ಗುಂಡ್ಲುಪೇಟೆ: ದ್ವಿತೀಯ ಪಿಯುಸಿಯಲ್ಲಿ ಪಟ್ಟಣದ ಕೆ. ಎಸ್.ನಾಗರತ್ನಮ್ಮ ಪದವಿ ಪೂರ್ವ ಕಾಲೇಜಿಗೆ ಶೇ.90ರಷ್ಟು ಫಲಿತಾಂಶ ಬಂದಿದೆ. ಕಲಾ ಮತ್ತು ವಾಣ ಜ್ಯ ವಿಭಾಗ ದಿಂದ ಒಟ್ಟು 156 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 140 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಕಾಲೇಜಿಗೆ ಶೇ.90ರಷ್ಟು ಫಲಿತಾಂಶ ದೊರಕಿದೆ.
ಇದರಲ್ಲಿ 13 ಅತ್ಯುನ್ನತ, 92 ಉನ್ನತ ಶ್ರೇಣ , 30 ದ್ವಿತೀಯ ಹಾಗೂ 4 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣ ಜ್ಯ ವಿಭಾಗದ ಸಯ್ಯದ್ ಹಿಬ್ಜು ರೆಹಮಾನ್ 600ಕ್ಕೆ 578 ಅಂಕಗಳಿಸಿ ಕಾಲೇಜಿಗೆ ಟಾಪರ್ ಆಗಿದ್ದಾನೆ. ಈ ಸಾಲಿನಲ್ಲಿಯೂ ಹೆಚ್ಚಿನ ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಪಿ.ಸುನಿಲ್ ಹಾಗೂ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.