`ಶ್ರೀ ಸಿದ್ಧಗಂಗಾ ದಿವ್ಯ ತಪೋನಿಧಿ ಆ್ಯಪ್’ ಬಿಡುಗಡೆ
ಚಾಮರಾಜನಗರ

`ಶ್ರೀ ಸಿದ್ಧಗಂಗಾ ದಿವ್ಯ ತಪೋನಿಧಿ ಆ್ಯಪ್’ ಬಿಡುಗಡೆ

April 2, 2019

ಮೈಸೂರು: ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿ ಅವರ ಸಾಧನೆ ಕುರಿತಾದ `ಶ್ರೀ ಸಿದ್ದಗಂಗಾ ದಿವ್ಯ ತಪೋ ನಿಧಿ ಆ್ಯಪ್’ ಅನ್ನು ಹಿರಿಯ ಸಾಹಿತಿ ಡಾ. ಲತಾ ರಾಜಶೇಖರ್ ಸೋಮವಾರ ಬಿಡುಗಡೆಗೊಳಿಸಿದರು.

ಮೈಸೂರು ಅರಮನೆ ಕೋಟೆ ಆಂಜ ನೇಯ ಸ್ವಾಮಿ ದೇವಸ್ಥಾನ ಪಕ್ಕದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಸಭಾಂ ಗಣದಲ್ಲಿ ಶರಣು ವಿಶ್ವ ವಚನ ಫೌಂಡೇ ಷನ್ ವತಿಯಿಂದ ಅಭಿವೃದ್ಧಿಪಡಿಸಿರುವ `ಶ್ರೀ ಸಿದ್ಧಗಂಗಾ ದಿವ್ಯ ತಪೆÇೀನಿಧಿ ಆ್ಯಪ್’ ಅನ್ನು ಬಿಡುಗಡೆಗೊಳಿಸಲಾಯಿತು.

ಸಾಮಾಜಿಕ ಜಾಲತಾಣಗಳನ್ನು ಕಿರಿಯ ರಿಂದ ಹಿಡಿದು ಹಿರಿಯರವರೆಗೂ ಉಪ ಯೋಗಿಸುತ್ತಾರೆ. ಇದನ್ನೇ ಪ್ರಚಾರ ಸಾಧನ ವನ್ನಾಗಿ ಮಾಡಿಕೊಂಡು ಶರಣರ ಸಂದೇಶ ಗಳನ್ನು ಸಾರಲು ವಚನ ಫೌಂಡೇಷನ್ ಶರಣರ ಸಂದೇಶಗಳನ್ನು ಸಾರಲು ಆ್ಯಪ್ ರೂಪಿಸಿದ್ದು, ಇದರಲ್ಲಿ 400ಕ್ಕೂ ಹೆಚ್ಚು ವಚನಗಳು ಅಪ್‍ಲೋಡ್ ಆಗಿವೆ. ತಾಣ ದಲ್ಲಿ ಹಿರಿಯ ಸಾಹಿತಿಗಳ ಅಭಿಪ್ರಾಯ, ವಿವಿಧ ವಚನಕಾರರ ವಚನಗಳಿವೆ ಎಂದರು.

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಬದುಕಿದ್ದರೆ ಇಂದಿಗೆ 112ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳು ತ್ತಿದ್ದರು. ಬೌದ್ಧಿಕವಾಗಿ ಅವರು ನಮ್ಮೊಂದಿ ಗಿಲ್ಲ. ಆದರೆ, ಜಗತ್ತಿನಲ್ಲೇ ಸ್ವಾಮೀಜಿಗಳ ಪೈಕಿ ದೀರ್ಘಕಾಲ ಜೀವಿಸಿದ ಏಕೈಕ ಸ್ವಾಮೀಜಿ. ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರಲ್ಲಿ ಕರುಣೆ ಮತ್ತು ಪ್ರೀತಿ ಹೃದಯ ದಲ್ಲಿತ್ತು. ಅದಕ್ಕಾಗಿ ಅವರು ಉಸಿರು ಬಿಡುವ ತನಕವೂ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದನ್ನು ಮಾಧ್ಯಮ ಗಳಲ್ಲಿ ಗಮನಿಸಿದ್ದೇನೆ ಎಂದರು.

ಕಳೆದ 85 ವರ್ಷಗಳಿಂದ ಶ್ರೀಗಳ ಜೀವಿತಾವಧಿಯಲ್ಲಿ ದಿನನಿತ್ಯ 10 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಅನ್ನ ದಾಸೋಹಕ್ಕೆ ಹೆಚ್ಚು ಒತ್ತು ನೀಡಿದ್ದರು. ಮಠದಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಮುಂದಿನ ಸ್ವಾಭಿ ಮಾನದ ಬದುಕು ಕಟ್ಟಿಕೊಳ್ಳಲು ಉತ್ತಮ ಸಂಸ್ಕಾರ ಹಾಗೂ ಕಾಯಕ ದೀಕ್ಷೆ ನೀಡಿ ದ್ದರು. ಇದು ಸಿದ್ಧಗಂಗಾ ಮಠದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಶ್ರೀಗಳಿಂದ ಸಿಗುತ್ತಿದ್ದ ಬಳುವಳಿ ಎಂದು ವಿವರಿಸಿದರು.
ಈ ವೇಳೆ ಕವಿಗಳಾದ ರುದ್ರೇಶ್, ಶ್ರೀ ಹರಿಪ್ರಸಾದ್, ಶ್ರೇಯಸ್, ಮುಡಿಗುಂಡ ಪುಟ್ಟಪ್ಪ, ಹೇಮಲತಾ, ಪುಷ್ಪ ಕುಮಾರ ಸ್ವಾಮಿ, ನಗರ್ಲೆ ಶಿವಕುಮಾರ್, ಓಂಕಾ ರಯ್ಯ, ಗಣೇಶ್, ಸುಮಂಗಲಾ ರವಿ, ಸೋಮಶೇಖರ್, ಲೀಲಾ ಗಿರೀಶ್, ವಿಶ್ವನಾಥ ಶಾಸ್ತ್ರಿ, ಪಂಪಾವತಿ, ಗೀತಾ ಈಶ್ವರ್, ಡಾ. ಲೀಲಾ ಪ್ರಕಾಶ್, ಡಾ.ಲೋಲಾಕ್ಷಿ, ಇಂದ್ರಾ ಪಾಟೀಲ್, ಪ್ರಭಾಕರ್ ಹೆಗ್ಗಂದೂರು ಸ್ವ ರಚಿತ ಕಾವ್ಯ ವಾಚನ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಶರಣು ವಿಶ್ವ ವಚನ ಫೌಂಡೇಷನ್ ಅಧ್ಯಕ್ಷ ವಚನ ಕುಮಾರ ಸ್ವಾಮಿ, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್‍ನ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಆ್ಯಪ್ ನಿರ್ಮಾತೃ ಸಿ.ಡಿ.ರುದ್ರೇಶ್, ರೂಪ ಕುಮಾರಸ್ವಾಮಿ, ಮೂಗೂರು ನಂಜುಂಡ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »