ಜಿಲ್ಲಾದ್ಯಂತ `ನಡೆದಾಡುವ ದೇವರ’ ಹುಟ್ಟುಹಬ್ಬ ಆಚರಣೆ
ಚಾಮರಾಜನಗರ

ಜಿಲ್ಲಾದ್ಯಂತ `ನಡೆದಾಡುವ ದೇವರ’ ಹುಟ್ಟುಹಬ್ಬ ಆಚರಣೆ

April 2, 2019

ಚಾಮರಾಜನಗರ: ನಡೆದಾಡುವ ದೇವರು, ಕಾಯಕಯೋಗಿ, ಸಿದ್ಧಗಂಗಾಶ್ರೀ ಕ್ಷೇತ್ರದ ಲಿಂಗೈಕ್ಯ ಡಾ.ಶಿವ ಕುಮಾರ ಸ್ವಾಮೀಜಿ ಅವರ 112ನೇ ಜನ್ಮದಿನವನ್ನು ಜಿಲ್ಲಾದ್ಯಂತ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಕಾಮಗೆರೆ, ಗುಂಡ್ಲುಪೇಟೆ ಸೇರಿದಂತೆ ವಿವಿಧೆಡೆ ಡಾ.ಶಿವಕುಮಾರ ಸ್ವಾಮೀಜಿಗಳ ಹುಟ್ಟುಹಬ್ಬ ಆಚರಿಸಿದ ಬಗ್ಗೆ ವರದಿಯಾಗಿದೆ.
ಅಲ್ಲದೇ ಡಾ.ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು, ಪೂಜೆ ಸಲ್ಲಿಸಿ ಗೌರವ ಸೂಚಿಸಿ, ಸಾರ್ವಜ ನಿಕರಿಗೆ ಪಾನಕ, ಮಜ್ಜಿಗೆ ಹಾಗೂ ಅನ್ನ ಸಂತರ್ಪಣೆ ಮಾಡಲಾಯಿತು.

ಚಾಮರಾಜನಗರ: ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಡಾ.ಶಿವ ಕುಮಾರ ಸ್ವಾಮೀಜಿ ಅವರ ಭಕ್ತವೃಂದ ಶ್ರೀಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಡಾ.ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಮುಡುಕನಪುರ ಮಠದ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಅವರು ಮಾಲಾರ್ಪಣೆ ಮಾಡಿದರು. ನಂತರ ಸಾರ್ವ ಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು.

ರಾಮಸಮುದ್ರದ ಶ್ರೀಗುರು ಕಂಬಳೀಶ್ವರ ಮಠದ ಶ್ರೀಮಹದೇವಸ್ವಾಮೀಜಿ, ವೀರ ಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗೇಶ್, ಕುದೇರು ಹಾಲು ಒಕ್ಕೂಟದ ನಿರ್ದೇಶಕ ಬಸವರಾಜು, ವೀರ ಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ಮುಖಂಡರಾದ ಡೈರಿ ಸ್ವಾಮಿ, ಬಿಸಿಲವಾಡಿ ಉಮೇಶ್, ಜಿಪಂ ಶಂಕರ್, ಪುಟ್ಟಸ್ವಾಮಿ, ಕಾವುದ ವಾಡಿ ಗುರು, ರಾಮಸಮುದ್ರ ಬಾಲು, ಚಂದನ್, ಎಲ್‍ಐಸಿ ಪ್ರಸಾದ್, ವಿಜಯ್ ಇತರರು ಈ ವೇಳೆ ಹಾಜರಿದ್ದರು.

ವಿರಕ್ತ ಮಠ: ನಗರದ ಜೋಡಿ ರಸ್ತೆಯಲ್ಲಿ ರುವ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಮುಂಭಾಗದಲ್ಲಿ ಸಿದ್ಧಗಂಗಾ ಶ್ರೀಗಳ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಯಿತು. ನಂತರ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.

ಡಾ.ಶಿವಕುಮಾರಸ್ವಾಮಿಗಳ ಭಕ್ತರಾದ ಹೆಚ್.ಎಸ್.ಗಿರೀಶ್, ಕೊಟ್ಟಂಬಳ್ಳಿ ವೀರಭದ್ರ ಸ್ವಾಮಿ, ಬಸವರಾಜು, ಕಾವುದವಾಡಿ ಗುರು, ರಾಮಸಮುದ್ರ ಸುರೇಶ್, ಕಾಗಲವಾಡಿ ನಾಗಣ್ಣ, ಬಿರ್ಲಾ ನಾಗರಾಜು, ಮೂಡು ಪುರ ನಂದೀಶ್, ನಂಜೇದೇವನಪುರ ಪುರುಷೋತ್ತಮ್, ಮಲ್ಲಿಕ, ಮಹದೇವಪ್ಪ, ಉಮೇಶ್, ಮೂಗೇಶ್, ಆರ್.ಪುಟ್ಟಮಲ್ಲಪ್ಪ, ಪ್ರಭು, ಕುಮಾರ್, ಹುರಳಿ ನಂಜನ ಪುರಸ್ವಾಮಿ, ಮಹದೇವಪ್ರಸಾದ್, ಸುಂದರ್, ವೃಷಭೇಂದ್ರ, ವಿದ್ಯಾಸ್ವಾಮೀಜಿ ಇತರರು ಉಪಸ್ಥಿತರಿದ್ದರು.

