ಕೆ.ಆರ್.ನಗರ ಸಮಗ್ರ ಅಭಿವೃದ್ಧಿಗೆ ನಿಖಿಲ್ ಗೆಲುವು ಅಗತ್ಯ
ಮೈಸೂರು

ಕೆ.ಆರ್.ನಗರ ಸಮಗ್ರ ಅಭಿವೃದ್ಧಿಗೆ ನಿಖಿಲ್ ಗೆಲುವು ಅಗತ್ಯ

April 2, 2019

ಚುಂಚನಕಟ್ಟೆ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್‍ರನ್ನು ಗೆಲ್ಲಿಸುವ ಮೂಲಕ ಕೆ.ಆರ್.ನಗರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮತದಾರರು ಸಹಕಾರ ನೀಡಬೇಕು ಎಂದು ಪ್ರವಾಸೋದ್ಯಮ, ರೇಷ್ಮೆ ಸಚಿವ ಸಾ.ರಾ.ಮಹೇಶ್ ಕೋರಿದರು.

ತಾಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್‍ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದ ಅವರು, ಈಗಾಗಲೇ ಕುಮಾರಸ್ವಾಮಿ ಸಾಲಮನ್ನಾ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ಜೆಡಿಎಸ್ ಬೆಂಬಲಿಸಬೇಕು. ಈಗಾಗಲೇ ತಾಲೂಕಿನ ಅಭಿವೃದ್ಧಿಗೆ ತಾವು ಸಚಿವರಾದ ಮೇಲೆ 800 ಕೋಟಿ ರೂ.ಗಳಷ್ಟು ಅನುದಾನ ಬಿಡುಗಡೆ ಮಾಡಿಸಿದ್ದು, ನಿಖಿಲ್ ಸಂಸದರಾದರೆ ಅವರ ಅನುದಾನದ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ಶ್ರಮ ವಹಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಇರುವ ಸಮ್ಮಿಶ್ರ ಸರ್ಕಾರದ ಸಾಧನೆಗಳನ್ನು ತಾಲೂಕಿನ ಪ್ರತಿ ಮತದಾರರಿಗೂ ಮನದಟ್ಟು ಮಾಡಿಕೊಟ್ಟು ಜೆಡಿಎಸ್‍ಗೆ ಹೆಚ್ಚಿನ ಮತ ಕೊಡಿಸುವ ಮೂಲಕ ನಿಖಿಲ್ ಗೆಲುವಿಗೆ ಕಾರ್ಯಕರ್ತರು ಹಗಲು-ರಾತ್ರಿ ದುಡಿಯಬೇಕು ಎಂದು ಮನವಿ ಮಾಡಿದರು.

ಸಚಿವರು ನಂತರ ಚುಂಚನಕಟ್ಟೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಿಖಿಲ್‍ಪರವಾಗಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಮತಯಾಚಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಟಿಎಪಿಸಿಎಂಎಸ್ ನಿರ್ದೇಶಕ ಎಸ್.ಟಿ.ಕೀರ್ತಿ, ಹೊಸೂರು ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್.ಮಹೇಶ್, ಉದ್ಯಮಿ ಹೆಚ್.ಕೆ.ಮದುಚಂದ್ರ, ಯುವ ಜೆಡಿಎಸ್ ಅಧ್ಯಕ್ಷ ಹೆಚ್.ಆರ್.ಮಧುಚಂದ್ರ, ಕುಪ್ಪೆ ಗ್ರಾಪಂ ಅಧ್ಯಕ್ಷೆ ಪ್ರೇಮಕುಮಾರ್, ಮಾಜಿ ಅಧ್ಯಕ್ಷ ಸಿ.ವಿ.ಮಂಜುನಾಥ್, ಮಾಜಿ ಸದಸ್ಯ ಸಿ.ಜೆ.ಮಧು, ಹಳಿಯೂರು ಗ್ರಾಪಂ ಉಪಾಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಸದಸ್ಯ ಹೆಚ್.ಜೆ.ರಮೇಶ್, ಭೂ ನ್ಯಾಯ ಮಂಡಳಿ ಸದಸ್ಯ ಬಿ.ರಮೇಶ್, ಮುಖಂಡ ಸಾಲಿಗ್ರಾಮ ಅಯಾಜ್‍ಪಾಷ, ಅರಕೆರೆ ಕೃಷ್ಣ, ಕೇಬಲ್‍ಮಂಜು, ಮಿಠಾಯಿಲೋಕೇಶ್, ಯೋಗಣ್ಣ, ಶನಿಕುಮಾರ್, ನಿವೃತ್ತ ಎಎಸ್‍ಐ ನಾಗರಾಜನಾಯಕ, ಚಿಕ್ಕನಾಯಕನಹಳ್ಳಿಉಮೇಶ್, ಸೇರಿದಂತೆ ಮತ್ತಿತರರಿದ್ದರು.
ಚುಂಚನಕಟ್ಟೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಿಖಿಲ್ ಪರ ಜೆಡಿಎಸ್ ಕಾರ್ಯಕರ್ತರೊಂದಿಗೆ ಸಚಿವ ಸಾ.ರಾ.ಮಹೇಶ್ ಮತ ಯಾಚಿಸಿದರು

Translate »