ಜೂ.25ರಿಂದ ಜು.4ರವರೆಗೆ SSLC ಪರೀಕ್ಷೆ
ಮೈಸೂರು

ಜೂ.25ರಿಂದ ಜು.4ರವರೆಗೆ SSLC ಪರೀಕ್ಷೆ

May 19, 2020

ಬೆಂಗಳೂರು, ಮೇ 18(ಕೆಎಂಶಿ)-ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂನ್ 25ರಿಂದ ಜುಲೈ 4 ರವರೆಗೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ದ್ವಿತೀಯ ಪಿಯುಸಿ ಇಂಗ್ಲಿಷ್ ಪತ್ರಿಕೆ ಪರೀಕ್ಷೆ ಜೂನ್ 18 ರಂದು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಪ್ರಕಟಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳಿಗೆ ಒಂದು ದಿನದ ಅಂತರ ಕಲ್ಪಿಸಿದ್ದೇವೆ ಎಂದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾರ್ಚ್ 27ರಿಂದ ಏಪ್ರಿಲ್ 9 ರವರೆಗೆ ನಿಗದಿಯಾಗಿತ್ತು, ಪಿಯುಸಿ ಇಂಗ್ಲಿಷ್ ಪರೀಕ್ಷೆ ಮಾ.23ರಂದೇ ನಡೆಸಬೇಕಿತ್ತು. ಕೊರೊನಾ ಮಹಾಮಾರಿಯಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಲು ಸಾಧ್ಯವಾಗಲಿಲ್ಲ. ಶಿಕ್ಷಣ ತಜ್ಞರು ಹಾಗೂ ಹಿರಿಯರ ಅಭಿಪ್ರಾಯ ಪಡೆದು, ಈ ಪರೀಕ್ಷೆಗಳನ್ನು ಮಾಡುವ ತೀರ್ಮಾನ ಕೈಗೊಂಡಿದ್ದೇವೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹೆಚ್ಚುವರಿ ಕೊಠಡಿ ಪಡೆದು, ಪರೀಕ್ಷೆ ನಡೆಸಲಾಗುವುದು.

