ಕೊರೊನಾ ಮುಕ್ತ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಶ್ರೀರಾಮನವಮಿ ಆಚರಣೆ
ಮೈಸೂರು

ಕೊರೊನಾ ಮುಕ್ತ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಶ್ರೀರಾಮನವಮಿ ಆಚರಣೆ

April 24, 2021

ಮೈಸೂರು, ಏ. 23- ಮೈಸೂರಿನ ವಿವೇಕಾನಂದನಗರ ವೃತ್ತದಲ್ಲಿ ಶ್ರೀರಾಮ ನವಮಿಯ ಅಂಗವಾಗಿ ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ವಿ.ಕೆ.ಎಸ್ ಫೌಂಡೇಶನ್ ವತಿಯಿಂದ ಸಾರ್ವಜನಿ ಕರು ತಮ್ಮನ್ನು ಕೊರೊನಾದಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ನಿಯಮಾನುಸಾರ ಪಾಲಿಸುವಂತೆ “ಮಾಸ್ಕ್ ಧರಿಸಿ ಕೊರೊನಾ ಓಡಿಸಿ” ಕೊರೊನಾ ಮುಕ್ತ ಪ್ರತಿಜ್ಞಾವಿಧಿಯನ್ನು ಪದಾಧಿ ಕಾರಿಗಳು ಸ್ವೀಕರಿಸುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಮಾತ ನಾಡಿ, ಮೈಸೂರು ಕೊರೊನಾ ಮುಕ್ತ ಮಾಡಲು ಪ್ರತಿಯೊಬ್ಬ ನಾಗರಿಕನೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕಿದೆ. ಹಿರಿಯ ನಾಗರಿಕರು ಮತ್ತು ಸಣ್ಣಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ವಹಿಸ ಬೇಕು. ಕೋವಿಡ್ ಲಸಿಕೆ ಪಡೆದುಕೊಳ್ಳಲು ಸ್ಥಳೀಯ ಆರೋಗ್ಯ ಪ್ರಾಥಮಿಕ ಕೇಂದ್ರಗಳು ಆಸ್ಪತ್ರೆ ಲಸಿಕಾ ಘಟಕಗಳಿಗೆ ಭೇಟಿ ನೀಡ ಬೇಕು. ವಿವೇಕಾನಂದನಗರ, ಅರವಿಂದನಗರ ಬಡಾವಣೆಯ ನಿವಾಸಿಗಳಿಗೆ ಕೋವಿಡ್ ಲಸಿಕೆ ಪಡೆಯಲು ಆಸ್ಪತ್ರೆಗೆ ತೆರಳಲು ಸಂಚಾರಿ ವ್ಯವಸ್ಥೆಗೆ ಸಹಾಯವಾಗುವಂತೆ ರಾಷ್ಟ್ರೀಯ ಹಿಂದೂ ಸಮಿತಿಯ ವತಿಯಿಂದ ಸಹಾಯವಾಣಿ ಯುವಕರ ತಂಡ ರಚಿಸ ಲಾಗಿದೆ. ಇದರ ಉಪಯೋಗ ಪಡೆಯಲು ಹಿರಿಯ ನಾಗರಿಕರು 7406224633 ಸಂಪ ರ್ಕಿಸಬಹುದು ಎಂದರು. ಯುವ ಮುಖಂಡ ರಾದ ಅಜಯ್ ಶಾಸ್ತ್ರಿ, ಬಿಜೆಪಿ ಮುಖಂಡ ಮಂಜುನಾಥ್, ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ, ನವೀನ್ ಕೆಂಪಿ, ಮಹೇಶ್, ಪ್ರದೀಪ್, ಗಗನ್, ಮನೋಜ್, ಚೇತನ್, ಮಲ್ಲಿಕಾರ್ಜುನ, ಕಾರ್ತಿಕ್ ಇನ್ನಿತರರು ಇದ್ದರು.

ಶ್ರೀ ರಾಮನವಮಿ: ಕೊರೊನಾ ಜಾಗೃತಿ ಅಭಿಯಾನ
ಮೈಸೂರು,ಏ.23-ಶ್ರೀ ರಾಮನವಮಿ ಅಂಗವಾಗಿ ಕೃಷ್ಣರಾಜ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಹಾಲು ಮತ್ತು ತರಕಾರಿಯುಳ್ಳ ಕಿಟ್‍ಗಳನ್ನು ವಿತರಿಸುವ ಮುಖಾಂ ತರ ಕೊರೊನಾ ಅರಿವು ಅಭಿಯಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್‍ಕುಮಾರ್, ಎಂ.ರಾಜೇಶ್, ಬಸವಣ್ಣ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಹ್ಯಾರಿಸ್, ಸೈಯದ್ ಅಬ್ಬಾಸ್, ಪವನ್ ಸಿದ್ದರಾಮ, ಭರತ್, ಸ್ಥಳೀಯರಾದ ಹರೀಶ್,ಮನೋಜ್ ಇತರರಿದ್ದರು.

Translate »