`ಸ್ವಚ್ಛ ಭಾರತ್’ ಪರಿಣಾಮ ಚಿತ್ರ ಬರೆದು ವಿವರಿಸಿದ ಚಿಣ್ಣರು
ಮೈಸೂರು

`ಸ್ವಚ್ಛ ಭಾರತ್’ ಪರಿಣಾಮ ಚಿತ್ರ ಬರೆದು ವಿವರಿಸಿದ ಚಿಣ್ಣರು

January 18, 2021

ಮೈಸೂರು, ಜ.17(ಎಂಟಿವೈ)-ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ವರ್ಷದಿಂದ ಯಾವುದೇ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳದೇ ಮನೆಯಲ್ಲಿಯೇ ಇದ್ದ ಚಿಣ್ಣರು ಮೈಸೂರು ಮಹಾನಗರ ಪಾಲಿಕೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡು `ಸ್ವಚ್ಛ ಭಾರತ್’ ಅಭಿಯಾನ ಹೇಗಿರಬೇಕು ಎಂಬ ಪರಿಕಲ್ಪನೆಯಲ್ಲಿ ಚಿತ್ರ ಬರೆದು ಗಮನ ಸೆಳೆದರು. ಮೈಸೂರಿನ ಪುರಭವನದ ಆವರಣದಲ್ಲಿ ನಗರ ಪಾಲಿಕೆ ವಲಯ ಕಚೇರಿ 6ರÀ ವತಿಯಿಂದ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 5ರಿಂದ 14 ವರ್ಷದೊಳಗಿನ 40ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಸ್ವಚ್ಛ ಭಾರತ್ ನಂತರ ಕಂಡುಬಂದ ಮೈಸೂರು, ಮಹಾತ್ಮಗಾಂಧೀಜಿಯ ಪರಿಕಲ್ಪನೆ, ಸ್ವಚ್ಛಗೊಂಡ ವಸತಿ ಪ್ರದೇಶ, ವೈಜ್ಞಾನಿಕ ಕಸ ವಿಂಗಡಣೆ ಸೇರಿದಂತೆ ಇನ್ನಿತರ ಚಿತ್ರ ಬರೆದರು. ಕಳೆದ 1 ವರ್ಷದಿಂದ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಉಂಟಾಗಿರುವುದರಿಂದ ಪಾಲಿಕೆ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ಹಾಗೂ ಪಾಲಿಕೆ ಸದಸ್ಯರ ಮೂಲಕ ಚಿತ್ರಕಲಾ ಸ್ಪರ್ಧೆ ಬಗ್ಗೆ ಮಾಹಿತಿ ನೀಡಿತ್ತು. ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಚಿಣ್ಣರು ಹೆಸರು ನೋಂದಾಯಿಸಿಕೊಂಡಿ ದ್ದರು. ಅಲ್ಲದೇ ಚಿತ್ರ ರಚಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯ ಅಧಿಕಾರಿ ಡಾ.ಜಯಂತ್, ವಲಯ ಕಚೇರಿ 6ರ ಸಹಾಯಕ ಆಯುಕ್ತ ರಂಜಿತ್ ಕುಮಾರ್, ಎಇಇ ಮೃತ್ಯುಂಜಯ, ಪರಿಸರ ಅಭಿಯಂತರ ಮೈತ್ರಿ, ಆರೋಗ್ಯ ನಿರೀಕ್ಷಕರಾದ ಜಯಂತಿ, ರಾಜೇಶ್ವರಿ, ಯೋಗೇಶ್, ಮಂಜುನಾಥ್ ಇದ್ದರು.

Translate »