2879 ಪರೀಕ್ಷಾ ಕೇಂದ್ರಗಳಲ್ಲಿ 43,720 ಕೊಠಡಿಗಳನ್ನು ಪರೀಕ್ಷೆಗೆ ಬಳಕೆ ಮಾಡಿಕೊಳ್ಳುತ್ತೇವೆ. ಈ ಬಾರಿ 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಆರೋಗ್ಯ ಇಲಾಖೆಯ ಸಲಹೆಯಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಪ್ರತಿ ಪರೀಕ್ಷಾ ಸಭಾಂಗಣದಲ್ಲಿ ವಿದ್ಯಾರ್ಥಿಗಳ ನಡುವೆ ಶಾರೀರಿಕ ಅಂತರ ಕಾಯ್ದುಕೊಂಡು ಆಸನಗಳ ವ್ಯವಸ್ಥೆ ಮಾಡುತ್ತೇವೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಪ್ರತಿ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ನೀಡಲಿದೆ. ಬನ್ನೇರು ಘಟ್ಟದ ರಾಮಕೃಷ್ಣ ಮಿಷನ್ ಎರಡು ಲಕ್ಷ ಮಾಸ್ಕ್ ವಿತರಿಸಲಿದೆ. ಪ್ರತಿ ವಿದ್ಯಾರ್ಥಿಗೆ 2 ಮಾಸ್ಕ್ ದೊರೆಯುವಂತೆ ನೋಡಿಕೊಳ್ಳಲಾಗುವುದು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಕೊಡಲು ಎಂಬಸಿ ಕಂಪನಿ ಮುಂದಾಗಿದೆ. ಥರ್ಮಲ್ ಸ್ಕ್ಯಾನರ್ ಮೂಲಕ ಪ್ರತಿ ವಿದ್ಯಾರ್ಥಿ ತಪಾಸಣೆ ಮಾಡುತ್ತೇವೆ, ಕೊಠಡಿ ಸ್ವಚ್ಛತೆಗೂ ಆದ್ಯತೆ ಕೊಟ್ಟಿದ್ದೇವೆ. ಆರೋಗ್ಯ ಸಮಸ್ಯೆ ಇದ್ದರೆ, ಅಂತಹ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡ ಲಾಗುವುದು. ಚಂದನ ವಾಹಿನಿಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪುನರ್ ಮನನ ಕ್ಲಾಸ್ ನಡೆಸುತ್ತೇವೆ ಎಂದರು. ಮೌಲ್ಯ ಮಾಪನಕ್ಕೆ ಒಂದು ತಿಂಗಳು ಅವಕಾಶ ಬೇಕಾಗಿದ್ದು, ಅದರ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಜೂನ್1ರಿಂದ ಅಃSಇ 12ನೇ ತರಗತಿ ಪರೀಕ್ಷೆ
ನವದೆಹಲಿ: ಲಾಕ್‍ಡೌನ್‍ನಿಂದಾಗಿ ಮುಂದೂಡಲ್ಪಟ್ಟಿದ್ದ 12ನೇ ತಗತಿಯ ಸಿಬಿಎಸ್‍ಇ ಪರೀಕ್ಷೆಯನ್ನು ಕೊನೆಗೂ ಹೆಚ್‍ಆರ್‍ಡಿ ಸಚಿವಾಲಯ ನಿಗದಿ ಮಾಡಿದೆ. ಜೂನ್ 1ರಿಂದ 15ರವರೆಗೆ ನಡೆಸಲಾಗುತ್ತಿದೆ ಎಂದು ಕೇಂದ್ರ ಹೆಚ್‍ಆರ್‍ಡಿ ಸಚಿವ ರಮೇಶ್ ಪೆÇಕ್ರಿಯಾಳ್ ತಿಳಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪೆÇಕ್ರಿಯಾಳ್, ಲಾಕ್‍ಡೌನ್ ನಿಂದಾಗಿ ಸಿಬಿಎಸ್‍ಇಯ 12ನೇ ತರಗತಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡ ಲ್ಪಟ್ಟಿತ್ತು. ಇಂತಹ ಪರೀಕ್ಷೆಗಳನ್ನು ಜೂ.1ರಿಂದ 15ರವರೆಗೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪರೀಕ್ಷಾ ವೇಳಾಪಟ್ಟಿ: ಜುಲೈ 1, 2020 ಬುಧವಾರ ಬೆಳಿಗ್ಗೆ 10.30ರಿಂದ 1.30ರವರೆಗೆ ಹೋಂ ಸೈನ್ಸ್, ಜುಲೈ 2, 2020ರ ಗುರುವಾರ ಬೆಳಿಗ್ಗೆ 10.30ರಿಂದ 1.30ಕ್ಕೆ ಹಿಂದಿ ಎಲೆಕ್ಟಿವ್, ಹಿಂದಿ ಕೋರ್, ಜುಲೈ 3, 2020ರ ಶುಕ್ರವಾರ ಬೆಳಿಗ್ಗೆ 10.30ರಿಂದ 1.30ಕ್ಕೆ ಫಿಸಿಕ್ಸ್, ಜುಲೈ 4, 2020ರ ಶನಿವಾರ ಬೆಳಿಗ್ಗೆ 10.30ರಿಂದ 1.30ಕ್ಕೆ ಅಕೌಂಟೆನ್ಸಿ, ಜುಲೈ 6, 2020ರ ಸೋಮವಾರ ಬೆಳಿಗ್ಗೆ 10.30ರಿಂದ 1.30ಕ್ಕೆ ಕೆಮಿಸ್ಟ್ರಿ, ಜುಲೈ 7, 2020ರ ಮಂಗಳವಾರ ಬೆಳಿಗ್ಗೆ 10.30ರಿಂದ 1.30ಕ್ಕೆ ಇನ್ಫರ್ಮೇಷನ್ ಪ್ರಾಕ್(ನ್ಯೂ), ಕಂಪ್ಯೂಟರ್ ಸೈನ್ಸ್(ನ್ಯೂ), ಇನ್ಫಾರ್ಮೇಷನ್ ಪ್ರಾಕ್(ಓಲ್ಡ್), ಕಂಪ್ಯೂಟರ್ ಸೈನ್ಸ್ (ಓಲ್ಡ್) ಇನ್ಪಾರ್ಮೇಷನ್ ಟೆಕ್, ಜುಲೈ 8, 2020ರ ಬುಧವಾರ ಬೆಳಿಗ್ಗೆ 10.30ರಿಂದ 1.30ಕ್ಕೆ ಇಂಗ್ಲಿಷ್ ಎಲೆಕ್ಟೀವ್ -ಎನ್, ಇಂಗ್ಲೀಷ್ ಎಲೆಕ್ಟೀವ್-ಸಿ, ಇಂಗ್ಲೀಷ್ ಕೋರ್, ಜುಲೈ 9, 2020ರ ಗುರುವಾರ ಬೆಳಿಗ್ಗೆ 10.30ರಿಂದ 1.30ರವರೆಗೆ ಬ್ಯುಸಿನೆಸ್ ಸ್ಟಡೀಸ್, ಜುಲೈ 10, 2020ರ ಶುಕ್ರವಾರ ಬೆಳಿಗ್ಗೆ 10.30ರಿಂದ 1.30ರವರೆಗೆ ಬಯೋಟೆಕ್ನಾಲಜಿ, ಜುಲೈ 11, 2020ರ ಶನಿವಾರ ಬೆಳಿಗ್ಗೆ 10.30ರಿಂದ 1.30ರವರೆಗೆ ಜಿಯೋಗ್ರಾಫಿ, ಜುಲೈ 13, 2020ರ ಸೋಮವಾರ ಬೆಳಿಗ್ಗೆ 10.30ರಿಂದ 1.30ರವರೆಗೆ ಸೋಷಿಯಲ್ ಸೈನ್ಸ್, ಜುಲೈ 14, 2020ರ ಮಂಗಳವಾರ ಬೆಳಿಗ್ಗೆ 10.30ರಿಂದ 1.30ರವರೆಗೆ ಪೆÇಲಿಟಿಕಲ್ ಸೈನ್ಸ್, ಜುಲೈ 15, 2020ರ ಬುಧವಾರ ಬೆಳಿಗ್ಗೆ 10.30ರಿಂದ 1.30ರವರೆಗೆ ಮ್ಯಾಥಮೇಟಿಕ್, ಎಕಾನಾಮಿಕ್ಸ್, ಇತಿಹಾಸ, ಬಯೋಲಾಜಿ.

Translate »