ಹೈಕಮಾಂಡ್ ಬುಲಾವ್: ಇಂದು ಸಿದ್ದರಾಮಯ್ಯ ದೆಹಲಿಗೆ
ಮೈಸೂರು

ಹೈಕಮಾಂಡ್ ಬುಲಾವ್: ಇಂದು ಸಿದ್ದರಾಮಯ್ಯ ದೆಹಲಿಗೆ

January 13, 2020

ಬೆಂಗಳೂರು, ಜ.12- ನಿರೀಕ್ಷಿತ ಕೆಪಿಸಿಸಿ ಸಾರಥ್ಯ ಬದಲಾವಣೆ ವಿಚಾರ ಅಂತಿಮ ಘಟ್ಟ ತಲುಪಿದ್ದು, ಇನ್ನೆರಡು ದಿನಗಳಲ್ಲಿಯೇ ಪ್ರದೇಶ ಕಾಂಗ್ರೆಸ್‍ಗೆ ಹೊಸ ಅಧ್ಯಕ್ಷರ ನೇಮಕಾತಿಯಾಗಲಿದೆ. ರಾಜ್ಯ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಸಂಬಂಧ ಚರ್ಚಿಸಲು ಸೋಮವಾರ ಸಂಜೆ ದೆಹಲಿಗೆ ಬರುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆ ಯಲ್ಲಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಅಧ್ಯಕ್ಷರ ನೇಮಕ ಸಂಬಂಧ ದಿಲ್ಲಿಗೆ ಬರಲು ಆಯ್ದ ರಾಜ್ಯ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಮತ್ತೊಂ ದೆಡೆ ಮಾಜಿ ಸಚಿವ ಡಿ.ಕೆಶಿವಕುಮಾರ್ ನಿವಾಸ ಮತ್ತೊಮ್ಮೆ ಚಟುವಟಿಕೆಯ ಕೇಂದ್ರವಾಗು ತ್ತಿದೆ. ಕೆಪಿಸಿಸಿ ಅಧ್ಯಕ್ಷ ಗಾದಿಗೇರುವ ಪ್ರಮುಖರಾಗುತ್ತಿದ್ದಂತೆಯೇ ಸಾಕಷ್ಟು ಕಾಂಗ್ರೆಸ್ ನಾಯಕರ ಸ್ಪರ್ಧೆಯ ನಡುವೆಯೂ ತಮ್ಮ ಹೆಸರನ್ನು ಮುಂಚೂಣಿಯಲ್ಲಿ ಉಳಿಸಿಕೊಂಡಿದ್ದಾರೆ.

Translate »