ನಂಜರಾಜ ಬಹದ್ದೂರ್ ಕೇಂದ್ರದ ನಿರಾಶ್ರಿತರಿಗೆ ಸ್ವ ಉದ್ಯೋಗ
ಮೈಸೂರು

ನಂಜರಾಜ ಬಹದ್ದೂರ್ ಕೇಂದ್ರದ ನಿರಾಶ್ರಿತರಿಗೆ ಸ್ವ ಉದ್ಯೋಗ

April 19, 2020

ಮೈಸೂರು, ಏ.18(ಎಂಕೆ)- ಕೊರೊನಾ ಹರಡ ದಂತೆ ತಡೆಯಲು ದಿಢೀರ್ ಎಂದು ಲಾಕ್‍ಡೌನ್ ಜಾರಿಗೊಂಡಿದ್ದರಿಂದ ಕೆಲಸ ಮತ್ತು ಆಶ್ರಯ ಕಳೆದುಕೊಂಡಿದ್ದವರು ಈಗ ತಾತ್ಕಾಲಿಕವಾಗಿ ಸ್ವಉದ್ಯೋಗ ಕಂಡುಕೊಂಡಿದ್ದಾರೆ.

ಮೈಸೂರು ನಗರಪಾಲಿಕೆ ಆರಂಭಿಸಿದ ನಿರಾಶ್ರಿತರ ಆಶ್ರಯ ಕೇಂದ್ರಗಳಲ್ಲಿ ತಾತ್ಕಾಲಿಕ ನೆಲೆ ಕಂಡುಕೊಂಡಿ ರುವ ನೂರಾರು ನಿರಾಶ್ರಿತರು, ಸ್ವಉದ್ಯೋಗ ಮಾಡು ವುದಕ್ಕೆ ಅಗತ್ಯವಾದ ಕೌಶಲವನ್ನು ಕಲಿಯುತ್ತಿದ್ದಾರೆ. ನಗರದ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪ ದಲ್ಲಿರುವ ನಿರಾಶ್ರಿತರು 4 ದಿನಗಳಿಂದ ಪೇಪರ್ ಕವರ್ ತಯಾರಿಸುತ್ತಿದ್ದಾರೆ. ಈ ಕೇಂದ್ರದಲ್ಲಿ ಸದ್ಯ 93 ನಿರಾ ಶ್ರಿತರಿದ್ದು, ಹಿರಿಯರನ್ನು ಹೊರತುಪಡಿಸಿ ಉಳಿದವ ರೆಲ್ಲರೂ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪೇಪರ್ ಕವರ್ ತಯಾರಿಸುತ್ತಿದ್ದಾರೆ. ದಿನಕ್ಕೆ 15ರಿಂದ 18 ಕೆ.ಜಿ. (1000ಕ್ಕೂ ಹೆಚ್ಚು) ಪೇಪರ್ ಕವರ್‍ಗಳನ್ನು ಸಿದ್ಧ ಪಡಿಸುತ್ತಿದ್ದಾರೆ ಎಂದು ಈ ನಿರಾಶ್ರಿತರ ಕೇಂದ್ರದ ಉಸ್ತುವಾರಿ ಹೊತ್ತಿರುವ ಕ್ರೆಡಿಟ್-ಐ ಸಂಸ್ಥೆ ತಿಳಿಸಿದೆ.

ಫೆವಾರ್ಡ್-ಕೆ ಮತ್ತು ಧ್ವನಿ ಫೌಂಡೇಷನ್ ಸಹ ಯೋಗ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಮಾರ್ಗದರ್ಶನದಲ್ಲಿ ನಿರಾಶ್ರಿತರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಉದ್ಯೋಗ ಕಂಡುಕೊಳ್ಳುವುದಕ್ಕೂ ಸಹಕಾರ ನೀಡ ಲಾಗುತ್ತಿದೆ ಎಂದು ಕ್ರೆಡಿಟ್-ಐ ಸಂಸ್ಥೆ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ವರ್ಷ ಹೇಳಿದರು.

ಖರೀದಿ: ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪಕ್ಕೆ ಶನಿವಾರ ಭೇಟಿ ನೀಡಿದ ವಕೀಲರಾದ ಭಾನುಪ್ರಭ, ಕೆ.ಜಿಗೆ 30 ರೂ.ನಂತೆ 5 ಕೆ.ಜಿ ಪೇಪರ್ ಕವರ್‍ಗಳನ್ನು ಖರೀದಿಸಿದರು. ಅಲ್ಲದೇ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವವರ ಕುಶಲೋಪರಿ ವಿಚಾರಿಸಿದರು. ಪೇಪರ್ ಕವರ್ ತಯಾರಿಸುತ್ತಿ ರುವುದನ್ನು ಕಂಡು ಶ್ಲಾಘಿಸಿದರು.

ಕೇಂದ್ರದಲ್ಲಿರುವ ನಿರಾಶ್ರಿತರು ದಿನಗೂಲಿ ಕಾರ್ಮಿ ಕರು ಲಾಕ್‍ಡೌನ್ ಮುಗಿದ ತಕ್ಷಣ ಅವರಿಗೇನು ಕೆಲಸ ಸಿಗುವುದಿಲ್ಲ. ಆದ್ದರಿಂದ ಅವರಿಗೆ ಅಲ್ಪ ಪ್ರಮಾಣದ ಆದಾಯವಾದರೂ ಸಿಗುವಂತೆ ಮಾಡುವ ದೃಷ್ಟಿಯಿಂದ ಪೇಪರ್ ಕವರ್ ತಯಾರಿಕೆ ತರಬೇತಿ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಾವಿಜನ್ ಸ್ಟೋರ್, ಹಣ್ಣು-ತರಕಾರಿ ಅಂಗಡಿಗಳು ತೆರೆದಿರುವುದರಿಂದ ಪೇಪರ್ ಕವರ್‍ಗೆ ಹೆಚ್ಚಿಗೆ ಬೇಡಿಕೆ ಇದೆ ಎಂದು ವರ್ಷ ಹೇಳಿದರು.

Translate »