ಸಾಮಾಜಿಕ ಜಾಲತಾಣ ವ್ಯಸನ ಯುವಕರ ಭವಿಷ್ಯಕ್ಕೆ ಮಾರಕ
ಮೈಸೂರು

ಸಾಮಾಜಿಕ ಜಾಲತಾಣ ವ್ಯಸನ ಯುವಕರ ಭವಿಷ್ಯಕ್ಕೆ ಮಾರಕ

January 14, 2023

ಮೈಸೂರು, ಜ. 13- ಯುವ ಸಮು ದಾಯ ಸಾಮಾಜಿಕ ಜಾಲತಾಣಗಳ ವ್ಯಸನದಿಂದ ಹೊರ ಬರದಿದ್ದರೆ ಭವಿಷ್ಯದ ಬದುಕು ಮಸುಕಾಗುವ ಅಪಾಯ ಹೆಚ್ಚಿದೆ ಎಂದು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶು ಪಾಲರಾದ ಪ್ರೊ.ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಜೆಸಿಐ ಮೈಸೂರು ರಾಯಲ್ ಸಿಟಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಸಾಮಾಜಿಕ ಜಾಲತಾಣ ಮತ್ತು ವ್ಯಸನ” ವಿಷಯ ಕುರಿತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾಟ್ಸ್ ಆಪ್, ಇನ್‍ಸ್ಟ್ರಾಗ್ರಾಂ, ಫೇಸ್ ಬುಕ್, ಟ್ವಿಟರ್ ಸೇರಿದಂತೆ ವಿವಿಧ ಮಾದರಿಯ ಜಾಲತಾಣಗಳು ಯುವ ಸಮುದಾಯ ವನ್ನು ಒಂದಿಲ್ಲೊಂದು ಕಾರಣಕ್ಕೆ ವ್ಯಸನಿ ಗಳನ್ನಾಗಿ ಮಾಡುತ್ತಿವೆ. ತಂತ್ರಜ್ಞಾನದ ಆವಿಷ್ಕಾರಗಳಾದ ಈ ಜಾಲತಾಣಗಳು ಮೊದಲಿಗೆ ಮನಸಿಗೆ ಮುದ ನೀಡುತ್ತವೆ. ಕುತೂಹಲ ಮೂಡಿಸುತ್ತಲೇ ಅವುಗಳ ದಾಸರ ನ್ನಾಗಿ ಮಾಡುತ್ತವೆ. ಇವುಗಳ ಬಳಕೆ ಬಗ್ಗೆ ಎಚ್ಚರವಹಿಸದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಉದಾಹರಣೆ ಸಹಿತ ಎಚ್ಚರಿಸಿದರು.

ಜೆಸಿಐ ಮೈಸೂರು ರಾಯಲ್ ಸಿಟಿಯ ಅಧ್ಯಕ್ಷ ರಾಹುಲ್ ಕಾಂಟೆಡ್ ಅವರು ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು. ರಾಸೇಯೋ ಅಧಿಕಾರಿ ಡಾ.ಕಂಚಿನಕೆರೆ ಗೋವಿಂದೇಗೌಡ ಮಾತನಾಡಿ, ಸಾಮಾ ಜಿಕ ಜಾಲತಾಣಗಳು ವಿದ್ಯಾರ್ಥಿ ಸಮು ದಾಯಕ್ಕೆ ಎಷ್ಟು ಅಗತ್ಯವೋ ಅಷ್ಟೇ ಅಪಾ ಯವೂ ಹೌದು. ಬಗೆಬಗೆಯ ಆಪ್‍ಗಳು ಯುವ ಜನಾಂಗದ ಮನಸ್ಸನ್ನು ಸೆರೆ ಹಿಡಿಯುತ್ತಿವೆ. ಫೇಸ್‍ಬುಕ್, ಇನ್‍ಸ್ಟ್ರಾಗ್ರಾಂ, ಆನ್‍ಲೈನ್ ಗೇಮ್‍ಗಳು ಪ್ರಾಣಹಾನಿಗೂ ಕಾರಣವಾದ ಉದಾಹರಣೆಗಳಿವೆ. ಅಗತ್ಯ ಮೀರಿ ಜಾಲತಾಣಗಳನ್ನು ಬಳಸಿದರೆ ನಮ ಗರಿವಿಲ್ಲದೆ ದಾಸರಾಗುತ್ತೇವೆ. ಲಕ್ಷಾಂತರ ಮಂದಿ ಸಮಸ್ಯೆಯಿಂದ ಬಳಲುವುದನ್ನು ಕಾಣಬಹುದು. ಈ ಬಗ್ಗೆ ಅರಿವು ಮೂಡಿ ಸುವ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಲಿದೆ ಎಂದು ವಿವರಿಸಿದರು. ತರಬೇತುದಾರರಾದ ಜೆ.ಸಿ.ಖುಷಿ ಗುಗ್ಲಿಯಾ ಹಾಗೂ ಜೆ.ಸಿ. ಮಧು ಗುಗ್ಲಿಯಾ ಅವರು ವಿದ್ಯಾರ್ಥಿನಿಯ ರೊಂದಿಗೆ ಸಂವಾದದ ಮೂಲಕ ಸಾಮಾ ಜಿಕ ಜಾಲತಾಣಗಳ ಮಿತಿಮೀರಿದ ಬಳಕೆಯ ಅಪಾಯ ಹಾಗೂ ಅದರಿಂದ ಹೊರಬರುವ ಉಪಾಯಗಳ ಬಗ್ಗೆ ತಿಳಿಸಿ ಕೊಟ್ಟರು. ಜೆಸಿಐ ಮೈಸೂರು ರಾಯಲ್ ಸಿಟಿಯ ಉಪಾಧ್ಯಕ್ಷೆ ಲೀಲಾ ಕೊಠಾರಿ, ಪ್ರಾಜೆಕ್ಟ್ ಡೈರೆಕ್ಟರ್ ಲತಾಜೈನ್, ಟ್ರೈನಿಂಗ್ ಡೈರೆಕ್ಟರ್ ಸೀಮಾ ಡೆರಾಸಿಯಾ, ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಕೆ. ಪ್ರಸಾದ್, ಎನ್‍ಎಸ್‍ಎಸ್ ಅಧ್ಯಕ್ಷೆ ಮೇಘನ ಎಂ.ಮಲ್ಲಣ್ಣ, ಉಪಾಧ್ಯಕ್ಷೆ ಬಸವಜ್ಯೋತಿ, ಉಪಕಾರ್ಯದರ್ಶಿ ಲಿಖಿತ ಎಸ್ ಹಾಜ ರಿದ್ದರು. ಸ್ವಯಂಸೇವಕಿಯರಾದ ರೂಪ ಮತ್ತು ಮಾನ್ಯ ಪ್ರಾರ್ಥನೆ ಗೀತೆ ಹಾಡಿ ದರು. ಸ್ವಯಂಸೇವಕಿ ಚೈತ್ರಶ್ರೀ ಸ್ವಾಗತಿಸಿ ದರು. ಸ್ವಯಂಸೇವಕಿ ಸುಕೃತ ನಿರೂಪಣೆ ಮಾಡಿದರು. ಸ್ವಯಂಸೇವಕಿ ಮಾನಸ ಎಸ್ ವಂದಿಸಿದರು. ಮುನ್ನೂರಕ್ಕೂ ಹೆಚ್ಚು ಸ್ವಯಂಸೇವಕಿಯರು ತರಬೇತಿಯಲ್ಲಿ ಭಾಗವಹಿಸಿದ್ದರು.

Translate »