ಸಿದ್ಧಗಂಗಾ ಶ್ರೀಗಳ ಜಯಂತಿ: 54 ಮಂದಿ ಸ್ವಯಂ ಪ್ರೇರಿತ ರಕ್ತದಾನ
ಚಾಮರಾಜನಗರ

ಸಿದ್ಧಗಂಗಾ ಶ್ರೀಗಳ ಜಯಂತಿ: 54 ಮಂದಿ ಸ್ವಯಂ ಪ್ರೇರಿತ ರಕ್ತದಾನ

April 2, 2019

ಕೊಳ್ಳೇಗಾಲ: ಸಿದ್ಧಗಂಗಾ ಶ್ರೀಗಳ ಜಯಂತಿ ಅಂಗವಾಗಿ ಜೆಎಸ್‍ಬಿ ಪ್ರತಿಷ್ಠಾನ, ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 54ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಕಾರ್ಯಕ್ರಮಕ್ಕೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ ಚಾಲನೆ ನೀಡಿ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಬದುಕಿನುದ್ದಕ್ಕೂ ಸಮಾಜದ ಉದ್ಧಾರಕ್ಕೆ ಶ್ರಮಿಸಿದವರು. ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆ ತಂದವರು ಎಂದು ಗುಣಗಾನ ಮಾಡಿದರು.

ಸಿದ್ದಲಿಂಗೇಶ್ವರ ಮೆಡಿಕಲ್ ಮಾಲೀಕ ಮಹದೇವಸ್ವಾಮಿ ಮತ್ತು ಪತ್ನಿ ಶಿಲ್ಪ ರಕ್ತದಾನ ಮಾಡಿದರು. ಅಚ್ಚಗಾಳ ವಸತಿ ಗೃಹÀದ ಮ್ಯಾನೇಜರ್ ಮಹದೇವಸ್ವಾಮಿ, ದೀಪಾ ಪ್ರವೀಣ್, ಸೋಮಶೇಖರ್, ಲಿಂಗಣಾಪುರ ರಾಜು, ವೃಷಭೆÉೀಂದ್ರ, ಬಾಬು, ಗುರುಕುಲ ಐಟಿಐ, ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್ ಎಸ್ ವಿದ್ಯಾರ್ಥಿ ಗಳು ಸೇರಿದಂತೆ 56ಮಂದಿ ರಕ್ತದಾನದಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡರು.

ಈ ವೇಳೆ ಚಾ.ನಗರ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ಸುಜಾತ, ಹಿರಿಯ ವಕೀಲ ಡಿ.ವೆಂಕಟಾಚಲ, ಐಟಿಐ ಕಾಲೇಜಿನ ಪ್ರಾಂಶುಪಾಲ ಮಹದೇವಪ್ರಸಾದ್, ದಿವ್ಯ ಜ್ಞಾನ ಮಂದಿರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವೀರಭದ್ರಯ್ಯ, ರಕ್ತ ನಿಧಿಕೇಂದ್ರ ವ್ಯವಸ್ಥಾಪಕಿ ಕೋಮಲ, ಜಾಗತಿಕ ಲಿಂಗಾಯತ ಮಹಾಸಭಾ ಸಂಚಾಲಕ ವೀರ ಭದ್ರಯ್ಯ, ಎ.ನಾಗರಾಜು, ನಾಗೇಂದ್ರಸ್ವಾಮಿ, ಜೆಎಸ್‍ಬಿ ಪ್ರತಿಷ್ಠಾನದ ಮುಡಿಗುಂಡ ಪ್ರಸಾದ್, ಬೂದಿತಿಟ್ಟು ಲೋಕೇಶ್, ಶಿವಕುಮಾರ್, ಮಹದೇವಪ್ಪ ಇನ್ನಿತರರಿದ್ದರು.

Translate »