ವಿಶೇಷಚೇತನರ ಮತದಾನಕ್ಕೆ ಮೂಲಸೌಕರ್ಯ ಕಲ್ಪಿಸಿ ಆಕ್ಸೆಸಿಬಿಲಿಟಿ ವೀಕ್ಷಕ ಟಿ.ಕೆ.ಅನಿಲ್‍ಕುಮಾರ್ ಸೂಚನೆ
ಚಾಮರಾಜನಗರ

ವಿಶೇಷಚೇತನರ ಮತದಾನಕ್ಕೆ ಮೂಲಸೌಕರ್ಯ ಕಲ್ಪಿಸಿ ಆಕ್ಸೆಸಿಬಿಲಿಟಿ ವೀಕ್ಷಕ ಟಿ.ಕೆ.ಅನಿಲ್‍ಕುಮಾರ್ ಸೂಚನೆ

April 2, 2019

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಸ್ಥಾಪಿಸ ಲಾಗುವ ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಚೇತನರಿಗೆ ಮತದಾನ ಮಾಡಲು ಅನುಕೂಲ ವಾಗುವಂತೆ ಸಮರ್ಪಕ ಮೂಲಸೌಕರ್ಯ ಒದಗಿಸುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಆಕ್ಸೆಸಿಬಿಲಿಟಿ ವೀಕ್ಷಕ ಟಿ.ಕೆ.ಅನಿಲ್ ಕುಮಾರ್ ಸೂಚಿಸಿದರು.

ನಗರದ ಜಿಪಂ ಮುಖ್ಯ ಕಾರ್ಯ ನಿರ್ವಾ ಹಕ ಅಧಿಕಾರಿಗಳ ಸಭಾಂಗಣದಲ್ಲಿಂದು ವಿಶೇಷಚೇತನರಿಗೆ ಮತಗಟ್ಟೆಗಳಲ್ಲಿ ಕಲ್ಪಿಸ ಲಾಗುತ್ತಿರುವ ಸೌಕರ್ಯಗಳು ಹಾಗೂ ಮತದಾನ ಸಿದ್ಧತೆ ಸಂಬಂಧ ಸಭೆ ನಡೆಸಿ ಅವರು ಮಾತನಾಡಿದರು.

ಮತಗಟ್ಟೆಗಳಲ್ಲಿ ರ್ಯಾಂಪ್, ವಿದ್ಯುತ್ ಸಂಪರ್ಕ, ನೀರು, ಶೌಚಾಲಯ ಸೇರಿದಂತೆ ಎಲ್ಲಾ ಸೌಲಭ್ಯಗಳು ಸರಿ ಇದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ದುರಸ್ತಿ ಇದ್ದಲ್ಲಿ ತಕ್ಷಣವೇ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಕನಿಷ್ಠ 2 ವಿಶೇಷಚೇತನರ ಮತಗಟ್ಟೆ ಸ್ಥಾಪಿಸಬೇಕು. ಲಭ್ಯವಿರುವ ವಿಆರ್‍ಡಬ್ಲ್ಯೂ, ಎಂಆರ್‍ಡಬ್ಲ್ಯೂ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ ಸಹಕಾರ ಪಡೆಯಬೇಕು, ಚುನಾವಣಾ ಆಪ್ ಹಾಗೂ 1950 ಟೋಲ್ ಫ್ರೀ ಸಂಖ್ಯೆಗೆ ಬರುವ ವಿಕಲಚೇತನರ ಸೌಲಭ್ಯ, ಬೇಡಿಕೆ ಗಳನ್ನು ಪರಿಶೀಲಿಸಿ ಅಗತ್ಯ ಮಾಹಿತಿ ಹಾಗೂ ಲಭ್ಯವಿರುವ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ನೀಡುವಂತೆ ಸೂಚಿಸಿದರು.

ಎಲ್ಲಾ ಮತಗಟ್ಟೆಗಳಲ್ಲಿ ವಿಕಲಚೇತನ ರಿಗೆ ಮತ್ತು ವಯೋವೃದ್ಧರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಮ್ಯಾಗ್ನಿ ಫೈಯಿಂಗ್ ಗ್ಲಾಸ್ ವ್ಯವಸ್ಥೆ ಮಾಡಬೇಕು. ಎಲ್ಲಾ 980 ಮತಗಟ್ಟೆಗಳಲ್ಲಿ ಗಾಲಿ ಖುರ್ಚಿ ವ್ಯವಸ್ಥೆ ಮಾಡಬೇಕು. ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಈ ಎಲ್ಲಾ ವ್ಯವಸ್ಥೆ ಇರ ಬೇಕು. ಮತಗಟ್ಟೆಗೆ ನಡೆದುಕೊಂಡು ಹೋಗಲು ಸಾಧ್ಯವಾಗದ ವಿಕಲಚೇತನರಿಗೆ, ವಯೋ ವೃದ್ಧರಿಗೆ ವಾಹನಗಳ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ವಹಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತ ನಾಡಿ, ಪ್ರಾದೇಶಿಕ ಆಯುಕ್ತರು ನೀಡಿರುವ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು. ಯಾವುದೇ ಬಾಕಿ ಸಿದ್ಧತಾ ಕೆಲಸಗಳು ಇದ್ದಲ್ಲಿ ತಕ್ಷಣವೇ ಪೂರ್ಣಗೊಳಿಸಿ ವರದಿ ಸಲ್ಲಿಸ ಬೇಕು ಎಂದರು. ಜಿಪಂ ಸಿಇಓ ಕೆ.ಎಸ್. ಲತಾಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ವಿಶೇಷಚೇತನರಿಗೆ ಮತದಾನ ಮಾಡಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ವಿವರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಿಪಂ ಉಪಕಾರ್ಯದರ್ಶಿ ಹನುಮನರಸಯ್ಯ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮೂಲಿಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳ, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »