ಶಿಸ್ತಿನೊಂದಿಗೆ ಸೇವಾ ಜ್ಯೋತಿ  ಸೇರಿದರೆ ಜೀವನದಲ್ಲಿ ಏಳಿಗೆ ಸಾಧ್ಯ
ಮೈಸೂರು

ಶಿಸ್ತಿನೊಂದಿಗೆ ಸೇವಾ ಜ್ಯೋತಿ ಸೇರಿದರೆ ಜೀವನದಲ್ಲಿ ಏಳಿಗೆ ಸಾಧ್ಯ

April 25, 2022

ಮೈಸೂರು,ಏ.24(ಎಂಟಿವೈ)-ಶಿಸ್ತಿನ ಜೀವನದಲ್ಲಿ ಸೇವೆ ಎಂಬ ಜ್ಯೋತಿ ಸೇರಿದಾಗ ಮಾತ್ರ ಜೀವನದಲ್ಲಿ ಏಳಿಗೆ ಸಾಧಿಸಬಹುದು ಎಂದು ಮಾಜಿ ಸಂಸದ ಸಿಹೆಚ್.ವಿಜಯಶಂಕರ್ ಅಭಿಪ್ರಾಯಪಟ್ಟರು.

ಮೈಸೂರಿನ ಜಯಚಾಮರಾಜೇಂದ್ರ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಸಭಾಂಗಣದಲ್ಲಿ ಭಾನವಾರ ನಡೆದ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ 25ನೇ ವಾರ್ಷಿಕೋತ್ಸವ(ಬೆಳ್ಳಿ ಹಬ್ಬ) ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲೂ ಶಿಸ್ತು ಬಹುಮುಖ್ಯವಾಗಿ ಇರಲೇಬೇಕಾಗಿದೆ. ಯಾರ ಜೀವನದಲ್ಲಿ ಶಿಸ್ತು ಇಲ್ಲವೋ ಅಂತಹವರು ವಿಶೇಷತೆ ಯನ್ನು ಸಾಧಿಸಲು ಸಾಧ್ಯವಾಗುವುದೇ ಇಲ್ಲ. ಶಿಸ್ತಿನ ಜೀವನ ನಡೆಸುವ ವೇಳೆ ಸೇವೆ ಎಂಬ ಜ್ಯೋತಿ ಸೇರಿದರೆ ಅಂತಹವರು ಇನ್ನಷ್ಟು ಪ್ರಗತಿಯನ್ನು ಹೊಂದುತ್ತಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮಹನೀ ಯರನ್ನು ಗಮನಿಸಿದಾಗ ಶಿಸ್ತು ಮತ್ತು ಸೇವಾ ಮನೋಭಾವ ಕಾಣಬಹುದು. ಈ ಎರಡು ಇದ್ದರೆ ಮಾತ್ರ ಸಾಧನೆ ಶಿಖರವೇ ರಲು ಸಾಧ್ಯವಾಗಲಿದೆ. ಶಿಸ್ತು ಬದುಕಿನ ಒಂದು ಭಾಗವಾಗದ್ದ ಸಂದರ್ಭದಲ್ಲಿ ಇನ್ನೊಂದು ಕಡೆ ಸೇವೆ ದೃಷ್ಟಿಕೋನ ಹೊಂದಿರ ಬೇಕು. ಇವೆರಡು ರಥದ ಎರಡು ಚಕ್ರವಿದ್ದಂತೆ. ರಥ ಮುಂದೆ ಸಾಗಬೇಕಾದರೆ ಎರಡೂ ಚಕ್ರಗಳು ಸಮಾನವಾಗಿ ಚಲಿಸಬೇಕಾ ಗುತ್ತದೆ. ಆ ನಿಟ್ಟಿನಲ್ಲಿ ಶಿಸ್ತು, ಸೇವೆ ಎರಡನ್ನು ಅಳವಡಿಸಿಕೊಳ್ಳ ದಿದ್ದರೆ ಜೀವನ ನಿಬಾಯಿಸುವುದು ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸಿ, ಸೇವೆ ಮಾಡುವುದನ್ನು ಹೇಳಿಕೊಡುತ್ತಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಸಾಮಾನ್ಯವಾಗಿ ಶಾಲಾ ಅವಧಿಯಲ್ಲಿ ಮಕ್ಕಳ ವ್ಯಕ್ತಿತ್ವ ಬದಲಿಸುವ ಮಹತ್ತರ ಜವಾಬ್ದಾರಿಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನಿರ್ವಹಿಸುತ್ತಿವೆ. ಮಕ್ಕಳನ್ನು ಉತ್ತಮ ದಾರಿ ಯತ್ತ ಸಾಗಲು ಹಾಗೂ ಅವರ ವ್ಯಕ್ತಿತ್ವ ಬೆಳೆಸಲು ಈ ಸಂಸ್ಥೆ ಶ್ರಮಿ ಸುತ್ತಿದೆ. 1947ರಲ್ಲೇ ಆರಂಭವಾದ ಈ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಮೂಡಿಸುತ್ತಿದೆ. ಈ ಹಿಂದೆ ಮೈಸೂರು ವಿವಿ ಯಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಆರಂಭಿಸಲು ಸಂಸ್ತೆ ರಾಜ್ಯ ಘಟಕದ ಮುಖ್ಯ ಆಯುಕ್ತರಾಗಿರುವ ಪಿಜಿಆರ್ ಸಿಂದ್ಯಾ ಅವರು ಸಲಹೆ ನೀಡಿದ್ದರು. ವಿವಿ ಮಟ್ಟದಲ್ಲಿ ಈ ಸಂಸ್ಥೆ ಆರಂಭವಾದರೆ ನಾನೇ ಮೊದಲಿಗನಾಗಿ ಸದಸ್ಯತ್ವ ಪಡೆಯುತ್ತೇನೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಳೆದ 25 ವರ್ಷಗಳಿಂದ ಉತ್ತಮವಾದ ಸೇವೆ ಸಲ್ಲಿಸುತ್ತಾ ಬಂದಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಮಾಡುವ ಮೂಲಕ ಜೀವನ ರೂಪಿಸಿಕೊಳ್ಳುವುದನ್ನು ಕಲಿಸುತ್ತಿದೆ. ಈ ಸಂಸ್ಥೆ ಇನ್ನಷ್ಟು ಏಳಿಗೆ ಸಾಧಿಸುವಂತೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪ್ರಗತಿ ಗೈಡ್ ಗ್ರೂಪ್‍ನ ಕಾವ್ಯಶ್ರೀ ಎಂಬುವರು ಒಂದು ವ್ಹೀಲ್ ಚೇರ್ ಹಾಗೂ ಪಕ್ಷಿಗಳ ಪಾಲನಾ ಸಂಸ್ಥೆಗೆ ಆರ್ಥಿಕ ನೆರವು ನೀಡಿ ಗಮನ ಸೆಳೆದರು. ದಕ್ಷಿಣ ವಲಯದ ಸಹಾಯಕ ನಿರ್ದೇಶಕಿ ಕುಮುದಾ ಮೆಹ್ತಾ, ಗೈಡ್ ವಿಭಾಗದ ರಾಜ್ಯ ಆಯುಕ್ತೆ ರಾಧಾ ವೆಂಕಟೇಶ್, ಮೈಸೂರು ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮುಖ್ಯ ಆಯುಕ್ತ ಪಿ.ಪಿಶ್ವನಾಥ್, ಕಾರ್ಯದರ್ಶಿ ಜಮೀಲ್, ಪ್ಯಾರಡೈಸ್ ಸ್ಕೌಟ್ಸ್ ಗ್ರೂಪ್ ಅಧ್ಯಕ್ಷ ಡಾ.ಬಿ.ಕೆ.ಅಜೇಯ್, ಗೈಡ್ ವಿಭಾಗದ ಜಿಲ್ಲಾ ಆಯುಕ್ತರು ಪುಷ್ಪವಲ್ಲಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »