ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ
ಮೈಸೂರು

ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ

February 6, 2023

ಮೈಸೂರು, ಫೆ.5(ಆರ್‍ಕೆಬಿ)- ಮೈಸೂರಿನ ನಂಜನ ಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ವರ್ಷದ ಜನ್ಮ ದಿನೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಆಯೋಜಿಸಿರುವ ಐದು ದಿನಗಳ ಸಹÀಸ್ರ ಚಂದ್ರ ದರ್ಶನ ಶಾಂತಿ ಹೋಮ ಭಾನುವಾರ ಸಂಪನ್ನಗೊಂಡಿತು.

108 ಹೋಮ ಕುಂಡಗಳಲ್ಲಿ ಕಳೆದ ಐದು ದಿನಗಳಿಂದ ಹೋಮ ನಡೆಸಲಾಯಿತು. ನಾಡಿನಲ್ಲಿ ಉತ್ತಮ ಮಳೆ, ಬೆಳೆ ಆಗಬೇಕು. ಅಕಾಲದಲ್ಲಿ ಮಳೆ ಆಗುವುದು ತಪ್ಪಿ, ಸಕಾಲದಲ್ಲಿ ಮಳೆಯಾಗಿ ದೇಶ ಸುಭೀಕ್ಷವಾಗಬೇಕು ಎಂದು ಪ್ರಾರ್ಥಿಸಿ ಈ ಹೋಮ ನಡೆಸಲಾಯಿತು.
ಮಾಘ ಪೂರ್ಣಿಮಾ ದಿನವಾದ ಭಾನುವಾರ ಬೆಳಗ್ಗೆ ಪವಮಾನ ಹೋಮ, ದತ್ತ ಹೋಮ, ಕಾರ್ಯಸಿದ್ದಿ ಹನುಮಂತನಿಗೆ ವಿಶೇಷ ಅರ್ಚನೆ, ಸಂಜೆ ಸ್ವಾಮೀಜಿಯವರಿಗೆ ತೆಪ್ಪೋತ್ಸವ ನಡೆಯಿತು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಭಕ್ತರು ವಿವಿಧ ರೀತಿಯಲ್ಲಿ ಭಕ್ತಿ ಸಮರ್ಪಣೆ ಮಾಡಿದರು. ಜಪಾನಿ ಭಕ್ತರು ಅವರ ಭಾಷೆಯಲ್ಲಿ ಶ್ರೀಗಳ ಸಾಧನೆಗಳನ್ನು ತಿಳಿಸಿ, ಭಕ್ತಿಯನ್ನು ಕೊಂಡಾಡಿದರು. ಬಲ್ಲಾದಿ ಶ್ರೀರಾಮ ಪ್ರಸಾದ್ ಸಹೋದರರು ಸಹಸ್ರ ಚಂದ್ರ ಗೀತೆ, ಸ್ವಾಗತಂ ಶುಭ ಸ್ವಾಗತಂ…, ಸ್ವಾಗತಂ ಶುಭ ಮಾಗತಂ…’ ಎಂಬ ಗೀತೆಗಳನ್ನು ಹಾಡಿ ಭಕ್ತರು ತಲೆದೂಗುವಂತೆ ಮಾಡಿದರು. ನಂತರ ಶ್ರೀಗಳ ವಿರಚಿತ `ವಕ್ಕಟೈ…’ ಎಂಬ ಗೀತೆಯನ್ನು ಸುಂದರ್ ಅವರು ಹಾಡುವ ಮೂಲಕ ಭಕ್ತಿ ಸಮರ್ಪಿಸಿದರು.

ಮಲೇಷಿಯಾದ ಜ್ಞಾನಬೋಧ ಸಭಾದ ಸುಂದರಿ, ಜ್ಞಾನಸುಂದರಿ ಮತ್ತು ಸದಸ್ಯರು ಶ್ರೀಗಳ ಸಹಸ್ರ ಚಂದ್ರ ದರ್ಶನ ಶಾಂತಿ ಪ್ರಯುಕ್ತ ವಿಶೇಷ ಕೇಕ್ ಸಿದ್ಧಪಡಿಸಿ ಸ್ವಾಮೀಜಿಯವರಿಂದ ಕಟ್ ಮಾಡಿಸಿದರು. ಯುನೈಟೆಡ್ ಅರಬ್ ಎಮಿರೇಟ್ಸ್ ದತ್ತ ಯೋಗ ಸೆಂಟರ್ ಶ್ರೀಗಳ ಚಿತ್ರವುಳ್ಳ ಕ್ರಿಸ್ಟಲ್ ಪ್ಲೇಟ್ ಕೊಡುಗೆ ನೀಡಿದರು.

ಟ್ರಿನಿಡಾಡ್ ದತ್ತ ಯೋಗ ಸೆಂಟರ್, ವಿಜಯವಾಡ ಆಶ್ರಮ, ಶ್ರೀ ಪಂಚಮುಖಿ ದೇವಸ್ಥಾನಂನವರು ಹೀಗೆ ಒಬ್ಬರಲ್ಲಾ ಇಬ್ಬರಲ್ಲಾ ನೂರಾರು ಮಂದಿ ತಮ್ಮದೇ ಆದ ರೀತಿಯಲ್ಲಿ ಸಮರ್ಪಣೆ ಮಾಡಿದರು. ಇದೇ ವೇಳೆ ಪೂರ್ಣಕಲಾ ತಂಡದವರು ಸಹಸ್ರ ಚಂದ್ರ ದರ್ಶನಕ್ಕಾಗಿಯೇ ಸಿದ್ಧಪಡಿಸಿ ತಂದಿದ್ದ ವಿಶೇಷ ಉಡುಗೊರೆಯನ್ನು ಶ್ರೀಗಳಿಗೆ ನೀಡಿದರು.

ಭಕ್ತಿ ಸಮರ್ಪಣೆ ನಂತರ ಸ್ವಾಮೀಜಿಯವರ ಪಲ್ಲಕ್ಕಿ ಉತ್ಸವ ಪ್ರಾರಂಭವಾಯಿತು. ಆ ನಂತರ ಶ್ರೀಗಳು ಗುರು ನಿಲಯ ಪ್ರವೇಶ ಮಾಡಿದರು. ಶ್ರೀಗಳ ತುಲಾಭಾರದ ನಂತರ ಸಂಜೆ ಸಪ್ತರ್ಷಿ ಸರೋ ವರದಲ್ಲಿ ವೈಭವಯುತ ತೆಪೆÇ್ಪೀತ್ಸವ ನಡೆಯಿತು.

ಆಶ್ರಮದ ಆವರಣದಲ್ಲಿ ಸ್ವಾಮೀಜಿಗಳ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವ ಪ್ರಯುಕ್ತ ಬೆಂಗ ಳೂರಿನಿಂದ ಆಗಮಿಸಿದ್ದ ವೈದ್ಯರ ತಂಡ ಆಶ್ರಮದ ಆಸ್ಪತ್ರೆಯಲ್ಲಿ ಉಚಿತ ಶ್ರವಣ ತಪಾಸಣೆ ಮಾಡಿ ಅರ್ಹರಿಗೆ ಶ್ರವಣದೋಷ ಯಂತ್ರಗಳನ್ನು ವಿತರಿಸಿದರು.

Translate »