ವಿದ್ಯಾರ್ಥಿನಿ ಮೇಲೆ ಸಮಾಜ ಕಲ್ಯಾಣ ಮಹಿಳಾ ಅಧಿಕಾರಿ ದೌರ್ಜನ್ಯ: ಆರೋಪ
ಮೈಸೂರು

ವಿದ್ಯಾರ್ಥಿನಿ ಮೇಲೆ ಸಮಾಜ ಕಲ್ಯಾಣ ಮಹಿಳಾ ಅಧಿಕಾರಿ ದೌರ್ಜನ್ಯ: ಆರೋಪ

February 24, 2021

ಮೈಸೂರು,ಫೆ.23(ಪಿಎಂ)- ವಿದ್ಯಾರ್ಥಿ ನಿಲಯದ ನೀರಿನ ಸಮಸ್ಯೆ ಸರಿಪಡಿಸಲು ಆಗ್ರಹಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬ ರನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾ ಯಕ ನಿರ್ದೇಶಕಿ ಹಾಗೂ ಅವರ ಸಹ ಚರರು ಕಾರಿನಲ್ಲಿ ಕರೆದೊಯ್ದು ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘ ಟನೆಗಳ ಒಕ್ಕೂಟ, ಹೀಗೆ ದೌರ್ಜನ್ಯ ಎಸ ಗಿರುವ ಮಹಿಳಾ ಅಧಿಕಾರಿ ಅಮಾನತು ಗೊಳಿಸಿ, ಅವರ ಸಹಚರರನ್ನು ಬಂಧಿಸ ಬೇಕೆಂದು ಒತ್ತಾಯಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾ ಸಂಚಾ ಲಕ ಮಲ್ಲೇಶ್ ಚುಂಚನಹಳ್ಳಿ, ಮೈಸೂರು ನಗರದ ಬೋಗಾದಿಯ 2ನೇ ಹಂತದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿನಿಲಯದ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯೊಬ್ಬರ ಮೇಲೆ ಇಲಾಖೆಯ ಮೈಸೂರು ತಾಲೂಕು ಸಹಾ ಯಕ ನಿರ್ದೇಶಕಿ ಮೇಘನಾ ದೌರ್ಜನ್ಯ ನಡೆಸಿದ್ದಾರೆ. ವಿದ್ಯಾರ್ಥಿನಿಲಯದಲ್ಲಿದ್ದ ನೀರಿನ ಸಮಸ್ಯೆಯನ್ನು ನಿಲಯಪಾಲಕರು ಸರಿಪಡಿ ಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯು, ಮೇಘನಾ ಅವರಿಗೆ ಮೊಬೈಲ್‍ನಲ್ಲಿ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಮೇಘನಾ ಸದರಿ ವಿದ್ಯಾರ್ಥಿ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.

ವಿದ್ಯಾರ್ಥಿ, ತಾನು ಮೇಘನಾ ಅವ ರಲ್ಲಿ ಹೇಳಿಕೊಂಡ ದೂರು ಸಂಬಂಧ ಮೊಬೈಲ್‍ನಲ್ಲಿ ಸಂಭಾಷಣೆ ರೇಕಾರ್ಡ್ ಮಾಡಿರುವುದನ್ನು ತಿಳಿದ ಮೇಘನಾ ತಮ್ಮ ಸಹಚರರಾದ ಅರುಣ್‍ಕುಮಾರ್, ಸುರೇಶ್ ಎಂಬುವವರೊಂದಿಗೆ ನಿಲಯಕ್ಕೆ ಬಂದು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಎಳೆದೊಯ್ದಿ ದ್ದಾರೆ. ಬೇರೊಂದು ವಿದ್ಯಾರ್ಥಿನಿಲಯಕ್ಕೆ ಕರೆದೊಯ್ದು, ಅಲ್ಲಿನ ಕೊಠಡಿಯೊಂದ ರಲ್ಲಿ ಕೂಡಿ ಹಾಕಿ ಅಶ್ಲೀಲವಾಗಿ ಬೈದಿರು ವುದು ಮಾತ್ರವಲ್ಲದೆ, ಜಾತಿ ನಿಂದನೆ ಮಾಡಿದ್ದಾರೆ. ಬೆದರಿಕೆಯೊಡ್ಡಿ ವಿದ್ಯಾರ್ಥಿ ರೆಕಾರ್ಡ್ ಮಾಡಿದ್ದ ಸಂಭಾಷಣೆಯನ್ನು ಡಿಲೀಟ್ ಮಾಡಿಸಿ ಬಳಿಕ ಕಳುಹಿಸಿದ್ದಾರೆ ಎಂದು ವಿವರಿಸಿದರು.

ಈ ಸಂಬಂಧ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಲಾಯಿತು. ಆ ಬಳಿಕ ಸದರಿ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದರೂ ಸೂಕ್ತ ರೀತಿ ಯಲ್ಲಿ ವಿಚಾರಣೆ ನಡೆಯುತ್ತಿಲ್ಲ. ಗೂಂಡಾ ವರ್ತನೆ ತೊರಿದ ಅಧಿಕಾರಿ ಮೇಘನಾ ಅವರನ್ನು ಅಮಾನತುಗೊಳಿಸಿ, ಇವರ ಸಹ ಚರರನ್ನು ಬಂಧಿಸಬೇಕು. ವಿಳಂಬ ಮಾಡಿ ದ್ದಲ್ಲಿ ತೀವ್ರವಾದ ಹೋರಾಟ ನಡೆಸಲಾಗು ವುದು ಎಂದು ಎಚ್ಚರಿಸಿದರು. ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಕಂದೇಗಾಲ ಶ್ರೀನಿವಾಸ್, ದಸಂಸ ಮುಖಂಡರಾದ ರಾಜೇಶ್ ಹರದನಹಳ್ಳಿ, ಶಿವಕುಮಾರ್, ನಾಗರಾಜು, ಪುಟ್ಟಲಕ್ಷ್ಮಮ್ಮ ಮತ್ತಿತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Translate »