ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ
News

ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ

April 8, 2022

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಮತ್ತೆ ಪರಿಷ್ಕರಣೆಗೊಂಡಿದೆ. ಇದೀಗ ಅಂತಿಮ ವೇಳಾಪಟ್ಟಿಯನ್ನು ಪಿಯುಸಿ ಬೋರ್ಡ್ ಪ್ರಕಟಿಸಿದೆ. ಈಗಾಗಲೇ ಪಿಯುಸಿ ಬೋರ್ಡ್ ತಾಂತ್ರಿಕ ಕಾರಣ ನೀಡಿ 3-4 ಬಾರಿ ವೇಳಾ ಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಇದೀಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದ್ದು, ಏಪ್ರಿಲ್ 22ರಿಂದ ಮೇ 18ರ ವರೆಗೆ ಪರೀಕ್ಷೆಗಳು ನಡೆಯಲಿದೆ.

ವೇಳಾಪಟ್ಟಿ ಹೀಗಿದೆ: ಏಪ್ರಿಲ್ 22- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏಪ್ರಿಲ್ 23- ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಏಪ್ರಿಲ್ 25- ಅರ್ಥಶಾಸ್ತ್ರ, ಏಪ್ರಿಲ್ 26- ರಸಾ ಯನಶಾಸ್ತ್ರ, ಹಿಂದುಸ್ಥಾನಿ ಸಂಗೀತ, ಮನಃಶಾಸ್ತ್ರ, ಮೂಲ ಗಣಿತ, ಏಪ್ರಿಲ್ 27- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಏಪ್ರಿಲ್ 28- ಕನ್ನಡ, ಅರೇಬಿಕ್, ಮೇ 4- ಭೂಗೋಳಶಾಸ್ತ್ರ, ಜೀವಶಾಸ್ತ್ರ, ಮೇ 5- ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್, ಮೇ 6- ಇಂಗ್ಲಿಷ್, ಮೇ 10- ಇತಿಹಾಸ, ಭೌತಶಾಸ್ತ್ರ, ಮೇ 12- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ 14- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ, ಮೇ 17- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ, ಮೇ 18- ಹಿಂದಿ

Translate »