ಪಿಡಬ್ಲ್ಯೂಡಿ ಕಚೇರಿ ಬಳಿ: ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಪಿಡಬ್ಲ್ಯೂಡಿ ಕಚೇರಿ ಬಳಿಯ ಅರಳಿಮರದ ಬಳಿ ಡಾ.ಶಿವಕುಮಾರ ಸ್ವಾಮೀಜಿ ಅವರ 112ನೇ ಹುಟ್ಟುಹಬ್ಬ ಆಚರಿಸಲಾಯಿತು.

ಗುಂಡ್ಲುಪೇಟೆ: ಸಿದ್ಧಗಂಗಾ ಮಠಾಧೀಶ ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿಗಳ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಮಜ್ಜಿಗೆ, ಪಾನಕ ವಿತರಿಸಲಾಯಿತು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ವೃತ್ತದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ಸಿ.ಎಸ್. ನಿರಂಜನಕುಮಾರ್, ಡಾ.ಶಿವಕುಮಾರ ಸ್ವಾಮಿಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ದಾಸೋಹ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯಾವುದೇ ರೀತಿಯಲ್ಲಿಯೂ ಬೇಧಭಾವ ವಿಲ್ಲದೆ ನಾಡಿನ ಜನತೆ ನಡೆದಾಡುವ ದೇವರು ಎಂದು ಕರೆಯುವಷ್ಟು ಅಭಿಮಾನ ಗಳಿಸಿದ್ದ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಿದರೆ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರಶೈವ ಯುವ ವೇದಿಕೆಯ ಮಂಜುನಾಥ್, ನಾಗೇಂದ್ರ, ಮಂಜುನಾಥ್, ಶಂಕರಪ್ಪ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಶ್ರೀಗಳ ಅಭಿಮಾನಿಗಳು ಭಾಗವಹಿಸಿದ್ದರು.

ಕಾಮಗೆರೆ: ತ್ರಿವಿಧ ದಾಸೋಹಿ, ಕರ್ನಾ ಟಕ ರತ್ನ, ಸಿದ್ಧಗಂಗಾ ಶ್ರೀಶಿವಕುಮಾರ ಸ್ವಾಮಿಗಳು ಅನೇಕ ಶಿಕ್ಷಣ ಸಂಸ್ಥೆ, ದಾಸೋಹಗಳನ್ನು ತೆರೆದು ಲಕ್ಷಾಂತರ ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ ಎಂದು ಕಾಮಗೆರೆ ಪಟ್ಟದ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಶ್ರೀ ಬಸವ ಬಳಗ ಸಂಘದ ವತಿ ಯಿಂದ ಹಮ್ಮಿಕೊಂಡಿದ್ದ ಶ್ರೀಶಿವಕುಮಾರ ಸ್ವಾಮಿಗಳ 112ನೇ ಜಯಂತ್ಯುತ್ಸವದ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಸಿದ್ಧಗಂಗಾ ಶ್ರೀಶಿವಕುಮಾರ ಸ್ವಾಮೀಜಿ ಗಳು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ. ಅವರ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾವಂತರು ಇಂದು ದೇಶ ವಿದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದರು.

ಜಾತಿ ಧರ್ಮ ಮೀರಿದ ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮಿಗಳ ತತ್ವಾ ದರ್ಶ ಪ್ರತಿಯೊಬ್ಬರಿಗೂ ಮಾದರಿಯಾಗಲಿ ಎಂದರು. ಶ್ರೀ ಶಿವಕುಮಾರ ಸ್ವಾಮಿಗಳು 112 ಜಯಂತೋತ್ಸವದ ಪ್ರಯುಕ್ತ ಪಾನಕ, ಮಜ್ಜಿಗೆ, ಹೆಸರುಬೆಳೆ ವಿತರಿಸಲಾಯಿತು.
ಈ ವೇಳೆ ಭಿಕ್ಷ ಮಠದ ಶ್ರೀ ಪ್ರಕಾಶ ಸ್ವಾಮಿಗಳು, ಗೌ.ಪ್ರಭುಸ್ವಾಮಿ, ಗ್ರಾಪಂ ಸದಸ್ಯ ಮಂಜುನಾಥಸ್ವಾಮಿ, ನಟೇಶ್, ಸಿದ್ದಪ್ಪ, ಬಸವರಾಜು, ಶಾಂತಮೂರ್ತಿ, ಟೈಲರ್ ಗುರು, ಕೆಬಿ.ಮಧು, ಕಾರಗಿ ಮಲ್ಲಿಕಾ, ಉಮೇಶ್, ಮಹಾದೇವಸ್ವಾಮಿ, ನಾಗರಾಜು, ಮೂರ್ತಿ, ಗುರುಸ್ವಾಮಿ, ಮಲಪ್ಪ, ಚೇತನ್, ಕಿರಣ್, ಅಭಿ, ಬಸವ ಇನ್ನಿತರರಿದ್ದರು.

Translate »