ನಾಳೆ ಮೈಸೂರು ಜಿಲ್ಲೆಯ `100 ಶಾಲೆಗಳಿಗೆ 100 ಉಚಿತ ಪುಸ್ತಕ’ ವಿತರಣೆ
ಮೈಸೂರು

ನಾಳೆ ಮೈಸೂರು ಜಿಲ್ಲೆಯ `100 ಶಾಲೆಗಳಿಗೆ 100 ಉಚಿತ ಪುಸ್ತಕ’ ವಿತರಣೆ

August 3, 2018

ಮೈಸೂರು:  ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು ಆಗಸ್ಟ್ 4ರಂದು ಬೆಳಿಗ್ಗೆ 11ಕ್ಕೆ ಮೈಸೂರಿನ ರಾಜೇಂದ್ರ ಭವನದಲ್ಲಿ 100 ಶಾಲೆಗಳಿಗೆ ನೂರು ಪುಸ್ತಕ ಯೋಜನೆ’ ಅಂಗವಾಗಿ ಮೈಸೂರು ಜಿಲ್ಲೆಯ 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಹಮ್ಮಿ ಕೊಂಡಿದೆ. ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಪುಸ್ತಕಗಳ ಲೋಕಾರ್ಪಣೆ ಮತ್ತು ವಿತರಣೆ ನೆರವೇರಿಸುವರು. ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅಧ್ಯಕ್ಷತೆ ವಹಿ ಸುವರು. ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಹಿರಿಯ ನ್ಯಾಯವಾದಿ, ಚಿಂತಕ ಡಾ.ಸಿ.ಎಸ್.ದ್ವಾರಕನಾಥ್, ಡಿಡಿಪಿಐ ಎನ್.ಮಮತಾ ಭಾಗವಹಿಸುವರು ಎಂದರು.

ನೂರು ಶಾಲೆಗಳಿಗೆ ನೂರು ಪುಸ್ತಕ ಯೋಜನೆಯು ಸಂಘವು ಬಹು ಆಕಾಂಕ್ಷಿತ ಯೋಜನೆಯಾಗಿದ್ದು, ವಿವಿಧ ಪುಸ್ತಕ ದಾನಿಗಳಿಂದ ಪಡೆದಿರುವ ಪುಸ್ತಕಗಳನ್ನು ಈಗಾಗಲೇ ಬೆಂಗಳೂರು ಗ್ರಾಮಾಂತರ, ಧಾರವಾಡ, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ವಿತರಿಸಲಾಗಿದೆ. ಇದೀಗ ಮೈಸೂರು ಜಿಲ್ಲೆಯಲ್ಲಿ ನೀಡಲಾಗುತ್ತಿದೆ ಎಂದರು.

ಪ್ರತಿಯೊಂದು ಶಾಲೆಗೂ 6,670 ರೂ. ಮೌಲ್ಯದ ಡಿಕ್ಷನರಿ, ವಿಜ್ಞಾನ, ನೀತಿ ಕಥೆ, ಗ್ರಾಮರ್, ಮಾನವ ವಿಕಾಸ ಸೇರಿದಂತೆ ಮಕ್ಕಳಿಗೆ ಉಪಯುಕ್ತವಾದ ನೂರು ಪುಸ್ತಕ ಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ನೂರು ಶಾಲೆಗಳಿಗೆ ನೂರು ಪುಸ್ತಕಗಳ ಒಟ್ಟು ಮೌಲ್ಯ 10 ಲಕ್ಷ ರೂ.ಗಳಾಗಿದೆ. ಪಠ್ಯ ಪುಸ್ತಕಗಳನ್ನು ಮಾತ್ರ ಓದುವ ಮಕ್ಕಳಲ್ಲಿ ಪಠ್ಯೇತರ ಪುಸ್ತಕಗಳನ್ನು ಓದುವ ಹವ್ಯಾಸ, ಪುಸ್ತಕ ಪ್ರೀತಿ ಮತ್ತು ಪುಸ್ತಕ ಸಂಸ್ಕøತಿಯನ್ನು ಬೆಳೆಸುವುದು ಈ ಯೋಜನೆಯ ಉದ್ಧೇಶವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಂಘದ ಮೈಸೂರು ಜಿಲ್ಲಾ ಶಾಖೆಯನ್ನು ಉದ್ಘಾಟಿಸಲಾಗುವುದು ಎಂದೂ ಹೇಳಿ ದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸೃಷ್ಟಿ ನಾಗೇಶ್, ಪ್ರಕಾಶಕರಾದ ಡಿ.ಎನ್.ಲೋಕಪ್ಪ, ಚೇತನ್ ಕಣಬೂರು, ನಿಂಗರಾಜು ಚಿತ್ತಣ್ಣವರ್ ಉಪಸ್ಥಿತರಿದ್ದರು.

Translate »