ಹಾಸನ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವರ್ಗಾವಣೆಗೊಂಡಿದ್ದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್‍ಗೌಡ ಅವರು ಮತ್ತೆ ಸೋಮವಾರ ಅಧಿಕಾರ ಸ್ವೀಕರಿಸಿದರು. ಅಲ್ಲದೆ ಜಿಲ್ಲೆಯಲ್ಲಿ 17 ಸಬ್ ಇನ್ಸ್‍ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಲಾಗಿದೆ.
ಪ್ರಕಾಶ್‍ಗೌಡ ಮರು ನಿಯೋಜನೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಎ.ಎನ್.ಪ್ರಕಾಶ್‍ಗೌಡ ಅವರನ್ನು ವರ್ಗಾವಣೆ ಮಾಡಿತ್ತು. ಇವರ ಜಾಗಕ್ಕೆ ಚೇತನ್‍ಸಿಂಗ್ ರಾಥೋಡ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು.
ಚುನಾವಣೆ ಮುಕ್ತಾಯವಾದ ಬಳಿಕ, ಸರ್ಕಾರ ಮತ್ತೆ ಅವರನ್ನು ಹಾಸನ ಪೆÇಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಅದರಂತೆ ಸೋಮ ವಾರ ಅವರು ಚೇತನ್ ಸಿಂಗ್ ರಾಥೋಡ್ ಅವರಿಂದ ಪ್ರಕಾಶ್‍ಗೌಡ ಅವರು ಅಧಿಕಾರ ಸ್ವೀಕರಿಸಿದರು.
ಪ್ರಕಾಶ್‍ಗೌಡ ಅವರು ಕಳೆದ ನಾಲ್ಕು ತಿಂಗಳಿನಿಂದ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಚುನಾವಣಾ ಆಯೋಗ ಅವರನ್ನು ವರ್ಗಾವಣೆ ಮಾಡಿತ್ತು. ನಂತರ ಬಂದ ಚೇತನ್ ಸಿಂಗ್ ರಾಥೋಡ್ ಅವರು ಕೂಡ ಚುನಾವಣೆಯನ್ನು ಯಾವುದೇ ಲೋಪ ವಾಗದಂತೆ ಯಶಸ್ವಿಯಾಗಿ ನೆರವೇರಿಸಿದ್ದರು. ಈಗ ಚೇತನ್ ಸಿಂಗ್ ರಾಥೋಡ್ ಅವರು ರಾಮನಗರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
17 ಸಬ್ ಇನ್ಸ್‍ಪೆಕ್ಟರ್ ವರ್ಗಾವಣೆ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆÉಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 17 ಸಬ್ ಇನ್ಸ್‍ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ದಕ್ಷಿಣ ವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ.
ಹಾಸನದ ಜಾವಗಲ್ ಠಾಣೆಯ ಪಿಎಸ್‍ಐ ಬಸವ ರಾಜು ಅವರನ್ನು ಚಾಮರಾಜನಗರದ ಸಂತೇಮರಹಳ್ಳಿ ಠಾಣೆಗೆ, ಅರಕಲಗೂಡು ಠಾಣೆಯ ಪಿಎಸ್‍ಐ ಎಸ್. ನಾಗೇಶ್ ಅವರನ್ನು ಚಾಮರಾಜನಗರದ ಹನೂರು ಠಾಣೆಗೆ, ಯಸಳೂರು ಠಾಣೆಯ ಕೆ.ಹರೀಶ್ ಅವರನ್ನು ದುದ್ದಾ ಠಾಣೆಗೆ ವರ್ಗಾಯಿಸಲಾಗಿದೆ.
ಅರೇಹಳ್ಳಿ ಠಾಣೆಯ ಪಿಎಸ್‍ಐ ಎಂ.ಎ.ರವಿಕಿರಣ್ ಅವರನ್ನು ನಾಗಮಂಗಲ ಟೌನ್ ಠಾಣೆಗೆ, ಚನ್ನರಾಯ ಪಟ್ಟಣ ಗ್ರಾಮಾಂತರ ಠಾಣೆಯ ಎನ್.ರಾಮಚಂದ್ರ ಅವರನ್ನು ನಾಗಮಂಗಲ ಗ್ರಾಮಾಂತರ ಠಾಣೆಗೆ, ಹಾಸನ ನಗರ ಬಡಾವಣೆ ಠಾಣೆಯ ಹೆಚ್.ಪಿ.ಶರತ್‍ಕುಮಾರ್ ಅವರನ್ನು ಮಂಡ್ಯ ಜಿಲ್ಲೆಯ ಬೆಳ್ಳೂರು ಠಾಣೆಗೆ, ಚನ್ನರಾಯಪಟ್ಟಣ ಟೌನ್ ಠಾಣೆಯ ಎಸ್.ಬಿ.ನವೀನ್ ಗೌಡ ಅವರನ್ನು ಮಂಡ್ಯದ ಕೆ.ಆರ್.ಸಾಗರ ಠಾಣೆಗೆ, ಆಲೂರು ಠಾಣೆಯ ಎಂ.ಜೆ.ವೆಂಕಟರಮಣ ಸ್ವಾಮಿ ಅವರನ್ನು ಮಂಡ್ಯದ ಎಕ್ಸೈಜ್/ಲಾಟರಿ ಮತ್ತು ಐಟಿ ಆಕ್ಟ್ ಠಾಣೆಗೆ ವರ್ಗಾಯಿಸಲಾಗಿದೆ.
ಹಾಸನದ ಹೋಮಿಸೈಡ್ ಅಂಡ್ ಬರ್ಗಲರಿ ವಿಂಗ್ ಠಾಣೆಯ ಪಿಎಸ್‍ಐ ಪಿ.ಲೋಕೇಶ್ ಅವರನ್ನು ಮೈಸೂರು ಜಿಲ್ಲೆಯ ಬೆಟ್ಟದಪುರ ಠಾಣೆಗೆ, ಹಾಸನ ಸಂಚಾರಿ ಠಾಣೆಯ ಕೆ.ಕೆ.ಶ್ರೀಧರ್ ಅವರನ್ನು ಹಾಸನದ ಟೆಕ್ನಿಕಲ್ ಸೆಲ್ ಮತ್ತು ಸೈಬರ್ ಕ್ರೈಂ ವಿಂಗ್, ಪೊಲೀಸ್ ಐಟಿ ಠಾಣೆಗೆ, ಹಾಸನ ಗ್ರಾಮಾಂತರ ಠಾಣೆಯ ವಿನೋದ್ ರಾಜ್ ಅವರನ್ನು ಹಾಸನದ ಹೋಮಿಸೈಡ್ ಅಂಡ್ ಬರ್ಗಲರಿ ವಿಂಗ್ ಠಾಣೆಗೆ, ಸಕಲೇಶಪುರದ ನಗರ ಠಾಣೆಯ ಬಿ.ಎಸ್.ರವಿಶಂಕರ್ ಅವರನ್ನು ಸಕಲೇಶಪುರ ಎಫ್‍ಎಂಎಸ್ ಠಾಣೆಗೆ, ಎಫ್‍ಎಂಎಸ್ ಸಕಲೇಶಪುರ ಠಾಣೆಯ ಎನ್.ಸುರೇಶ್ ಅವರನ್ನು ಹಾಸನದ ಚೆಸ್ಕಾಂಗೆ ವರ್ಗಾಯಿಸಲಾಗಿದೆ.