ನಾಳೆ ಗಾನ ಗಂಧರ್ವ ಎಸ್‍ಪಿಬಿಗೆ ಗೀತನಮನ
ಮೈಸೂರು

ನಾಳೆ ಗಾನ ಗಂಧರ್ವ ಎಸ್‍ಪಿಬಿಗೆ ಗೀತನಮನ

March 23, 2021

ಮೈಸೂರು,ಮಾ.22(ಎಂಟಿವೈ)-ಹಿರಿಯ ಗಾಯಕ, ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರ ಹ್ಮಣ್ಯಂ ಸ್ಮರಣಾರ್ಥ ಮಾ.24ರಂದು ಸಂಜೆ 4.30ಕ್ಕೆ ನಾದಬ್ರಹ್ಮ ಸಂಗೀತ ಸಭಾದಲ್ಲಿ `ನೂರೊಂದು ನೆನಪು ಹಾಡಾಗಿ ಬಂತು’ ಗೀತ ನಮನ ಹಾಗೂ ಸಾಧಕರಿಗೆ `ಜನ ಚೈತನ್ಯ’ ಪುರಸ್ಕಾರ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಜನ ಚೈತನ್ಯ ಫೌಂಡೇಷನ್ ಅಧ್ಯಕ್ಷ ಆರ್.ಲಕ್ಷ್ಮಣ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಗಾಯಕ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗೀತ ನಮನದ ಮೂಲಕ ಗೌರವ ಸಮರ್ಪಿ ಸುವ ನಿಟ್ಟಿನಲ್ಲಿ `ನೂರೊಂದು ನೆನಪು ಹಾಡಾಗಿ ಬಂತು’ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿ ಯಂತರ (ಕೆ.ಆರ್. ಪೇಟೆ) ಎನ್.ಶ್ರೀನಿ ವಾಸಲು, ಉದ್ಯಮಿ ರಂಜೀತ್ ಹೆಗಡೆ, ಪಾಲಿಕೆ ಸದಸ್ಯೆ ಶೋಭ ಸುನೀಲ್, ನಿವೃತ್ತ ಪೊಲೀಸ್ ಇನ್ಸ್‍ಪೆಕ್ಟರ್ ಪಿ.ಎಂ.ಸಿದ್ಧರಾಜು ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಕೀಬೋರ್ಡ್ ವಾದಕ ಗಣೇಶ್ ಈಶ್ವರ್ ಭಟ್, ಹಿರಿಯ ಕಲಾವಿದ ಗಾಡ್ವಿನ್ ಪಾಲ್, ತಬಲ ವಾದಕ ಮಹದೇವ ಹೆಬ್ಬಾಡಿ, ಗಾಯಕರಾದ ಬಿ.ಎಂ.ಮಹದೇವಯ್ಯ, ಸರ್ವಮಂಗಳ, ಸಯ್ಯದ್ ಮುಜಾಮಿಲ್, ಮಾಜಿ ಮೇಯರ್ ನಾರಾಯಣ ಅಭಿಮಾನಿಗಳ ಬಳಗದ ಅಧ್ಯಕ್ಷ ಆರ್.ರಮೇಶ್, ಪತ್ರಕರ್ತ ಎಂ.ಪ್ರಕಾಶ್ ಅವರಿಗೆ `ಜನ ಚೈತನ್ಯ’ ಪುರಸ್ಕಾರ ನೀಡಿ ಗೌರ ವಿಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜನ ಚೈತನ್ಯ ಫೌಂಡೇಷನ್ ಉಪಾಧ್ಯಕ್ಷ ಎಂ.ಲೋಕೇಶ್, ವಕೀಲ ಉಮೇಶ್, ಸತ್ಯವತಿ ಇನ್ನಿತರರು ಇದ್ದರು.

Translate »