ಸಕ್ರಿಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ಗುಡ್‍ಬೈ
News

ಸಕ್ರಿಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ಗುಡ್‍ಬೈ

January 5, 2023

ಬೆಂಗಳೂರು, ಜ.4(ಕೆಎಂಶಿ)- ಕೇಂದ್ರದ ಮಾಜಿ ವಿದೇಶಾಂಗ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಕ್ರಿಯ ರಾಜಕಾರಣಕ್ಕೆ ಗುಡ್‍ಬೈ ಹೇಳಿ ದ್ದಾರೆ. 90ರ ಇಳಿ ವಯಸ್ಸಿನಲ್ಲಿ ನಾನು ಯುವಕನಂತೆ ಸಾರ್ವಜನಿಕ ಜೀವನ ದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದಿ ರುವ ಕೃಷ್ಣ, ಇತ್ತೀಚಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಂದ ದೂರ ಉಳಿದಿ ದ್ದೇನೆ. ಆದರೆ ಇಂದು ಅಧಿಕೃತವಾಗಿ ಸಕ್ರಿಯ ರಾಜಕಾರಣಕ್ಕೆ ಪೂರ್ಣ ವಿರಾಮ ಹಾಕಿ, ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯುತ್ತೇನೆ. ನಗರದ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿದ ನಂತರ ಸುದ್ದಿ ಗಾರರಿಗೆ ಈ ವಿಷಯ ತಿಳಿಸಿದ ಕೃಷ್ಣಾ ಅವರು ಬಿಜೆಪಿ ವರಿಷ್ಠರು ನನ್ನನ್ನು ಕಡೆ ಗಾಣಿಸಿದ್ದಾರೆ ಎಂಬ ಮಾತು ಇಲ್ಲಿ ಬರು ವುದಿಲ್ಲ. ನಾನಾಗಿಯೇ ನಿವೃತ್ತಿ ಪಡೆದು ಕೊಳ್ಳುತ್ತಿದ್ದೇನೆ. ನಾನು ರಾಜಕೀಯವಾಗಿ ನಿವೃತ್ತಿಯಾಗುವುದನ್ನು
ಬಿಜೆಪಿ ವರಿಷ್ಠರ ಗಮನಕ್ಕೆ ತರುವ ಅಗತ್ಯವಿಲ್ಲ. ಅವರೇನು ನನಗೆ ಪೆನ್ಷನ್ ಕೊಡಲ್ಲ. ಹೀಗಾಗಿ ಅವರ ಗಮನಕ್ಕೆ ತಂದಿಲ್ಲ ಎಂದರು. ವಯಸ್ಸಿಗೆ ಬೆಲೆ ಕೊಟ್ಟು ಸಾರ್ವಜನಿಕ ಜೀವನ ದಿಂದ ಹಿಂದೆ ಸರಿಯುತ್ತಿದ್ದೇನೆಯೇ ಹೊರತು ಇದಕ್ಕೆ ಬೇರೆ ಕಾರಣಗಳನ್ನು ನೀಡುವ ಅಗತ್ಯವಿಲ್ಲ ಎಂದರು. 1962 ರಲ್ಲೇ ರಾಜ್ಯ ವಿಧಾನಸಭೆಗೆ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಪ್ರಜಾ ಸೋಶಿಯಲಿಸ್ಟ್ ಪಕ್ಷದಿಂದ ಅಯ್ಕೆಗೊಂಡ ಕೃಷ್ಣಾ ಅವರು, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಾಂಗ್ರೆಸ್ ಪಕ್ಷದಲ್ಲಿ ವಿಧಾನಸಭೆ, ವಿಧಾನಪರಿಷತ್ತು, ಲೋಕಸಭಾ, ರಾಜ್ಯಸಭಾ ಸದಸ್ಯರಾಗಿ ಕೇಂದ್ರದ ಸಚಿವರಾಗಿಯು ಸೇವೆ ಸಲ್ಲಿಸಿದ್ದಾರೆ. 1999ರಿಂದ 2004 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಕೃಷ್ಣಾ, ಬೆಂಗಳೂರು ನಗರವನ್ನು ಮಾಹಿತಿ ತಂತ್ರಜ್ಞಾನ ನಗರವನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆ ಅವರದ್ದಾಗಿದೆ.

ನಂತರ ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 2017 ರಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿಗೆ ಸೇರಿದ ನಂತರ ಅವರಿಗೆ ಯಾವುದೇ ಸ್ಥಾನಮಾನ ದೊರೆಯಲಿಲ್ಲ. ಇದೀಗ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

Translate »