಗಿ ಮಾಡಲು ಪ್ರಸ್ತಾವನೆ ಸಲ್ಲಿಸಲಾ ಗಿದೆ. ನಿರ್ಭೀತಿಯಿಂದ ಮತದಾನ ಮಾಡಲು ವಲ್ನರಬಲ್ ಮತ್ತು ಕ್ರಿಟಿಕಲ್ ಮತಗಳ ವಿಶ್ಲೇಷಣೆ ಮಾಡಬೇಕು.

ಗುರ್ತಿಸಿರುವ 826 ಕ್ರಿಟಿಕಲ್ ಪೊಲಿಂಗ್ ಸ್ಟೇಷನ್‍ಗಳ ಮಾನದಂಡಗಳನ್ನು ಅರಿತು ಕೆಲಸ ಮಾಡಿ ಎಂದು ಡಾ. ಕೆ.ವಿ.ರಾಜೇಂದ್ರ ಸೂಚನೆ ನೀಡಿದರು.
ಸರಿಯಾಗಿ ಪೂರ್ವಸಿದ್ಧತೆ ಮಾಡದಿದ್ದಲ್ಲಿ ಗೊಂದಲಗಳಾಗುತ್ತವೆ. ಒತ್ತಡ ಹೆಚ್ಚಾದಾಗ ಕಡೇ ಗಳಿಗೆಯಲ್ಲಿ ತಪ್ಪುಗಳಾಗುವ ಸಾಧ್ಯತೆ ಇದೆ. ಸೂಕ್ತ ರೀತಿಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡು ಮಾಸ್ಟರ್ ಟ್ರೈನರ್, ಡೆಸಿಗ್ನೇಟೆಡ್ ರಿಟರ್ನಿಂಗ್ ಆಫೀಸರ್ ಗಳಿಂದ ತರಬೇತಿ ಪಡೆದು ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಿ ಬೂತ್ ಲೆವೆಲ್ ಜಾಗೃತಿ ಸಂಗ್ರಹಿಸಿ ಪಾರದರ್ಶಕವಾಗಿ ಶಾಂತಿಯುತ ಮತದಾನ ನಡೆಯಲು ಎಲ್ಲರೂ ಸಮಂಜಸವಾಗಿ ಕಾರ್ಯನಿರ್ವಹಿಸಿ ಎಂದು ಅವರು ತಿಳಿಸಿದರು. ರಾಜಕೀಯ ಪಕ್ಷಗಳು ನಿಯಮಾನುಸಾರ ಚುನಾವಣಾ ಪ್ರಚಾರ ಕೈಗೊಳ್ಳಲು ಅವಕಾಶವಿದೆ. ಅನಧಿಕೃತವಾಗಿ ಸಭೆ, ಸಮಾರಂಭ, ಪೋಸ್ಟರ್, ಗೋಡೆ ಬರಹಗಳಂತಹ ಪ್ರಚಾರ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು, ಒಬ್ಬ ವ್ಯಕ್ತಿ ಒಂದು ಬಾರಿಗೆ 50,000 ರೂ.ಗಳಿಗೆ ಮೀರಿ ನಗದನ್ನು ಕೊಂಡೊಯ್ಯಬಾರದು, ಆನ್‍ಲೈನ್ ಮನಿ ಟ್ರಾನ್ಸಾಕ್ಷನ್ ಬಗ್ಗೆಯೂ ಎಚ್ಚರ ವಹಿಸಬೇಕು ಎಂದು ಡಾ.ರಾಜೇಂದ್ರ ತಿಳಿಸಿದರು. ಮಾದರಿ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ಪ್ರತಿ ಪೊಲೀಸ್ ಠಾಣೆಗೊಂದರಂತೆ ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗುವುದು. ವಿಡಿಯೋಗ್ರಾಫರ್, ಪೊಲೀಸ್ ಅಧಿಕಾರಿಗಳೊಂದಿಗೆ ಕೆಲಸ ಮಾಡುವ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರಿಯಲ್ ಅಧಿಕಾರ ಹೊಂದಿದ ಅಧಿಕಾರಿ ನೇತೃತ್ವದ ಈ ಸ್ಕ್ವಾಡ್ ತಮ್ಮ ವ್ಯಾಪ್ತಿಯಲ್ಲಿ ಗಸ್ತು ಮಾಡಿ ಚುನಾವಣಾ ಅಕ್ರಮಗಳ ಬಗ್ಗೆ ನಿಗಾ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳು ಇದೇ ವೇಳೆ ಸೂಚನೆ ನೀಡಿದರು.

ಬೆದರಿಕೆ, ಸಮಾಜಘಾತುಕ ವ್ಯಕ್ತಿಗಳ ಆರ್ಭಟ, ಮದ್ಯ ಸಾಗಣೆ, ಶಸ್ತ್ರಾಸ್ತ್ರ ಸಾಗಣೆ, ಮತದಾರರಿಗೆ ಹಣದ ಅಮಿಷ, ಉಡುಗೊರೆ ನೀಡುವಂತಹ ದೂರುಗಳು ಬಂದಲ್ಲಿ ತಕ್ಷಣ ಫ್ಲೈಯಿಂಗ್ ಸ್ಕ್ವಾಡ್ ಸ್ಥಳಕ್ಕೆ ತೆರಳಿ ಕಾನೂನು ರೀತಿಯ ಕ್ರಮ ಜರುಗಿಸಬೇಕು. ಪ್ರಚಾರ ಸಭೆ, ಸಮಾರಂಭ, ಬೃಹತ್ ರ್ಯಾಲಿಯಂತಹ ಕಾರ್ಯಕ್ರಮಗಳನ್ನು ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಿ ತಕ್ಷಣವೇ ಚುನಾವಣಾ ಆಯೋಗದ ಪೋರ್ಟಲ್ ಡಿಸೈನ್ ಮೂಲಕ ರವಾನಿಸಬೇಕು ಎಂದು ಅವರು ತಿಳಿಸಿದರು.

ಟೆಕ್ನಾಲಜಿ ಬಳಸಿ: ಯಾವುದೇ ಸ್ಥಳದಲ್ಲಿ ಹಣ, ಮದ್ಯ ಹಂಚಲಾಗುತ್ತಿದೆ ಎಂದು ಮಾಹಿತಿ ಬಂದ ತಕ್ಷಣ ಸಮೀಪದಲ್ಲಿರುವ ವಿಡಿಯೋಗ್ರಾಫರ್‍ಗಳನ್ನು ಕಳುಹಿಸಿ ರೆಕಾರ್ಡಿಂಗ್ ಮಾಡಿಸಿ, ಪ್ರಕರಣ ದಾಖಲಿಸಿ ವಶಪಡಿಸಿಕೊಂಡ ಮಾಲುಗಳ ಬಗ್ಗೆ ವ್ಯಾಪ್ತಿಯ ರಿಟರ್ನಿಂಗ್ ಆಫೀಸರ್‍ಗೆ ವರದಿ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಮೈಸೂರು ನಗರ ಪೊಲೀಸ್ ಆಯುಕ್ತ ಬಿ. ರಮೇಶ್, ಎಸ್ಪಿ ಸೀಮಾ ಲಾಟ್ಕರ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ ರೆಡ್ಡಿ, ಅಡಿಷನಲ್ ರೂಪಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್, ಆದಾಯ ತೆರಿಗೆ ಹೆಚ್ಚುವರಿ ಆಯುಕ್ತ ಶ್ರೀಧರ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »