ಯುಪಿ, ಪಂಜಾಬ್ ಸೇರಿ 4 ರಾಜ್ಯಗಳಲ್ಲಿ ಶಾಲೆ ಆರಂಭ
ಮೈಸೂರು

ಯುಪಿ, ಪಂಜಾಬ್ ಸೇರಿ 4 ರಾಜ್ಯಗಳಲ್ಲಿ ಶಾಲೆ ಆರಂಭ

October 20, 2020

ನವದೆಹಲಿ,ಅ.19-ಹಂತಹಂತವಾಗಿ ಶಾಲೆ ಆರಂಭಕ್ಕೆ ಕೇಂದ್ರದ ಅನುಮತಿ ಬೆನ್ನಲ್ಲೇ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಸೋಮವಾರದಿಂದ ಶಾಲೆ ಗಳ ಪುನಾರಂಭಗೊಂಡಿವೆ. ಈ ಪೈಕಿ ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ 9ರಿಂದ 12ನೇ ತರಗತಿವರೆಗಿನ ಶಾಲೆಗಳ ಆರಂಭವಾಗಿದ್ದು, ಹಿಮಾಚಲ ಪ್ರದೇಶ ದಲ್ಲಿ 10 ಮತ್ತು 12 ತರಗತಿ ವಿದ್ಯಾರ್ಥಿ ಗಳಿಗೆ ಮಾತ್ರವೇ ಶಾಲೆ ಆರಂಭಗೊಂ ಡಿದೆ. ಈ ಮೂರೂ ರಾಜ್ಯಗಳಲ್ಲೂ ಮಕ್ಕಳು ಮತ್ತು ಶಿಕ್ಷಣ ಸಿಬ್ಬಂದಿಗೆ ಯಾವುದೇ ಕೊರೊನಾ ಸೋಂಕು ತಗಲುವುದನ್ನು ತಡೆಯಲು ವಿವಿಧ ನಿಯಂತ್ರಣಾ ಕ್ರಮ ಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಶಾಲೆಗಳು ಪ್ರಾರಂಭ ವಾಗುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರದ ಶಿಕ್ಷಣ ಇಲಾಖೆ ವಿದ್ಯಾರ್ಥಿ ಗಳ ಆರೋಗ್ಯ ಹಿತದೃಷ್ಟಿಯಿಂದ ಕಟ್ಟು ನಿಟ್ಟಿನ ಮಾರ್ಗಸೂಚಿಯನ್ನು ಹೊರಡಿ ಸಿದೆ. ಪ್ರತಿಯೊಬ್ಬರು ಇದನ್ನು ಅನು ಸರಿಸುವಂತೆ ಸೂಚನೆ ನೀಡಲಾಗಿದೆ.

 

 

Translate »