ಮಕ್ಕಳಿಗಾಗಿ ಪ್ರತಿ ಶನಿವಾರ ವಿಜ್ಞಾನ  ವಿಷಯಗಳ ಮಾಹಿತಿ ಮಾಲಿಕೆ
ಮೈಸೂರು

ಮಕ್ಕಳಿಗಾಗಿ ಪ್ರತಿ ಶನಿವಾರ ವಿಜ್ಞಾನ  ವಿಷಯಗಳ ಮಾಹಿತಿ ಮಾಲಿಕೆ

August 3, 2018

ಮೈಸೂರು:  ಮೈಸೂರಿನ ಹರಿ ವಿದ್ಯಾಲಯವು ಆಗಸ್ಟ್ ತಿಂಗಳಿಂದ ಮುಂದಿನ ಜನವರಿ 2019ರವರೆಗೆ ಪ್ರತಿ ಶನಿವಾರ ಮಧ್ಯಾಹ್ನ 3ರಿಂದ 4.30ರವರೆಗೆ 5ರಿಂದ 8ನೇ ತರಗತಿವರೆಗಿನ ಮಕ್ಕಳಿಗಾಗಿ ಪ್ರಚಲಿತ ವಿಜ್ಞಾನ ವಿಷಯಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ಚಟುವಟಿಕೆ ಮತ್ತು ಪ್ರದರ್ಶನ ಏರ್ಪಡಿಸಿದೆ ಎಂದು ಹರಿ ವಿದ್ಯಾಲಯದ ಕಾರ್ಯದರ್ಶಿ ಹೆಚ್.ಆರ್.ಭಗವಾನ್ ತಿಳಿಸಿದರು.

ಮಕ್ಕಳನ್ನು ಪಠ್ಯ ಪುಸ್ತಕಗಳ ಕಲಿಕೆಯಿಂದ ಆಚೆಗೂ ಕರೆದುಕೊಂಡು ಹೋಗುವ ಉದ್ದೇಶದ ಈ ಮಾಲಿಕೆಯ ಮೊದಲನೇ ಕಾರ್ಯಕ್ರಮ ಆ.4ರಂದು ಏರ್ಪಡಿಸಿದ್ದು, ಡಾ.ಅಬ್ದುಲ್ ಕಲಾಂ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳನ್ನು ಪಡೆದ ಡಾ.ಹೆಚ್.ಟಿ. ಚಿದಾನಂದ `ಮನಸ್ಸಿನ ವಿಜ್ಞಾನ’’ಕುರಿತು ಮಕ್ಕಳಿಗೆ ತಿಳಿಸಿಕೊಡಲಿದ್ದಾರೆ ಎಂದು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 40ರಿಂದ 50 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಪ್ರವೇಶ ಉಚಿತ. 5ರಿಂದ 8ನೇ ತರಗತಿ ಓದುತ್ತಿರುವ ಆಸಕ್ತ ಮಕ್ಕಳು ಮೊ- 9449809181 ಅಥವಾ 8317440583 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಹರಿ ವಿದ್ಯಾ ಲಯದ ಪ್ರಾಂಶುಪಾಲ ಶ್ರೀವತ್ಸ, ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಶ್ರೀಧರ್, ವಿಜ್ಞಾನ ಶಿಕ್ಷಕಿ ರೋಹಿಣಿ ಸಂದೇಶ್ ಉಪಸ್ಥಿತರಿದ್ದರು.

Translate »