ಜೆ.ಪಿ.ನಗರದ ಅಕ್ಕಮಹಾದೇವಿ ಪ್ರತಿಮೆ ನೋಡಿ   ಸಂತಸ ವ್ಯಕ್ತಪಡಿಸಿದ ತೇಜಸ್ವಿನಿ ಅನಂತಕುಮಾರ್
ಮೈಸೂರು

ಜೆ.ಪಿ.ನಗರದ ಅಕ್ಕಮಹಾದೇವಿ ಪ್ರತಿಮೆ ನೋಡಿ  ಸಂತಸ ವ್ಯಕ್ತಪಡಿಸಿದ ತೇಜಸ್ವಿನಿ ಅನಂತಕುಮಾರ್

March 1, 2021

ಮೈಸೂರು,ಫೆ.28(ಆರ್‍ಕೆಬಿ)- ಮೈಸೂರಿನ ಜೆ.ಪಿ.ನಗರ ಶರಣ ವೇದಿಕೆ ವತಿಯಿಂದ ನಿರ್ಮಿಸಿರುವ ಅತೀ ಎತ್ತ ರದ ಅಕ್ಕಮಹಾದೇವಿ ಪ್ರತಿಮೆಯನ್ನು ಅದಮ್ಯ ಚೇತನ ಟ್ರಸ್ಟ್‍ನ ಅಧ್ಯಕ್ಷರೂ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಹಾಜರಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅಕ್ಕ ಮಹಾದೇವಿ ಪ್ರತಿಮೆ ನಿರ್ಮಾಣದ ಕುರಿತು ಅವರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ನಗರಪಾಲಿಕೆ ಸದಸ್ಯ ರಾದ ಶಾಂತಮ್ಮ ವಡಿವೇಲು, ಶಾರ ದಮ್ಮ ಈಶ್ವರ್, ಪ್ರತಿಮೆಯ ಶಿಲ್ಪಿ ವೆಂಕ ಟಾಚಲಪತಿ, ಶರಣ ವೇದಿಕೆ ಅಧ್ಯಕ್ಷ ಎಸ್.ಪುಟ್ಟರಾಜಪ್ಪ, ಪದಾಧಿಕಾರಿಗಳಾದ ನಾಗೇಂದ್ರಕುಮಾರ್, ಎಸ್.ನಂದೀಶ್, ಬಿ.ಮಹದೇವಸ್ವಾಮಿ, ಸದಾಶಿವ, ಪರ ಮೇಶ್ವರಪ್ಪ, ನಾಗರಾಜು, ಚಂದ್ರಶೇಖರ್, ಬಿಜೆಪಿ ಮುಖಂಡರಾದ ನೂರ್ ಫಾತಿಮಾ, ಈಶ್ವರ್, ವಡಿವೇಲು, ದೇವರಾಜೇಗೌಡ, ಇನ್ನಿತರರು ಉಪಸ್ಥಿತರಿದ್ದರು.

 

 

 

 

 

 

Translate »