ಅಂದು ಹೇಳಿದ್ದೇನು? ಇಂದು ಮಾಡುತ್ತಿರುವುದೇನು?
ಮೈಸೂರು

ಅಂದು ಹೇಳಿದ್ದೇನು? ಇಂದು ಮಾಡುತ್ತಿರುವುದೇನು?

June 11, 2020

ಮೈಸೂರು, ಜೂ.10(ಆರ್‍ಕೆಬಿ)- ಯಾರಿಗೆ ಧ್ವನಿ ಇಲ್ಲವೋ, ಮಡಿವಾಳ, ಗಾಣಿಗ, ಕುಂಬಾರ ಸೇರಿದಂತೆ ಯಾವ ಸೂಕ್ಷ್ಮಾತಿಸೂಕ್ಷ್ಮ ಸಮಾಜಗಳು ಚುನಾ ವಣೆಯಲ್ಲಿ ನಿಂತು ಗೆಲ್ಲಲು ಸಾಧ್ಯವಿಲ್ಲವೋ ಅಂಥ ಸಮಾಜದವರನ್ನು ಎಂಎಲ್‍ಸಿ ಮಾಡುವಂತೆ ಹಿಂದೆ ಕಾಂಗ್ರೆಸ್‍ನಲ್ಲಿದ್ದಾಗ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿ ದ್ದವರೇ ಈಗ ಎಂಎಲ್‍ಸಿ ಹುದ್ದೆಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಅವರು ಮಾಜಿ ಸಚಿವ ಹೆಚ್.ವಿಶ್ವ ನಾಥ್ ಹೆಸರು ಹೇಳದೆ ಟೀಕಿಸಿದರು.

ಮೈಸೂರಿನ ರಮಾವಿಲಾಸ ರಸ್ತೆಯ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿ ಗೋಷ್ಠಿ ನಡೆಸಿದ ಸಾರಾ, ಈಗ ಬಿಜೆಪಿ ಯಲ್ಲಿರುವ ಅವರಿಗೆ ತಾವು ಹಿಂದೆ ಹೇಳಿದ್ದ ಮಾತು ಮರೆತುಹೋಯಿತÉೀ? ಹಾಗಾ ದರೆ ಇವರು ಸೂಕ್ಷ್ಮಾತಿಸೂಕ್ಷ್ಮ ಸಮಾಜ ದವರೇ? ಎಲ್ಲಿ ಹೋಯಿತು ನಿಮ್ಮ ಸಾಮಾ ಜಿಕ ನ್ಯಾಯ? ಎಂದು ವಾಗ್ದಾಳಿ ನಡೆಸಿದರು.

ಶಾಸಕರಾಗಿದ್ದವರು ರಾಜೀನಾಮೆ ನೀಡಿ ದಿರಿ. ಈಗ ಮತ್ತೇ ಎಂಎಲ್‍ಸಿ ಸ್ಥಾನ ಪಡೆ ಯಲು ಮುಂದಾಗಿದ್ದೀರಿ. ಅಂದು ಹೇಳಿ ದ್ದೇನು? ಈಗ ಮಾಡುತ್ತಿರುವುದೇನು? ಇದನ್ನು ಜನರೇ ತೀರ್ಮಾನಿಸಲಿದ್ದಾರೆ ಎಂದು ಟೀಕಾಸ್ತ್ರ ಪ್ರಯೋಗಿಸಿದರು.

ನೀವೇನೊ ಬಿಜೆಪಿಯಲ್ಲಿದ್ದೀರಿ. ಆದರೆ ನಿಮ್ಮವರೊಬ್ಬರು (ಹೆಚ್.ವಿಶ್ವನಾಥ್‍ರ ಪುತ್ರ) ಜಿಪಂ ಸದಸ್ಯರಿದ್ದಾರೆ. ಅವರೀಗ ಯಾವ ಪಕ್ಷದಲ್ಲಿದ್ದಾರೆ? ಎಂದು ಶಾಸಕ ಸಾರಾ ವ್ಯಂಗ್ಯವಾಗಿ ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ನಾಗರಾಜು, ಮಾಜಿ ಸದಸ್ಯ ದ್ವಾರಕೀಶ್, ನಗರ ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಜೆಡಿಎಸ್ ಮುಖಂಡರಾದ ಎಂ.ಪಿ.ಕುಮಾರ್, ರವಿಚಂದ್ರೇಗೌಡ, ಮೈಮುಲ್ ನಿರ್ದೇಶಕ ಎ.ಟಿ. ಸೋಮ ಶೇಖರ್, ಸುದ್ದಿಗೋಷ್ಠಿಯಲ್ಲಿದ್ದರು.

Translate »